SUDDILIVE || SHIVAMOGGA
ಸೊಂಟ ಮುಟ್ಟಿದ ವಿಷಯದಲ್ಲಿ ಮದುವೆ ಮನೆಯಲ್ಲಿ ಗಲಾಟೆ- A fight breaks out at the wedding house over a matter involving touching the waist
ಮದುವೆ ಸಮಾರಂಭದಲ್ಲಿ ಗೃಹಿಣಿಯ ಸೊಂಟ ಮುಟ್ಟಿದ ವಿಷಯದಲ್ಲಿ ಗಲಾಟೆಯಾಗಿ ಆನಂದ ಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಹಿಳೆಯು ತನ್ನ ಸಹೋದರಿಯೊಂದಿಗೆ ಮದುವೆ ಸಮಾರಂಭದಲ್ಲಿ ರಾತ್ರಿ ಊಟಕ್ಕೆ ಪಂಕ್ತಿಯಲ್ಲಿ ಕುಳಿತಿದ್ದರು. ಹಿಂದಿನ ಸಾಲಿನಲ್ಲಿ ಕುಳಿತಿದ್ದ ಯುವಕನೊಬ್ಬ ಗೃಹಿಣಿಯ ಸಹೋದರಿಯನ್ನು ಚುಡಾಯಿಸಿದ್ದಾನೆ. ಬಳಿಕ ಆಕೆಯ ಮೈ ಮುಟ್ಟಿದ್ದಾನೆ. ವಿಷಯ ತಿಳಿದು ಗೃಹಿಣಿಯು ಯುವಕನಿಗೆ ಬೈದಿದ್ದಾರೆ. ಆಗ ಯುವಕ ಗೃಹಿಣಿಯ ಸೊಂಟ ಮುಟ್ಟಿದ್ದಾನೆ ಎಂದು ಆರೋಪಿಸಲಾಗಿ
ಈ ವೇಳೆ ಗೃಹಿಣಿಯು ಕಿರುಚಿ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿಗೆ ವಿಷಯ ತಿಳಿಸಿದ್ದಾರೆ. ಪಕ್ಕದಲ್ಲಿದ್ದ ವ್ಯಕ್ತಿಯು ಹಿಂದಿನ ಸಾಲಿನಲ್ಲಿ ಕುಳಿತಿದ್ದ ಯುವಕನನ್ನು ಪ್ರಶ್ನೆ ಮಾಡಿದ್ದಾರೆ. ಆಗ ಯುವಕ ಮತ್ತಿತರರು ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆಪಾದಿಸಲಾಗಿದೆ. ಘಟನೆ ಸಂಬಂಧ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
A fight breaks out at the wedding house over a matter involving touching the waist
