SUDDILIVE || BHADRAVATHI
ಭದ್ರಾವತಿಯಲ್ಲಿ ಹೆಜ್ಜೇನು ದಾಳಿ-ಗಾಯಾಳು ಆಸ್ಪ್ರತ್ರೆಗೆ ದಾಖಲು-Bee attack in Bhadravati - injured person admitted to hospital
ಮೊನ್ನೆ ಗುಡ್ ಫ್ರೈಡೇ ದಿನ ಶಿವಮೊಗ್ಗದ ಸೇಕ್ರೆಡ್ ಹಾರ್ಟ್ ನಲ್ಲಿ ಹೆಜ್ಜೇನು ದಾಳಿ ನಡೆಸಿ ಒಂದಿಷ್ಟು ಜನರಿಗೆ ಗಾಯವಾಗಿತ್ತು. ಅದಾಗಿ ನಾಲ್ಕೈದು ದಿನಗಳ ಅಙತರದಲ್ಲಿಯೇ ಭದ್ರಾವತಿಯಲ್ಲಿ ಹೆಜ್ಜೇನು ದಾಳಿ ನಡೆಸಿ 10 ಜನರಿಗೆ ಆಸ್ಪತ್ರೆಗೆ ಸೇರುವಂತೆ ಮಾಡಿದೆ.
ಭದ್ರಾವತಿಯ ವಿಐಎಸ್ಎಲ್ ಕ್ರೀಡಾಂಗಣದಲ್ಲಿ ಇಂದು ಕ್ರಿಕೆಟ್ ಟೂರ್ನಮೆಂಟ್ ಹಮ್ಮಿಕೊಳ್ಳಲಾಗಿತ್ತು. ಕ್ರಿಕೆಟ್ ಟೂರ್ನಮೆಂಟ್ ವೇಳೆ ಆಟವಾಡುವಾಗಲೆ ಹೆಜ್ಜೇನು ದಾಳಿ ನಡೆಸಿ 10 ಜನರನ್ನ ಕಚ್ಚಿದೆ. 10 ಜನರು ಭದ್ರಾವತಿಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹೆಜ್ಜೇನು ದಾಳಿಗೆ ಸ್ಪೀಕರ್ ಬಳಕೆಯಿಂದಾಗಿ ನಡೆದಿರುವ ಶಂಕೆ ವ್ಯಕ್ತವಾಗುತ್ತಿದೆ. ಒಟ್ಟಿನಲ್ಲಿ ಹೆಜ್ಜೇನು ದಾಳಿ ಜಿಲ್ಲೆಯಲ್ಲಿ ದಿನೆ ದಿನೆ ಹೆಚ್ಚಾಗುತ್ತಿದೆ. ವಿಐಎಸ್ ಎಲ್ ಕ್ರೀಡಾಂಗಣದಲ್ಲಿ ಜೈನ್ ಲೀಗ್ ಟೂರ್ನಮೆಂಟ್ ನಡೆಯುತ್ತಿದ್ದು ಇದನ್ನ ಈ ಮಂಗಳ ವಾರ ಮತ್ತು ಮುಂದಿನ ಮಂಗಳವಾರ ನಡೆಸಲು ನಿಯೋಜಿಸಲಾಗಿತ್ತು.
ಭದ್ರಾವತಿಯ ಜೈನ್ ಸಮುದಾಯದ ವ್ಯಾಪಾರಿಗಳು ಸೇರಿ ಕ್ರಿಕೆಟ್ ಟೂರ್ನಿಮೆಂಟ್ ನಡೆಸುತ್ತಿದ್ದು ಇಂದು ಬೆಳಿಗ್ಗೆ ಈ ಘಟನೆ ನಡೆದಿದೆ. ಸಧ್ಯಕ್ಕೆ ಯಾರಿಗೂ ಪ್ರಾಣಾಪಾಯವಾಗಿರುವ ಬಗ್ಗೆ ವರದಿಯಾಗಿಲ್ಲ.
Bee attack in Bhadravati - injured person admitted to hospital
