SUDDILIVE || SHIVAMOGGA
ವಾದಿ ಎ ಹುದಾದಲ್ಲಿ ಲಾಂಗ್ ನಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ- Fatal attack on youth by long gun in Wadi-e-Huda
ಶಿವಮೊಗ್ಗದ ವಾದಿ-ಎ-ಹುದಾ ಬಡಾವಣೆಯಲ್ಲಿ ಲಾಂಗ್ ನಲ್ಲಿ ಹೊಡೆದು ಓರ್ವನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
17 ವರ್ಷದ ಬಾಲಕನ ಮೇಲೆ ಬೈಕ್ ನಲ್ಲಿ ಬಂದವರು ಲಾಂಗಿನಿಂದ ಹೊಡೆದು ಥಳಿಸಲಾಗಿದೆ. ಲಾಂಗ್ ನಿಂದ ಹೊಡೆದ ರಭಸಕ್ಕೆ ಬಾಲಕ ತೀವ್ರ ಘಾಸಿಯಾಗಿದ್ದಾರೆ. ವಾದಿ ಎ ಹುದ ಎರಡನೇ ತಿರುವಿನಲ್ಲಿ ಬಾಲಕನ ಮನೆಯಿದ್ದು ಮೂರನೇ ತಿರುವಿನಲ್ಲಿ ಈತ ಇದ್ದ ವೇಳೆ ಬೈಕ್ ನಲ್ಲಿ ಬಂದವರು ಹಲ್ಲೆ ನಡೆಸಿದ್ದಾರೆ.
ಪ್ರೀತಿಯ ವಿಚಾರಕ್ಕೆ ಪ್ರೀತಿಸುತ್ತಿದ್ದ ಹುಡುಗಿಯವರ ಕಡೆಯವರು ಹಲ್ಲೆ ನಡೆಸಿರಬಹುದು ಎಂದು ಶಂಕಿಸಲಾಗಿದೆ. ತುಂಗ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಸೀಲಿಸುತ್ತಿದ್ದಾರೆ. ಮೌಸಿನ್ ಟೈಲ್ಸ್ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ನೆತ್ತಿಗೆ ಲಾಂಗಿನಿಂದ ಹಲ್ಲೆ ನಡೆಸಲಾಗಿದೆ. 6 ಜನರ ತಂಡದಿಂದ ಈ ಕೃತ್ಯ ನಡೆದಿದೆ ಎನ್ನಲಾಗಿದೆ.
Fatal attack on youth by long gun in Wadi-e-Huda
