SUDDILIVE || SHIVAMOGGA
ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಎದುರು ವಾಟಾಳ್ ಮಂಜು ಪ್ರತಿಭಟನೆ- Vatal Manju protest in front of the district in-charge minister's office
ಶಿವಮೊಗ್ಗ ತಾಲೂಕಿನ ರಾಮೇನಕೊಪ್ಪ ಗ್ರಾಮದ ನಿವಾಸಿಗಳು ಮತ್ತು ಕಾರ್ಮಿಕರಿಗೆ ಹಕ್ಕುಪತ್ರ ನೀಡುವುದರ ಬಗ್ಗೆ ನೆಹರೂ ರಸ್ತೆಯಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಎದುರು ವಾಟಾಳ್ ಮಂಜು ಅವರ ನೇತೃತ್ವದಲ್ಲಿ ಕನ್ನಡ ಕಾರ್ಮಿಕ ರಕ್ಷಣೆ ವೇದಿಕೆ ಅಹೋರಾತ್ರಿ ಧರಣಿ ನಡೆಸಿದೆ.
ರಾಮೇನಕೊಪ್ಪ ಗ್ರಾಮದಲ್ಲಿ ಹಲವಾರು ವರ್ಷಗಳಿಂದ ವಯಸ್ಸಾದ ವೃದ್ಧರು, ಬಡ ಕಾರ್ಮಿಕರು, ಸರ್ಕಾರಿ ಗ್ರಾಮಠಾಣ ಜಾಗದಲ್ಲಿ ಸಣ್ಣಪುಟ್ಟ ಮನೆಗಳು ಮತ್ತು ಗುಡಿಸಲು ಗಳನ್ನ ಕಟ್ಟಿಕೊಂಡು ವಾಸವಾಗಿದ್ದರು ವಿದ್ಯುತ್, ನೀರು ಸೌಕರ್ಯಗಳಿಲ್ಲದೆ ವಂಚಿತರಾಗಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳಿಗೆ ನೇರವಾಗಿ ಮನವಿ ನೀಡಿದರು ಇದುವರೆಗೂ ಹಕ್ಕುಪತ್ರ ನೀಡಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಸಂಬಂಧಪಟ್ಟ ಅಧಿಕಾರಿಗಳಿಗೆ ಹಕ್ಕುಪತ್ರ ನೀಡುವಂತೆ ಸೂಚಿಸಿದರೂ ಅಧಿಕಾರಿಗಳು, ಅಸಡ್ಡೆ, ನಿರ್ಲಕ್ಷ ತೋರಿಸಿ ದರ್ಪಮೆರೆದಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಆದುದರಿಂದ ಪಿಡಿಒಗಳನ್ನ ವಜಾಗೊಳಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಇದೇ ವೇಳೆ ಸ್ಥಳಕ್ಕೆ ಭೇಟಿ ನೀಡಿದ ಇಒ ರಾಮೇನಕೊಪ್ಪದಲ್ಲಿರುವ ಮನೆಗಳು UTP ಯ ಮೇಲ್ದಂಡೆಯಲ್ಲಿದ್ದು ಅವುಗಳ ಬಗ್ಗೆ ಕೂಲಂಕುಷವಾಗಿ ಅವಲೋಕಿಸಿ ನಂಯರ ಜಂಟಿ ಸರ್ವೆ ಮಾಡಿ ನಂತರ ಹಕ್ಕು ಪತ್ರ ನೀಡಲಾಗುವುದು ಎಂದು ಭರವಸೆ ನೀಡಿದರು.
Vatal Manju protest in front of the district in-charge minister's office
