SUDDILIVE || SHIVAMOGGA
ಸಾಗರ-ಬಂಗಾರದ ಒಡವೆ ಕಳವಿನ ಆರೋಪಿ ಬಂಧನ- Accused of ocean-going gold jewellery theft arrested
ಸಾಗರದ KSRTC ಬಸ್ ನಿಲ್ದಾಣದಲ್ಲಿ ಬಸ್ ಹತ್ತುವ ವೇಳೆ 12 ಗ್ರಾಂ ಬಂಗಾರದ ಚೈನ್ ನ್ನ ಅಪರಿಚತರು ಅಪಹರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತರೊಬ್ಬರನ್ನ ಸಾಗರ ಪೊಲೀಸರು ಬಂಧಿಸಿದ್ದಾರೆ.
ಮಾರಿಕಾಂಬ ಜಾತ್ರೆಯ ಪ್ರಯುಕ್ತ ಜಯಮ್ಮ ಎಂಬುವರು ಸಾಗರಕ್ಕೆ ತಮ್ಮ ಸಂಬಂದಿಕರ ಮನೆಗೆ ಬಂದು ವಾಪಾಸ್ ಫೆ.02 ರಂದು ತಮ್ಮ ಊರಿಗೆ ಹೋಗಲು ಸಾಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಬಸ್ಗಾಗಿ ಕಾಯುತ್ತಿದ್ದಾಗ ಮದ್ಯಾಹ್ನ 01-00 ಗಂಟೆಗೆ ತಮ್ಮ ಊರಿಗೆ ಹೋಗುವ ಬಸ್ ಬಂದಿದ್ದು, ಆ ಸಮಯದಲ್ಲಿ ಯಾರೋ ಕಳ್ಳರು ಮಹಿಳೆಯ ಬ್ಯಾಗಿಗೆ ಕೈ ಹಾಕಿ ಬ್ಯಾಗಿನಲ್ಲಿದ್ದ ಸುಮಾರು 12 ಗ್ರಾಂ ತೂಕದ ಬಂಗಾರದ ಚೈನ್ ಸರವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಅಪರಾಧ ಸಂಖ್ಯೆ: 21/2026 ಕಲಂ 303(2) ಬಿಎನ್ಎಸ್ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ.
ಪ್ರಕರಣದಲ್ಲಿನ ಆರೋಪಿ ಮತ್ತು ಕಳುವಾದ ಮಾಲಿನ ಪತ್ತೆಗಾಗಿ ಬಿ. ನಿಖಿಲ್, ಐಪಿಎಸ್, ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ಶಿವಮೊಗ್ಗ, ಮತ್ತು ಕಾರಿಯಪ್ಪ.ಎ.ಜಿ, ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1 ಶಿವಮೊಗ್ಗ ಜಿಲ್ಲೆ ಶಿವಮೊಗ್ಗ ರವರ ಮಾರ್ಗದರ್ಶನದಲ್ಲಿ ಡಾ. ಬೆನಕಪ್ರಸಾದ್ ಎನ್.ಜೆ, ಸಹಾಯಕ ಪೊಲೀಸ್ ಅಧೀಕ್ಷಕರು ಸಾಗರ ಉಪವಿಭಾಗ ಸಾಗರರವರ ಮೇಲ್ವಿಚಾರಣೆಯಲ್ಲಿ ಪುಲ್ಲಯ್ಯ ರಾಥೋಡ್, ಪೊಲೀಸ್ ನಿರೀಕ್ಷಕರು ಸಾಗರ ಪೇಟೆಠಾಣೆ ರವರ ನೇತೃತ್ವದಲ್ಲಿ ಪಿಎಸ್ಐರವರಾದ ಶಾಂತರಾಜ್ ಜೆ.ಹೆಚ್ ಹಾಗೂ ಸಿಬ್ಬಂದಿಗಳಾದ ಮಎಎಸ್ಐ ಮೀರಾಬಾಯಿ, ಹೆಚ್.ಸಿ ಸನಾವುಲ್ಲ, ಹೆಚ್.ಸಿ ಫೈರೋಜ್, ಪಿ.ಸಿ ವಿಶ್ವನಾಥ, ಪಿಸಿ ಕೃಷ್ಣಮೂರ್ತಿ, ಪಿಸಿ ಲೋಕೇಶ್ ರವರುಗಳನ್ನು ಒಳಗೊಂಡ ತನಿಖಾ ತಂಡವನ್ನು ರಚಿಸಲಾಗಿರುತ್ತದೆ.
ತನಿಖಾ ತಂಡವು ದಿನಾಂಕ:20/04/2026 ರಂದು ಪ್ರಕರಣದಲ್ಲಿ ಆರೋಪಿತಳಾದ ಸುಮಿತ್ರ, 43 ವರ್ಷ, ಕೆಹೆಚ್ಬಿ ಕಾಲೋನಿ ಹುಣಸೂರು ತಾಲ್ಲೂಕು, ಮೈಸೂರು ಜಿಲ್ಲೆ ಇವಳನ್ನು ದಸ್ತಗಿರಿ ಮಾಡಿ ಆರೋಪಿತಳಿಂದ 12 ಗ್ರಾಂ ತೂಕದ ಅಂದಾಜು 1,30,000/- ರೂ ಮೌಲ್ಯದ ಬಂಗಾರದ ಚೈನ್ ಸರವನ್ನು ಅಮಾನತ್ತು ಪಡಿಸಿಕೊಳ್ಳಲಾಗಿರುತ್ತದೆ.
ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಆಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.
ಸಾಗರ-ಬಂಗಾರದ ಒಡವೆ ಕಳವಿನ ಆರೋಪಿ ಬಂಧನ- Accused of ocean-going gold jewellery theft arrested

