SUDDILIVE || SHIVAMOGGA
ಹೊಳೆಹೊನ್ನೂರು ಪೊಲೀಸರ ಭರ್ಜರಿ ಗಾಂಜಾ ಭೇಟೆ-Massive ganja bust by Holehonnur police
ಗಾಂಜಾ ಮಾರಾಟಗಾರರನ್ನ ಐವರನ್ನ ಹೊಳೆಹೊನ್ನೂರು ಪೊಲೀಸರು ಬಂಧಿಸಿ ಬರೋಬ್ಬರಿ 4.5 ಕೆಜಿಗೂ ಹೆಚ್ಚು ಗಾಂಜಾವನ್ನ ವಶಕ್ಕೆ ಪಡೆದಿದ್ದಾರೆ.
ಏ.24 ರಂದು ಹೊಳೆಹೊನ್ನೂರು ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಹೊಳೆಹೊನ್ನೂರು ಕಡೆಯಿಂದ ಶಿವಮೊಗ್ಗ ಕಡೆಗೆ ಹೋಗುವ ಎನ್ ಹೆಚ್ 369 ಬೈಪಾಸ್ ರಸ್ತೆಯಲ್ಲಿ ಯಾರೋ ಕೆಲವರು ಕಾನೂನುಬಾಹಿರವಾಗಿ ಮಾದಕ ವಸ್ತುವಾದ ಗಾಂಜಾವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಹೊಳೆಹೊನ್ನೂರು ಪಿಐ ಶಿವಪ್ರಸಾದ್ ಎಂ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದ್ದಾರೆ.
ಆರೋಪಿತರಾದ 1.ಲವ 24 ವರ್ಷ 2. ಲೇಖಕ್ 20 ವರ್ಷ 3. ಮನೋಜ 27ವರ್ಷ4 .ಕಿರಣ 24 ವರ್ಷ 5. ಗಿರೀಶ 28 ವರ್ಷ ಇವರುಗಳನ್ನು ದಸ್ತಗಿರಿ ಮಾಡಿ ಸುಮಾರು 2,34,000/- ರೂ ಮೌಲ್ಯದ 4 ಕೆಜಿ 690ಗ್ರಾಂ ತೂಕದ ಗಾಂಜಾವನ್ನು ಹಾಗೂ ಕೃತ್ಯಕ್ಕೆ ಬಳಸಿದ ಹೊಂಡಾ ಆಕ್ಟೀವಾ ಮೋಟಾರ್ ಸೈಕಲ್ ನ್ನು ಅಮಾನತ್ತುಪಡಿಸಿಕೊಂಡು ಸದರಿ ಆರೋಪಿತರ ವಿರುದ್ಧ ಹೊಳೆಹೊನ್ನೂರು ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಳ್ಳಲಾಗಿದೆ.
Massive ganja bust by Holehonnur police
