SUDDILIVE || SHIVAMOGGA
ಶರಾವತಿ ಪಂಪ್ಟ್ ಸ್ಟೋರೇಜ್ ವಿರುದ್ಧ ಮತ್ತೊಂದು ಹೊರಾಟಕ್ಕೆ ಸಜ್ಜು-Another outing against Sharavathi Pumped Storage
ಶರಾವತಿ ಪಂಪುಡ್ ಸ್ಟೋರೇಜ್ ಯೋಜನೆಯ ಬಗ್ಗೆ ಪರಿಸರಕ್ಕಾಗಿ ನಾವು ಮತ್ತು ರಾಷ್ಟ್ರಭಕ್ತರ ಬಳಗ ಇದುವರೆಗೂ ಮನವಿ ಹಾಗೂ ಹೋರಾಟಗಳನ್ನು ನಡೆಸಿದ್ದು ಇಂದೂ ಸಹ ಈಶ್ವರಪ್ಪನವರ ನೇತೃತ್ವದಲ್ಲಿ ನಿಯೋಗವು ಡಿಸಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ.
32 ಅಂಶಗಳ ಉತ್ತರಕ್ಕಾಗಿ ಈ ಹಿಂದೆ ಜಿಲ್ಲಾಧಿಕಾರಿಗಳು ಕಚೇರಿಯಲ್ಲಿ ಕೆಪಿಸಿಎಲ್ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿತ್ತು ಸಭೆಯಲ್ಲಿ ಈಗಾಗಲೇ ಕೆಪಿಸಿಎಲ್ ಎಮ್ ಡಿ ಉತ್ತರ ನೀಡದಂತೆ ಎಕ್ಸಿಕ್ಯೂಟಿವ್ ಇಂಜಿನಿಯರ್ ಗಳಿಗೆ ಸೂಚಿಸಿದ ಬೆನ್ನಲ್ಲೇ ಸಭೆಯಲ್ಲೂ ಸಹ ಇದುವರೆಗೆ ಮಾಹಿತಿ ದೊರೆತಿರಲಿಲ್ಲ.
ಇಂದು ಈಶ್ವರಪ್ಪನವರ ನೇತೃತ್ವದಲ್ಲಿ ಮತ್ತೊಂದು ಮನವಿ ಸಲ್ಲಿಸಲಾಯಿತು ಅಲ್ಲದೆ ಸ್ಥಳದಲ್ಲಿಯೇ ಕೆಪಿಸಿಎಲ್ ಉಮಾಪತಿಯವರಿಗೆ ಕರೆ ಮಾಡಿ ಏ.7ರಂದು ಸಮಗ್ರ ಉತ್ತರ ನೀಡುವಂತೆ ಆಗ್ರಹಿಸಿದ್ದಾರೆ. ಏ.7 ರಂದು ಮಾಹಿತಿ ನೀಡುವುದಾಗಿಯೂ ಸಹ ಉಮಾಪತಿಗಳು ತಿಳಿಸಿದ್ದಾರೆ.
ಅಲ್ಲದೆ ಇದೇ ತಿಂಗಳು ರಾಷ್ಟ್ರಭಕ್ತರ ಬಳಗ ಡಿಸಿಗೆ ಮತ್ತೊಂದು ಮನವಿ ಮಾಡಿದೆ. ಮತ್ತೊಂದು ಹೋರಾಟ ನಡೆಸಲು ಸಜ್ಜಾಗಿದ್ದು ಈ ಬಗ್ಗೆ ಏ.3 ರಂದು ಸುದ್ದಿಗೋಷ್ಠಿ ನಡೆಸಿ ತಿಳಿಸುವುದಾಗಿ ಈಶ್ವರಪ್ಪ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಈ ತಿಂಗಳ ಮಧ್ಯದಲ್ಲಿ ಫ್ರೀಡಂ ಪಾರ್ಕ್ ನಿಂದ ಬೈಕ್ ಜಾಥ ನಡೆಸಿ ಮಹಾವೀರ ವೃತ್ತದಲ್ಲಿ ರಸ್ತೆ ತಡೆ ನಡೆಸುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.
Another outing against Sharavathi Pumped Storage

