SUDDILIVE || SHIVAMOGGA
ಸಂಕೇತ್ ಸಮಾದಿ ಹಾನಿ ಮಾಡಿದ ಆರೋಪಿಯ ಬಂಧನ-Accused of damaging Sanket Samadhi arrested
ಊರುಗಡೂರಿನಲ್ಲಿ ಹತ್ಯೆಗೊಳಗಾದ ಸಂಕೇತ್ ಸಮಾದಿಯನ್ನ ಹಾನಿ ಮಾಡಿದ ಆರೋಪಿಯನ್ನ ತುಂಗ ನಗರ ಪೊಲೀಸರು ಬಂಧಿಸಿದ್ದಾರೆ.
ಅಚ್ಚರಿ ಏನೆಂದರೆ ಈತನೂ ಅಪ್ರಾಪ್ತನಾಗಿದ್ದು, ಬೈಕ್ ನಲ್ಲಿ ಹೋಗುವಾಗ ಸಂಕೇತ್ ನ ಫೊಟೊ ಇರುವ ಸಮಾದಿಯ ಕಲ್ಲನ್ನ ಒಡೆದು ಹೋಗಿದ್ದಾನೆ. ಸಮಾದಿಯ ಕಲ್ಲು ಹಾನಿ ಮಾಡಲು ಉದ್ದೇಶವೇನೆಂದರೆ ಸಂಕೇತನ ಕೊಲೆ ಮಾಡಿರುವ 7 ಜನ ಅಪ್ರಾಪ್ತರುಗಳು ಈತನ ಸ್ನೇಹಿತರಾಗಿದ್ದಾರೆ.
ಜೈಲಿನಲ್ಲಿ ಇರುವ ಇವರುಗಳು ಇದುವರೆಗೆ ಹೊರ ಬಂದಿಲ್ಲ ಎಂಬ ಸಿಟ್ಟಿನಿಂದ ಈ ಕೃತ್ಯ ನಡೆಸಿರುವುದಾಗಿ ತಿಳಿದು ಬಂದಿದೆ. ಈ ಕೃತ್ಯ ನಡೆಸಿದವನೂ ಸಹ ಊರಗಡೂರಿನ ನಿವಾಸಿಯಾಗಿದ್ದಾನೆ. ಪ್ರಕರಣ 15 ದಿನಗಳ ನಂತರ ಭೇಧಿಸಲಾಗಿದೆ. ಇಲ್ಲಿ ಸಿಸಿ ಟಿವಿ ಫೂಟೇಜ್ ಆಗಲಿ ಇತರೆ ಕ್ಲೂ ಸಿಗುವಂತಹ ಯಾವುದೇ ರೀತಿಯ ಸನ್ನಿವೇಶಗಳು ಇಲ್ಲದ ಕಾರಣ ಪ್ರಕರಣ ಸಮಯ ತೆಗೆದುಕೊಂಡಿದೆ.
ಜೊತೆಗೆ ಪೊಲೀಸರಿಗೆ ಸವಾಲು ಸಹ ಆಗಿತ್ತು. ಆದರೂ ತುಂಗ ನಗರ ಪೊಲೀಸ್ ಇನ್ ಸ್ಪೆಕ್ಟರ್ ಗುರುರಾಜ್ ಕೆಟಿ ನೇತೃತ್ವದಲ್ಲಿ ಪ್ರಕರಣವನ್ನ ಕೂಲಂಕುಶವಾಗಿ ಭೇಧಿಸಲಾಗಿದೆ. ಆರೋಪ ಎದುರಿಸುತ್ತಿರುವ ಅಪ್ರಾಪ್ತನನ್ನ ಬಾಲ ನ್ಯಾಯ ಮಂಡಳಿಗೆ ಹಾಜರು ಪಡಿಸಲಾಗಿದೆ. ಕೃತ್ಯಕ್ಕೆ ಬಳಸಿದ ಆರ್ ಟಿ ಆರ್ ಬೈಕ್ ನ್ನ ವಶಪಡಿಸಿಕೊಳ್ಳಲಾಗಿದೆ.
Accused of damaging Sanket Samadhi arrested
