ರೈಲುಗಳ ವೇಳಾಪಟ್ಟಿ ಪರಿಷ್ಕರಣೆ- Train schedule revision

 SUDDILIVE || SHIVAMOGGA

ರೈಲುಗಳ ವೇಳಾಪಟ್ಟಿ ಪರಿಷ್ಕರಣೆ- Train schedule revision    

Train, shedule

ಕಾರ್ಯಾಚರಣೆಯ ಕಾರಣಗಳಿಂದಾಗಿ, ಚಿಕ್ಕಮಗಳೂರಿನಿಂದ ಶಿವಮೊಗ್ಗ ಬೆಂಗಳೂರಿಗೆ ಸಂಚರಿಸುವ  ರೈಲುಗಳ ವೇಳಾಪಟ್ಟಿ ಪರಿಷ್ಕರಿಸಲಾಗಿದ್ದು, ಇದು 2026ರ ಏಪ್ರಿಲ್ 24ರಿಂದ ಜಾರಿಗೆ ಬರಲಿದೆ. ಪರಿಷ್ಕೃತ ವೇಳಾಪಟ್ಟಿಯ ವಿವರಗಳು ಹೀಗಿವೆ:

ರೈಲು ಸಂಖ್ಯೆ 16239 ಚಿಕ್ಕಮಗಳೂರು – ಯಶವಂತಪುರ ದೈನಂದಿನ ಎಕ್ಸಪ್ರೆಸ್ ರೈಲು ಇನ್ನು ಮುಂದೆ ಚಿಕ್ಕಮಗಳೂರಿನಿಂದ ಬೆಳಿಗ್ಗೆ08:15ರ ಬದಲಿಗೆ 08:00 ಗಂಟೆಗೆ ಹೊರಡಲಿದೆ. ಇದರೊಂದಿಗೆ ಮಧ್ಯಂತರ ನಿಲ್ದಾಣಗಳ ಸಮಯವನ್ನೂ ಪರಿಷ್ಕರಿಸಲಾಗಿದೆ. ಕಣಿವೆಹಳ್ಳಿಯಲ್ಲಿ 08:33/08:34ರ ಬದಲಿಗೆ 08:18/08:19 ಗಂಟೆಗೆ, ಸಖರಾಯಪಟ್ಟಣದಲ್ಲಿ 08:46/08:47ರ ಬದಲಿಗೆ 08:31/08:32 ಗಂಟೆಗೆ, ಬಿಸಲೇಹಳ್ಳಿಯಲ್ಲಿ 08:58/08:59ರ ಬದಲಿಗೆ 08:43/08:44 ಗಂಟೆಗೆ ಹಾಗೂ ಕಡೂರು ನಿಲ್ದಾಣಕ್ಕೆ 09:30/09:40ರ ಬದಲಿಗೆ 09:05/09:25 ಗಂಟೆಗೆ ರೈಲು ಆಗಮಿಸಿ, ನಿರ್ಗಮಿಸಲಿದೆ. ದೇವನೂರು ಮತ್ತು ಯಶವಂತಪುರ ನಿಲ್ದಾಣಗಳ ನಡುವಿನ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ರೈಲು ಸಂಖ್ಯೆ 16240 ಯಶವಂತಪುರ – ಚಿಕ್ಕಮಗಳೂರು ದೈನಂದಿನ ಎಕ್ಸಪ್ರೆಸ್ ರೈಲು ಚಿಕ್ಕಮಗಳೂರು ನಿಲ್ದಾಣಕ್ಕೆ ರಾತ್ರಿ 08:55ರ ಬದಲಿಗೆ 09:05 ಗಂಟೆಗೆ ತಲುಪಲಿದೆ. ಅದೇ ರೀತಿ, ರೈಲು ಸಂಖ್ಯೆ 56271 ಶಿವಮೊಗ್ಗ ಟೌನ್ – ಚಿಕ್ಕಮಗಳೂರು ದೈನಂದಿನ ಪ್ಯಾಸೆಂಜರ್ ರೈಲು ರಾತ್ರಿ 09:30ರ ಬದಲಿಗೆ 09:40 ಗಂಟೆಗೆ ಚಿಕ್ಕಮಗಳೂರ ನಿಲ್ದಾಣ ತಲುಪಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close