SUDDILIVE || SAGARA
ಸಾಗರ-ಚಿಕಿತ್ಸೆ ಫಲಕಾರಿಯಾಗದೆ ಸ್ಟಾಫ್ ನರ್ಸ್ ಸಾವು-Staff nurse dies after treatment fails
ಮಾ.29ರಂದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಡಯಾಗ್ನೋಸ್ಟಿಕ್ ಕೇಂದ್ರದ ಸ್ಟಾಫ್ ನರ್ಸ್ ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಅಸುನೀಗಿದ್ದಾರೆ.
ಶ್ವೇತಾ (30), ಮೃತ ಮಹಿಳೆ. ಮಾ.29ರಂದು ಸೊರಬ ತಾಲ್ಲೂಕಿನ ಉಳವಿಯ ತನ್ನ ಪತಿ ಮನೆಯಲ್ಲಿಯೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು.
ಗಾಯಾಳು ಶ್ವೇತಾ ಅವರನ್ನು ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶೇ.90ರಷ್ಟು ಸುಟ್ಟಗಾಯಗಳಿಂದ ಚಿಂತಾಜನಕ ಸ್ಥಿತಿಯಲ್ಲಿದ್ದ ಶ್ವೇತಾ ಚಿಕಿತ್ಸೆ ಫಲಿಸದೇ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ.
ಸೊರಬ ತಾಲ್ಲೂಕಿನ ಉಳವಿಯ ನಿವಾಸಿಯಾಗಿದ್ದ ಶ್ವೇತಾ ಅದೇ ಊರಿನ ನವೀನ್ ಎಂಬುವವರೊಂದಿಗೆ ಕಳೆದ ಏಳು ವರ್ಷಗಳ ಹಿಂದೆ ಮದುವೆಯಾಗಿದ್ದರು.ದಂಪತಿಗೆ ನಾಲ್ಕು ವರ್ಷದ ಹೆಣ್ಣು ಮಗು ಸಹ ಇದೆ. ಶ್ವೇತಾ ಈಗ ನಾಲ್ಕು ತಿಂಗಳ ಗರ್ಭಿಣಿ ಎಂದು ತಿಳಿದು ಬಂದಿದ್ದು,
ತನ್ನ ಅತ್ತೆಯ ಮನೆಯ ಹಿಂಭಾಗದಲ್ಲೇ ಈ ದಂಪತಿಗಳು ವಾಸವಿದ್ದರು.ಪ್ರಾಥಮಿಕ ವರದಿಗಳ ಪ್ರಕಾರ, ಈ ಘಟನೆಗೆ ಕೌಟುಂಬಿಕ ಸಮಸ್ಯೆಗಳೇ ಕಾರಣ ಎನ್ನಲಾಗುತ್ತಿದೆ. ಕುಟುಂಬದಲ್ಲಿ ಉಂಟಾದ ಮನಸ್ತಾಪ ಶ್ವೇತಾ ಈ ನಿರ್ಧಾರ ತೆಗೆದುಗೊಂಡಿರಬಹುದು ಎಂದು ಶಂಕಿಸಲಾಗಿದೆ.ಮೃತಳ ಪಾರ್ಥೀವ ಶರೀರ ಇಂದು ಸಂಜೆ ಹುಟ್ಟೂರು ಉಳವಿಗೆ ತಲುಪಲಿದೆ.
Staff nurse dies after treatment fails

