SUDDILIVE || SHIVAMOGGA
ಶಾರೀಕ್ ಗೆ 10 ವರ್ಷ ಶಿಕ್ಷೆ ಸ್ವಾಗತಾರ್ಹ-ಶಾಸಕ ಚೆನ್ನಿ-10-year sentence for Shariq is welcome - MLA Chenni
ಶಿವಮೊಗ್ಗದ ಟ್ರಯಲ್ ಬ್ಲಾಸ್ಟ್ ನಲ್ಲಿ ಶಾರೀಕ್ ಗೆ ಶಿಕ್ಷೆಯಾಗಿದ್ದು, ಬ್ರದರ್ ಎಂದು ಕರೆದಿದ್ದ ಕಾಂಗ್ರೆಸ್ ಈ ಬಗ್ಗೆ ಏನು ಹೇಳಲಿದೆ ಎಂದು ಶಾಸಕ ಚೆನ್ನಿ ಸವಾಲು ಎಸೆದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತೀರ್ಥಹಳ್ಳಿಯ ಶಾರೀಕ್ ಶಿವಮೊಗ್ಗದ ತುಂಗ ನದಿಯಲ್ಲಿ ಟ್ರಯಲ್ ಬ್ಲಾಸ್ಟ್ ಮಾಡ್ತಾನೆ. ಶಿವಮೊಗ್ಗ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದೆ. ಶಾರೀಕ್ ಈ ರೀತಿ ಭಯೋತ್ಪಾದಕ ಕೃತ್ಯಯಲ್ಲಿ ಗುರುತಿಸಿಕೊಂಡಾಗ ಕಾಂಗ್ರೆಸ್ ಆತನನ್ನ ಬ್ರದರ್ ಎಂದು ಕರೆದಿತ್ತು. ಈಗ ಶಿಕ್ಷೆಯಾಗಿದೆ. ಕಾಂಗ್ರೆಸ್ ಏನು ಹೇಳಲಿದೆ ಎಂದು ಪ್ರಶ್ನಿಸಿದರು.
ಹರ್ಷ ಹಿಂದೂ ಕಗ್ಗೊಲೆ ಮತ್ತು ಪ್ರೇಮ್ ಕುಮಾರ್ ಚಾಕು ಇರಿತ ಪ್ರಕರಣದ ನಂತರ ಈ ಟ್ರಯಲ್ ಬ್ಲಾಸ್ಟ್ ಬಹಿರಂಗ ಗೊಂಡಿದೆ. ಹರ್ಷ ಮತ್ತು ಪ್ರೇಮ್ ಕುಮಾರ್ ಪ್ರಕರಣ ನಡೆಯದೆ ಇದ್ದಿದ್ದರೆ ಇವರೆಲ್ಲಾ ಸೇಪ್ ಆಗಿಬಿಡುತ್ತಿದ್ದರು. ಶಾರೀಕ್ ಗೆ ಶಿಕ್ಷೆಯಾಗಿರುವುದಕ್ಕೆ ಶಾಸಕರು ಸ್ವಾಗತಿಸಿದರು ಎಂದು ಹೇಳಿದರು.
10-year sentence for Shariq is welcome - MLA Chenni
