SUDDILIVE || BHADRAVATHI
ಗೋಂದಿ ಚಾನೆಲ್ ನಲ್ಲಿ ಶಿವಮೊಗ್ಗದ ಯುವಕ ಶವವಾಗಿ ಪತ್ತೆ-A young man from Shimoga was found dead on Gondi Channel
ಶಿವಮೊಗ್ಗದಿಂದ ಭದ್ರಾವತಿಯ ಗೋಂದಿ ಚಾನೆಲ್ ಗೆ ಸ್ನೇಹಿತರೊಂದಿಗೆ ಈಜಲು ಬಂದು ಸಾವನ್ನಪ್ಪಿರುವ ಘಟನೆ ಎರಡು ದಿನಗಳ ಹಿಂದೆ ನಡೆದಿದೆ.
ಶಿವಮೊಗ್ಗದ ಬಸನಗುಡಿ ನಿವಾಸಿಯಾದ ಜಿತೇಂದ್ರಯಾನೆ ಜೀವನ್ 34 ವರ್ಷದ ಯುವಕ ಸ್ನೇಹಿತರೊಂದಿಗೆ ಏಪ್ರಿಲ್ 20ರಂದು ಯಶ್ವಂತ್ ಸುಹೇಲ್ ಮತ್ತು ಪ್ರವೀಣ್ ಜೊತೆಗೆ ಗಾಂಧಿಯ ಚಾನೆಲ್ ನಲ್ಲಿ ಈಜಲು ತೆರಳಿದ್ದರು.
ಈಜುಲು ಹೋದ ಜೀವನ್ ನೀರು ಪಾಲಾಗಿದ್ದನು ಈ ಬಗ್ಗೆ ಭದ್ರಾವತಿಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅವರ ತಾಯಿ ಕಡೆಯಿಂದ ನಾಪತ್ತೆ ಪ್ರಕರಣ ಒಂದು ದಾಖಲಾಗಿತ್ತು. ನೀರಿನಲ್ಲಿ ಕೊಚ್ಚಿಕೊಂಡು ಹೋಗುವಾಗಲೇ ಸ್ಥಳೀಯರು ಸೀರೆ ಹಗ್ಗ ಹಾಕಿದರೂ ಸಹ ಆತನನ್ನು ರಕ್ಷಿಸಲು ಸಾಧ್ಯವಾಗಿರಲಿಲ್ಲ.
ನಂತರ ಮರುದಿನ ಅಗ್ನಿಶಾಮಕ ದಳದ ಕಾರ್ಯಾಚರಣೆಯಿಂದಾಗಿ ಆತ ಮೃತವಾಗಿ ಪತ್ತೆಯಾಗಿದ್ದಾನೆ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಜೀವನ್ ಯಾವುದೇ ಕೆಲಸವನ್ನು ಮಾಡುತ್ತಿರಲಿಲ್ಲ. ಸ್ನೇಹಿತರೊಂದಿಗೆ ಈಜಲು ತೆರಳಿದ್ದಾಗ ಈ ಘಟನೆ ಸಂಭವಿಸಿದೆ
