SUDDILIVE || SAGARA
ಮನೆಕಳ್ಳತನ-ಅಪಾರ ಪ್ರಮಾಣದ ನಗದು, ಬೆಳ್ಳಿ, ಚಿನ್ನಾಭರಣ ಕಳವು- Housebreaking - theft of a huge amount of cash, silver, and jewelry
ಮನೆಯವರೆಲ್ಲ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಮದುವೆ ಕಾರ್ಯಕ್ರಮಕ್ಕೆ ಭಾಗಿಯಾಗಲು ತೆರಳಿದಾಗ ಸಾಗರದ ಗಾಂಧಿ ನಗರದಲ್ಲಿರುವ ಮನೆಯೊಂದರಲ್ಲಿ ಕಳ್ಳತನವಾಗಿದೆ. ಚಿನ್ನ, ಬೆಳ್ಳಿ ಹಾಗೂ ಮೂರು ಲಕ್ಷ ನಗದು ಕಳುವಾಗಿದೆ.
ಬೆಂಗಳೂರಿನಲ್ಲಿ ಮದುವೆ ಇದ್ದಿದ್ದರಿಂದ ನಂದಕುಮಾರ್ ಎಂಬುವರು ಏ.25 ರಂದು ತೆರಳಿದ್ದರು. ಬೆಂಗಳೂರಿಗೆ ತೆರಳಿದ ವೇಳೆ ಮನೆ ಕಳ್ಳತನ ನಡೆದಿದೆ. ಮನೆಯ ಮೇಲಿನ ಎರಡು ಕಬ್ಬಿಣದ ಬಾಗಿಲು ಒಡೆದು ಮನೆಕಳ್ಳತನವಾಗಿದೆ. ಬೆಂಗಳೂರಿನಿಂದ ನಿನ್ನೆ ಮನೆಗೆ ಬಂದ ನಂದಕುಮಾರ್ ಅವರಿಗೆ ಆಘಾತವಾಗಿದೆ.
ಮನೆಯ ವಸ್ತುಗಳೆಲ್ಲಾ ಚೆಲ್ಲಪಿಲ್ಲಿಗಳಾಗಿವೆ. 3 ಲಕ್ಷ ನಗದು 5½ ಕೆಜಿಗೂ ಹೆಚ್ಚು ಬೆಳ್ಳಿ 320 ಗ್ರಾಂ ಚಿನ್ನಾಭರಣ ಕಳುವಾಗಿದೆ. ಪ್ರಕರಣ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮನೆಗಳ್ಳತನ ನಡೆದ ಸ್ಥಳಕ್ಕೆ ಇಂದು ಎಸ್ಪಿ ನಿಖಿಲ್, ಜಿಪಂ ಸಿಇಒ ಹೇಮಂತ್ ಕುಮಾರ್, ಭೇಟಿ ನೀಡಿ, ಪೊಲೀಸ್ ಅಧಿಕಾರಿಗಳಿಗೆ ಪ್ರಕರಣದಲ್ಲಿ ಆರೋಪಿ ಹಾಗು ಮಾಲು ಪತ್ತೆ ಸೂಕ್ತ ಮಾರ್ಗದರ್ಶನ ನೀಡಿದ್ದಾರೆ.
Housebreaking - theft of a huge amount of cash, silver, and jewelry

