SUDDILIVE || SHIVAMOGGA
ಪಾರ್ಕ್ ಬಡಾವಣೆಯಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನಶವ ಪತ್ತೆ- Body of young man found hanging from a tree in Park Layout
ನಗರದ ಪಾರ್ಕ್ ಬಡಾವಣೆಯ ರಸ್ತೆ ಬದಿಯ ಮರವೊಂದರಲ್ಲಿ ಇಂದು ಮಧ್ಯಾಹ್ನ ಯುವಕನೊಬ್ಬನ ಮೃತದೇಹ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಡೆತ್ ನೋಟ್ ಸಹ ಸಿಕ್ಕಿದೆ.
ಮೃತನನ್ನು ಹರಮಘಟ್ಟದ ದೇವರಾಜ್ (34) ಎಂದು ಗುರುತಿಸಲಾಗಿದೆ. ಮಥುರಾ ಪ್ಯಾರಡೈಸ್ ರಸ್ತೆಯ ಪಕ್ಕದ ಮರದಲ್ಲಿ ಯುವಕನ ಮೃತದೇಹ ನೇತಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸಾವು ಮಹಾಪಾಪ ಆದರೂ ಸಾಯ್ತಾಯಿದ್ದೀನಿ ಅಮ್ಮ ಮಿಸ್ ಯು ಎಂದು ಡೆತ್ ನೋಟ್ ಸಹ ಬರೆದು ಸಾವನ್ನಪ್ಪಿದ್ದಾರೆ. ಇಂದು ಮಧ್ಯಾಹ್ನ ಈ ಘಟನೆ ನಡೆದಿದೆ.
Body of young man found hanging from a tree in Park Layout

