SUDDILIVE || SHIVAMOGGA
ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಅಸಾಮಿ ನ್ಯಾಯಾಂಗ ಬಂಧನಕ್ಕೆ-Assamee who absconded without appearing in court hearing remanded in judicial custody
6 ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರಿಸಿಕೊಂಡಿದ್ದ ಆರೋಪಿಯನ್ನ ಪತ್ತೆ ಮಾಡಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜಯನಗರ ಠಾಣಾ ಗುನ್ನೆ ನಂ 12/2019 ಕಲಂ 399, 402 ಐಪಿಸಿ ಪ್ರಕರಣದಲ್ಲಿನ ಆರೋಪಿಯಾದ ಜಾನ್ ಭರತ್, 30 ವರ್ಷ, ವೆಂಕಟೇಶ್ ನಗರ ಶಿವಮೊಗ್ಗ ಈತನು ಕಳೆದ 06 ವರ್ಷಗಳಿಂದ ಘನ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆ ಮರೆಸಿಕೊಂಡಿದ್ದನು. ಶಿವಮೊಗ್ಗದ ಮಾನ್ಯ 1ನೇ ಹೆಚ್ಚುವರಿ ಸಿವಿಲ್ & ಜೆ.ಎಂ.ಎಫ್.ಸಿ ನ್ಯಾಯಾಲಯವು CC No 6192/2025 ರಲ್ಲಿ ಆರೋಪಿಯ ವಿರುದ್ಧ ದಸ್ತಗಿರಿ ವಾರೆಂಟ್ ಹೊರಡಿಸಿರುತ್ತದೆ.
ಜಯನಗರ ಪೊಲೀಸ್ ಠಾಣೆಯ ಪಿ.ಐ ಶ್ರೀ ರವಿಪಾಟೀಲ್ ರವರ ನೇತೃತ್ವದಲ್ಲಿ, PSI-ಕೋಮಲಾ, HC-ಚಂದ್ರು, PC-ಗಣೇಶ್ ಆರೋಪಿಯನ್ನ ಪತ್ತೆ ಮಾಡಿದ್ದು.ದಿನಾಂಕ: 11/4/26ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತದೆ.
Assamee who absconded without appearing in court hearing remanded in judicial custody
