SUDDILIVE || SHIVAMOGGA
FTA ಕುರಿತು ರಾಜ್ಯ ಸರ್ಕಾರ ವಿಶೇಷ ಸಭೆ ಕರೆಯಲು ಪ್ರಕಾಶ್ ಕಮ್ಮರಡಿ ಆಗ್ರಹ-Prakash Kammarady demands that the state government convene a special meeting on FTA
ಅಂತರಾಷ್ಟ್ರೀಯ ವಾಣಿಜ್ಯ ಒಪ್ಪಂದಗಳಿಂದ ರಾಜ್ಯದ ಕೃಷಿಗೆ ಮಾರಕ ಹೊಡೆತ ಬೀಳಲಿದ್ದು, ಇದಕ್ಕೆ ವಿಶೇಷ ಅಧಿವೇಶನ ನಡೆಸುವಂತೆ ಕೃಷಿ ಆರ್ಥಿಕ ತಜ್ಞ ಡಾ.ಟಿ.ಎನ್ ಪ್ರಕಾಶ್ ಕಮ್ಮರಡಿ ತಿಳಿಸಿದರು.
ಎರಡು ಪ್ರಮುಖ ಕೃಷಿ ಬೆಳಗೆ ಯೂರಿಪಿಯನ್ ದೇಶದಿಂದಿಗೆ ಎಫ್ ಟಿಎ ಮಾಡಿಕೊಂಡ ಕಾರಣ ಇದರ ಪರಿಣಾಮದ ಮೇಲೆ ಸಿಎಂ ಗೆ ಪ್ರತ್ಯೇಕ ಸಭೆ ನಡೆಸಲು ಕೋರಿದ್ದೆ. ಕೃಷಿ ಎಂಬ ವಿಷಯ ರಾಜ್ಯಕ್ಕೆ ಸಙಬಂಧಿಸಿದ್ದು, ವಾಣಿಜ್ಯ ಬೆಳೆ ಎಂದರೆ ಕೇಂದ್ರಕ್ಕೆ ಸಂಬಂಧಿಸಿದ್ದು. ಹಾಗಾಗಿ ರಾಜ್ಯ ಸರ್ಕಾರ ಪಂಜಾಬ್ ರಾಜ್ಯ ವಿಶೇಷ ಸಭೆ ನಡೆಸಿತ್ತು. ಅದರಂತೆ ಕರ್ನಾಟಕದಲ್ಲೂ ಮಾಡಿ ಎನ್ನಲಾಗಿತ್ತು.
ಮೆಕ್ಕೆ ಜೋಳ, ತೆಂಗು, ಕಾಫಿ, ರೇಷ್ಮೆ ಬೆಳೆಗೆ ನಂದಿನಿ ಉತ್ಪನ್ನಗಳಿಗೆ ನಮ್ಮ ಮಾರುಕಟ್ಟೆಯಲ್ಲಿ ಪೈಪೋಟಿ ಬೆಳೆಯಲಿದೆ. ಹಾಗಾಗಿ ಕೃಷಿ ಮತ್ತು ಹೈನುಗಾರಿಕೆಯನ್ನ FTA ಯಿಂದ ಹೊರಗಿಡಬೇಕು. ಇದಕ್ಕಾಗಿ ಕೇಂದ್ರದ ಮೇಲೆ ಒತ್ತಡ ತರಬೇಕಿದೆ. ಹಾಗಾಗಿ ರಾಜ್ಯ ಸರ್ಕಾರ ವಿಷೇಶ ಅಧಿವೇಶನ ಕರೆದು ನಿಯೋಗವನ್ನ ರಚಿಸಬೇಕೆಂದು ಆಗ್ರಹಿಸಿದೆ.
ಈ ಒಪ್ಪಂದಗಳ ಪರಿಣಾಮ ಕುರಿತು ತಜ್ಞರಿಂದ ಸಮಗ್ರ ಅಧ್ಯಯನ ನಡೆಸಿ ಶ್ವೇತಪತ್ರ ಹೊರಡಿಸಬೇಕು. ನಿರಂತರ ನಿಗಾ ಇಡಲು ಕೃಷಿ ವಾಣಿಜ್ಯ ಒಪ್ಪಂದ ನಿಗಾ ಘಟಕ ಸ್ಥಾಪಿಸಬೇಕು, ಬೆಂಬಲ ಬೆಲೆ ಖಾತರಿ ಆಗುವ ಕಾನೂನು ತನ್ನಿ ಎಂದರು.
ರಾಜ್ಯ ರೈತ ಸಂಘದ ಬಸವರಾಜಪ್ಪ ಮಾತನಾಡಿ, ಹೈನುಗಾರಿಕೆ ಜೋಳ, ಸೋಯಬಿನ್ ಗಳು ಹಳ್ಳಿಯ ಜನರು ಬೀದಿಗೆ ಬೀಳಲಿದ್ದಾರೆ.ಆರೋಗ್ಯ ಮೇಲೂ ದುಷ್ಪರಿಣ ಬೀಳಲಿದೆ. ಭಾರತ ದೇಶದ ಮಂತ್ರಿಗಳು ನಮ್ಮಕೃಷಿಯನ್ನ ಸಂರಕ್ಷಿಸುವ ಬಗ್ಗೆ ಭರವಸೆ ನೀಡಿದ್ದಾರೆ. ಆದರೆ ನಂಬಿಕೆಯಿಲ್ಲ. ಅಮೇರಿಕಾದ ಮುಂದೆ ಭಾರತ ಬೆಂಡಾಗಿರುವ ಬಗ್ಗೆ ಈಗಾಗಲೇ ನೋಡಿದ್ದೇವೆ. ಆದರೆ ಇವರ ಮೇಲೆ ನಂಬಿಕೆಯಿಲ್ಲ ಎಂದು ಆರೋಪಿಸಿದರು.
Prakash Kammarady demands that the state government convene a special meeting on FTA
