ವಿವಿಯಲ್ಲಿ ಎಲ್ಲಾ ಪೀಸ್ ಪೀಸ್ ಪ್ರಕರಣ- 40 ಕ್ಕೂ ಹೆಚ್ಚಜನರ ವಿರುದ್ಧ ಎಫ್ಐಆರ್-All peace peace cases in the university - FIR against over 40 people

 SUDDILIVE || BHADRAVATHI

ವಿವಿಯಲ್ಲಿ ಎಲ್ಲಾ ಪೀಸ್ ಪೀಸ್ ಪ್ರಕರಣ- 40 ಕ್ಕೂ ಹೆಚ್ಚಜನರ ವಿರುದ್ಧ ಎಫ್ಐಆರ್-All peace peace cases in the university - FIR against over 40 people    

Peace, peace

Peace, peace

Peace, peace

ನಿನ್ನೆ ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಎನ್ ಎಸ್ ಯು ಐ ವತಿಯಿಂದ ನಡೆದ  ಪ್ರತಿಭಟನೆ ದೂರಾಗಿ ದಾಖಲಾಗಿದೆ. 40 ಕ್ಕೂ ಹೆಚ್ಚು ಜನರ ವಿರುದ್ಧ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

ಮೌಲ್ಯಮಾಪನ ಪರೀಕ್ಷಾ ಶುಲ್ಕ ಸೇರಿದಂತೆ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಬೇಡಿಕೆ ಈಡೇರಿಸುವಂತೆ ನೆನ್ನೆ ಎನ್ ಎಸ್ ಯು ಐ ಕುಲಪತಿಗಳ ಕಚೇರಿ ಕಾರ್ಯಾಲಯದಲ್ಲಿ ದಾಳಿ ನಡೆಸಿ ಹಲವು ಪಾಟುಗಳನ್ನು ಮತ್ತು ಗಾಜುಗಳನ್ನು ಹೊಡೆದು ಹಾಕಿತ್ತು. NSUI ನ ಈ ದಾಳಿಯನ್ನ ವಿಶ್ವ ವಿದ್ಯಾಯಲಯದ ಆಡಳಿತದ ವರ್ಗ ನಿರೀಕ್ಷಿಸಿಯೂ ಇರಲಿಲ್ಲ.

ಆದರೆ ಈ ಪ್ರಕರಣಗಳಲ್ಲಿ ಸಿಬ್ಬಂದಿಗಳಿಗೆ ಜೀವ ಬೆದರಿಕೆ ಹಾಕಿ ಪ್ರತಿಭಟನೆ ನಡೆಸಿರುವುದರ ಬಗ್ಗೆ ಅಚ್ಚರಿ ಮೂಡಿಸಿದೆ. ಎನ್ ಎಸ್ ವಿ ಐ ನ ಪ್ರತಿಭಟನ ಗುಂಪು ನಲ್ಲಿ 35 ರಿಂದ 40 ಜನ ಭಾಗಿಯಾಗಿದ್ದು ಇವರು ಕುಲಪತಿಗಳ ಕಚೇರಿ ಕಾರ್ಯಾಲಯಕ್ಕೆ ಏಕಾಏಕಿ ನುಗ್ಗಿದಾಗ ಶ್ರೀಮತಿ ಸುಜಾತ ಮೋಹಿತ್, ಗೋವಿಂದಾಚಾರ್ ಅಮರ ಜ್ಯೋತಿ ಎಂಬುವರು ತಡೆಯಲು ಪ್ರಯತ್ನಿಸಿದಾಗ ಎನ್ ಎಸ್ ವಿ ಐ ನ ವಿದ್ಯಾರ್ಥಿಗಳು ಇವರಿಗೆ ತಳ್ಳಿ ಮುಟ್ಟಿದರೆ ನಿಮ್ಮನ್ನ ಸುಮ್ಮನೆ ಬಿಡಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರು ದಾಖಲಾಗಿದೆ.

50 ಸಸ್ಯಕುಂಡಗಳು 15 ಕುರ್ಚಿಗಳು ನಾಮಫಲಕಗಳಿಗೆ ಕಪ್ಪುಮಸಿ ಬಳಿ ಬಳಿದಿರುವುದು ಶೌಚಾಲಯದ  ಗಾಜಿನ ಬಾಗಿಲನ್ನು ಒಡೆದಿರುವುದು ಸೇರಿ ಒಟ್ಟು ನಾಲ್ಕು ಲಕ್ಷ ರೂಗಳಷ್ಟು ಸಾರ್ವಜನಿಕ ಆಸ್ತಿ ನಷ್ಟ ಮಾಡಿರುತ್ತಾರೆ ಎಂದು ವಿಶ್ವವಿದ್ಯಾನಿಲಯದ ಅಸಿಸ್ಟೆಂಟ್ ರಿಜಿಸ್ಟರ್ ಟಿ ನಾಗರಾಜ್ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಎನ್ ಎಸ್ ಯು ಐ ಜಿಲ್ಲಾಧ್ಯಕ್ಷ ವಿಜಯಕುಮಾರ್ ಮುಖಂಡ ಮಧುಸೂದನ ನಗರ ಅಧ್ಯಕ್ಷರವಿ ಕುಮಾರ್ ಇತರೆ ಸದಸ್ಯರುಗಳದ ಆದಿತ್ಯ,  ಸುಭಾನ್,  ಚಂದ್ರೋಜಿ ರಾವ್,  ರವಿಕುಮಾರ್ ಕಾಟಿಕೆರೆ,  ಅಬ್ದುಲ್ ಗನಿ ಫರಾಜ್,  ವರುಣಾ ಬಿ ಪಂಡಿತ್,  ಅಭಿ,  ಸೃಚೇತನ್ಹಾಲಸ್ವಾಮಿ, ಲೋಹಿತ್ ಹಾಲಸ್ವಾಮಿ, ಅಬ್ದುಲ್ ಸತ್ತಾರ್,  ಹಾಗೂ 25-30 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

All peace peace cases in the university - FIR against over 40 people    

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close