SUDDILIVE ||SHIVAMOGGA
ಆನಂದಪುರ ಆಸ್ಪತ್ರೆಯ ಮುಂಭಾಗದಲ್ಲಿ ನಡೆದುಕೊಂಡು ಹೋಗುವಾಗ ಹಿಟ್ ಅಂಡ್ ರನ್-ಪಾದಚಾರಿ ಸಾವು-Hit-and-run-Pedestrian killed while walking in front of Anandpur Hospital
ಸಾಗರ ತಾಲೂಕಿನ ಆನಂದಪುರದ ಆಸ್ಪತ್ರೆಯ ಮುಂಭಾಗ ಮುಖ್ಯ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅಪಚಿತ ಬೈಕ್ ಗುದ್ದಿ ತೋಳಿಕಲ್ ಶೇಖರಪ್ಪ ಎನ್ನುವವರು ತೀವ್ರ ರಕ್ತಸ್ರಾವವಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದರು.
ನಂತರ ತುರ್ತು ಚಿಕಿತ್ಸೆ ಅಗತ್ಯವಿದೆ ಎಂದು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಶೇಖರಪ್ಪ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಸಿಗದ ಬೈಕ್ ಸವಾರ :- ಹಿಂಬದಿಂದ ನಡೆದುಕೊಂಡು ಹೋಗುತ್ತಿದ್ದ ಶೇಖರಪ್ಪ ಎನ್ನುವವರಿಗೆ ಪರಿಚಿತ ಬೈಕ್ ಸವಾರ ಗುದ್ದಿ ಪರಾರಿಯಾಗಿದ್ದು, ಇದುವರೆಗೂ ಪತ್ತೆಯಾಗಿಲ್ಲ.
ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪರಿಚಿತ ವಾಹನ ಗುದ್ದಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವು...!!!
Hit-and-run-Pedestrian killed while walking in front of Anandpur Hospital
