SUDDILIVE || SHIVAMOGGA
ನಗರದ ಹೃದಯ ಭಾಗದಲ್ಲಿಯೇ ಮೂಗು ಮುಚ್ಚುವಂತಾಗಿದೆ ಸಾರ್ವಜನಿಕರು-The public is turning a blind eye in the heart of the city
ಶಿವಮೊಗ್ಗದ ಬಸ್ ನಿಲ್ದಾಣದ ಎದುರು ಇರುವ ಡ್ರೈನೇಜ್ ಬ್ಲಾಕ್ ಆಗಿ ರಸ್ತೆ ಮೇಲೆ ಹರಿಯುತ್ತಿರುವ ಗಲೀಜು ನೀರು ಪ್ರಯಾಣಿಕರನ್ನ ಮೂಗು ಮುಚ್ಚಿಕೊಂಡು ಓಡಾಡುವಂತೆ ಮಾಡಿದೆ.
ಬಸ್ ನಿಂದ ಇಳಿದು ಬರುವ ಪ್ರವಾಸಿಗರು ಇಲ್ಲಿ ಹೋಟೆಲ್, ಇನ್ನಿತರ ವಸ್ತುಗಳ ಖರೀದಿಗೆ ಈ ಡ್ರೈನೇಜ್ ನ್ನ ದಾಟಿ ಬರಬೇಕು. ಡ್ರೈನೇಜ್ ಇಲ್ಲಿ ಓಡಾಡುವ ಪ್ರವಾಸಿಗರು, ಸಾರ್ವಜನಿಕರು ವಾಹನ ಸವಾರರಿಗೆ ಮೂಗು ಮುಚ್ಚುವಂತೆ ಮಾಡಿದೆ.
ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಿರ್ಮಾಣವಾದ ಯುಜಿಡಿ ಯೋಜನೆ ಬಸ್ ನಿಲ್ದಾಣದ ಮುಂದೆ ಮಾತ್ರವಲ್ಲ ಬಹುತೇಕಕಡೆ ಈ ಪರಿಸ್ಥಿತಿಯಿದೆ. ಅಧಿಕ ಮಳೆ ಬಂದರೆ ಸಾಕು ಶರಾವತಿ ನಗರ, ಜಯನಗರ, 7-8 ವಾರ್ಡ್ ಗಳಲ್ಲಿ ಈ ಯುಜಿಡಿ ಸಮಸ್ಯೆಯಿದೆ. ಆದರೆ ಬಸ್ ನಿಲ್ದಾಣದ ಎದುರಿನ ಈ ಯುಜಿಡಿ ಮಳೆ ಬೀಳುವ ಮುಂಚೆ ಉಕ್ಕಿ ಗಬ್ಬು ನಾರುತ್ತಿದೆ.
ಶಿವಮೊಗ್ಗದ ಹಾರ್ಟ್ ಆಫ್ ದ ಸಿಟಿಯಲ್ಲೇ ಈ ಅವ್ಯವಸ್ಥೆ ಪಾಲಿಕೆಯನ್ನ ಪ್ರಶ್ನಿಸುವಂತೆ ಮಾಡಿದೆ. ಈ ಸ್ಮಾರ್ಟ್ ಸಿಟಿ ಯೋಜನೆ ಕುರಿತು ಜಿಲ್ಲಾ ಪಂಚಾಯತ್ ಸಭೆಯಲ್ಲಿ ಚರ್ಚೆಯಾಗಿ ತನಿಖೆಗೂ ಆದೇಶವಾಗಿತ್ತು. ಸಚಿವ ಮಧು ಬಂಗಾರಪ್ಪನವರ ಎದುರೆ ನಡೆದ ಚರ್ಚೆ ಮತ್ತು ತನಿಖೆಗೆ ಆದೇಶವಾಗಿ ಎರಡು ವರ್ಷ ಕಳೆದಿದೆ. ತನಿಖೆ ಆರಂಭವಾಗಿರುವುದನ್ನ ಸಚಿವರು ಸದ್ದಿಲದೆ ನಡೆಯುತ್ತಿದೆ ಎಂದು ಹೇಳಿದ್ದರು.
ಆ ತನಿಖೆ ಯಾವ ಹಂತದಲ್ಲಿದೆ ಎಂಬುದರ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ಇಲ್ಲ. ಹಾಗಾಗಿ ಈ ಎಲ್ಲಾ ಅವ್ಯವಸ್ಥೆಗಳಿಂದ ಶಿವಮೊಗ್ಗದ ಸ್ಮಾರ್ಟ್ ಸಿಟಿ ಯೋಜನೆ ಮುಗಿದು ನಾಲ್ಕೈದು ವರ್ಷಗಳಲ್ಲಿಯೇ ಡ್ರೈನೇಜ್ ಹಾಳಾಗಿವೆ. ಯಾರ ಮೇಲು ಕ್ರಮವಿಲ್ಲ. ಇವೆಲ್ಲದರ ಫಲವಾಗಿ ಹೃದಯಭಾಗದಲ್ಲಿಯೇ ಈ ಅವ್ಯವಸ್ಥೆ ಉಂಟಾಗಿದೆ. ಕ್ರಮ ಕೈಗೊಳ್ಳಲಿದೆಯಾ ಪಾಲಿಕೆ ಕಾದು ನೋಡೋಣ.
The public is turning a blind eye in the heart of the city


