SUDDILIVE || SHIVAMOGGA
ವಿಜಯ ಬಸ್ ಪಲ್ಟಿ- Vijaya bus overturns
ಶಿಕಾರಿಪುರದಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮಾಲೀಕತ್ವದ ಕುಮಧ್ವತಿ ಕಾಲೇಜಿನ ಮುಂಭಾಗದಲ್ಲಿ ಖಾಸಗಿ ಬಸ್ ವೊಂದು ಪಲ್ಟಿ ಹೊಡೆದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.
ಶಿಕಾರಿಪುರ ಪಟ್ಟಣದ ಕುಮದ್ವತಿ ಕಾಲೇಜ್ ಎದುರು ವಿಜಯ ಬಸ್ ಉರುಳಿ ಬಿದ್ದು ಭೀಕರ ಅಪಘಾತ ಸಂಭವಿಸಿದೆ. ಶಿವಮೊಗ್ಗ ದಿಂದ ಶಿಕಾರಿಪುರಕ್ಕೆ ಬರುತ್ತಿದ್ದ ಬಸ್ ಮುಂಭಾಗ ಬೈಕ್ ಹೋಗುತ್ತೀದ್ಫು, ಬೈಕ್ ಸವಾರ ಹoಪ್ ತಪ್ಪಿಸಲು ಹೋಗಿ ಬಸ್ಸಿನ ಬಲ ಭಾಗ ತಿರಿಗಿಸಿದ್ದು, ಅಪಘಾತ ತಪ್ಪಿಸಲು ಹೋದ ಬಸ್ ಚಾಲಕ ಎಡಗಡೆ ತಿರಿಗಿಸಿದ್ದಾನೆ.
ಮತ್ತೆ ಬೈಕ್ ಸವಾರ ಎಡಗಡೆ ತಿರಿಗಿಸಿದಾಗ ಬಸ್ಸನ್ನು ಬಲಗಡೆ ತಿರುಗಿಸುವ ಸಂದರ್ಭದಲ್ಲಿ ಬಲಗಡೆ ಇದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬಸ್ ಉರುಳಿ ರಸ್ತೆಗೆ ಬಿದ್ದಿದ್ದೆ. ಪರಿಣಾಮ ಬಸ್ ನಲ್ಲಿದ್ದ 40 ಜನ ಪ್ರಯಾಣಿಕರಲ್ಲಿ 27 ಜನರಿಗೆ ಗಾಯಗಳಾಗಿದೆ. ಎಲ್ಲರಿಗೂ ಸರಕಾರಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದರಲ್ಲಿ 7 ಜನರನ್ನ ಶಿವಮೊಗ್ಗದ ಮೆಗ್ಗನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜೀವಕ್ಕೆ ಯಾವ ಪ್ರಯಾಣಿಕರಿಗೂ ತೊಂದರೆ ಉಂಟಾಗಿಲ್ಲ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ
Vijaya bus overturns
