SUDDILIVE || SHIVAMOGGA
ERSS 112 ಪೊಲೀಸರಿಂದ ಅಮ್ಮ ಮತ್ತು ಮಗನ ರಕ್ಷಣೆ-ERSS 112 police rescues mother and son
ಬಾತ್ರೂಮ್ ನೊಳಗೆ ಸೇರಿಕೊಂಡ ಮಗ ಎಷ್ಟೇ ಕರೆದರೂ ಬಾಗಿಲು ತೆಗೆಯುತ್ತಿಲ್ಲ ಎಂದು ತಾಯಿಯೊಬ್ಬರು 112 ಪೊಲೀಸರಿಗೆ ಪೋನ್ ಮಾಡಿರುವ ಘಟನೆ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಹಿನ್ನೆಲೆ ಸ್ಥಳಕ್ಕೆ ಬಂದು ಯುವಕನ್ನು ವಿಚಾರಿಸಿದ ಪೊಲೀಸರಿಗೆ ಶಾಕ್ ಎದುರಾಗಿದೆ.
ಹೌದು ಈ ಘಟನೆ ಮಾರ್ಚ್ 30 ಕ್ಕೆ ನಡೆದಿದ್ದು, ಮಗ ಮನೆಯ ಬಾತ್ರೂಮ್ನೊಳಗೆ ಸೇರಿಕೊಂಡು ಬಾಗಿಲನ್ನು ಹಾಕಿಕೊಂಡಿದ್ದಾನೆ, ಸುಮಾರು ಸಮಯ ಕಳೆದರೂ ಸಹ ಮಗ ಬಾಗಿಲು ತೆರೆಯದ್ದಿದ್ದನ್ನು ಕಂಡು ಗಾಬರಿಯಾದ ತಾಯಿ ಬಾಗಿಲನ್ನು ಬಡೆದಿದ್ದಾರೆ, ಅಷ್ಟೇ ಅಲ್ಲದೆ ಬಾಗಿಲು ತೆರೆ ಎಂದು ಕೇಳಿಕೊಂಡಿದ್ದಾರೆ, ಎಷ್ಟೇ ಬಾಗಿಲು ಬಡೆದರು ಸಹ ಮಗ ಬಾಗಿಲು ತೆರೆಯದ ಕಾರಣ ತಾಯಿ ಗಾಬರಿಯಿಂದ ಕೂಡಲೇ 112 ಇ ಆರ್ ವಿ ಪೊಲೀಸರಿಗೆ ಪೋನ್ ಮಾಡಿದ್ದಾರೆ.
ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಬಾಗಿಲನ್ನು ತೆರೆಸಿದ್ದಾರೆ. ಆಗ ಯುವಕ ನಾನು ಫಿನಾಯಿಲ್ ಕುಡಿದಿದ್ದೇನೆ ಎಂದು ತಿಳಿಸಿದ್ದಾನೆ. ಕೂಡಲೇ ಸಮಯ ಪ್ರಜ್ಞೆ ಮೆರೆದ ಪೊಲೀಸರು ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ ಪೊಲೀಸರು ಯುವಕನ ಜೀವವನ್ನು ಉಳಿಸಿದ್ದಾರೆ.
ERSS 112 police rescues mother and son

