ಸಿಎಂ ಬದಲಾವಣೆ ಕುರಿತು ಸಚಿವ ಕೃಷ್ಣಭೈರೇಗೌಡರು ಏನಂದ್ರು? What did Minister Krishna Bhairegowda say about the CM change?

 SUDDILIVE || SHIVAMOGGA

ಸಿಎಂ ಬದಲಾವಣೆ ಕುರಿತು ಸಚಿವ ಕೃಷ್ಣಭೈರೇಗೌಡರು ಏನಂದ್ರು? What did Minister Krishna Bhairegowda say about the CM change?    

Krishna, bairegowda


ಸಿಎಂ ಬದಲಾವಣೆ ಕುರಿತು ಸಚವ ಕೃಷ್ಣ ಬೈರೇಗೌಡ ಪ್ರತಿಕ್ರಿಯಸಿದ್ದು ಬದಲಾವಣೆ, ನಮ್ಮ ಆಸೆ ಇರುತ್ತದೆ, ಎಂಬುದರ ಮೂಲಕ ಮೊದಲಬಾರಿಗೆ ಸಿಎಂ ಬದಲಾವಣೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.  

ಮಾಧ್ಯಮಗಳ ಜೊತೆ ಮಾತನಾಡಿದ ಅವರು ಯಾವ ಕಾಲಕ್ಕೆ ಏನೂ ಆಗುತ್ತದೆಯೋ‌ ಅದು ಆಗುತ್ತದೆ. ಜನ ನಮಗೆ ಈ ಸ್ಥಾನ ಕೊಟ್ಟಿದ್ದಾರೆ. ಜನರಿಗೆ ಒಳ್ಳೆಯದನ್ನು ಮಾಡಬೇಕಿದೆ. ಕಾಲಕ್ಕೆ ತಕ್ಕಂತೆ ಎಲ್ಲಾರು ಹೊಂದುಕೊಳ್ಳಬೇಕಾಗುತ್ತದೆ ಎಂದರು. 

ಜನ ನಮಗೆ  ಜವಾಬ್ದಾರಿ ಕೊಟ್ಟು ಅಧಿಕಾರ ನಡೆಸಲು ಅವಕಾಶ ಕೊಟ್ಟಿದ್ದಾರೆ. ನನ್ನ ಕೈಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಕೆಲಸ ಮಾಡುತ್ತೆನೆ. ನಾವು ಜನರ ಸಮಸ್ಯೆಗಳ ಕಡೆಗೆ ಗಮನ ಹರಿಸಬೇಕು. ರಾಜಕೀಯದಲ್ಲಿ ಆಸೆ ಆಕ್ಷಾಂಕ್ಷಿಗಳು, ಬದಲಾವಣೆಗಳು ಇರುತ್ತವೆ. ನಾವು ನಿರ್ಲಪ್ತತೆಯಿಂದ ಇರಲು ಆಗಲ್ಲ ಎಂದರು. 


ಸಿಲಿಂಡರ್ ದರ ಏರಿಕೆ 


ಕರ್ಮಷಿಯಲ್ ಸಿಲಿಂಡರ್ ದರ ಏರಿಕೆ ಕುರಿತು ಚುನಾವಣೆ ಇರುವ ತನಕ ಒಂದು ನೀತಿ, ಚುನಾವಣೆ ಮುಗಿದ ಮೇಲೆ ಇನ್ನೂಂದು ನೀತಿಯೇ ಎಂದು ಪ್ರಶ್ನಿಸಿದರು. 


2023 ರಲ್ಲಿಯೇ ಮಹಿಳಾ‌ ಮೀಸಲಾತಿಗೆ ಕಾನೂನು ಮಾಡಲಾಗಿತ್ತು. ಆದರೆ ಚುನಾವಣೆ ನಡೆಯವ ಸಂದರ್ಭದಲ್ಲಿಯೇ ವಿಶೇಷ ಅಧಿವೇಶನ ಕರೆಯಲು ಹಿಂದೆ ಎನಿದೆ ಎಂದು. ಅದರಲ್ಲೂ ದಕ್ಷಿಣ ಭಾರತದ ಚುನಾವಣೆಯಲ್ಲಿ ಹೆಚ್ಚು ಸೀಟುಗಳಿಸಲು. ದಕ್ಷಿಣ ರಾಜ್ಯಗಳ ಸ್ಥಾನ ಕಡಿಮೆ ಮಾಡಲು ಹುನ್ನಾರ ಮಾಡಲಾಗಿತ್ತು.‌ ಕೇಂದ್ರ ಸರ್ಕಾರ ನಡೆದುಕೊಳ್ಳುತ್ತಿರುವುದು ಸರಿಯಲ್ಲ.  ಸಿಲಿಂಡರ್ ಬ್ಲಾಕ್ ಮಾರ್ಕಟ್ ನಲ್ಲಿ ಸಿಗುತ್ತದೆ ಆಂದ್ರೆ, ಸರಿಯಾದ ಮಾರ್ಗದಲ್ಲಿ ಯಾಕೆ ಸಿಗುತ್ತಿಲ್ಲ. ಇಲ್ಲಿ ದಂಧೆಕೋರೆರಿಗೆ ಸಿಗುವಂತೆ ಮಾಡಲಾಗುತ್ತದೆ. ಇದರಿಂದ ಕೇಂದ್ರ ಸರ್ಕಾರ ಸಿಲಿಂಡರ್ ಅನ್ನು ಸರಿಯಾಗಿ‌ ಪೂರೈಸಲು ಕ್ರಮ ತೆಗದುಕೊಳ್ಳಬೇಕೆಂದರು.

What did Minister Krishna Bhairegowda say about the CM change?

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close