SUDDILIVE || SHIVAMOGGA
ಬಜಾರ್ ನಲ್ಲಿ ನಡೆದ ಶ್ರೀ ಬಸವೇಶ್ವರ ಸ್ವಾಮಿ ರಥೋತ್ಸವ-Sri Basaveshwara Swamy Rathothsava held at the Bazaar
ಗಾಂಧಿ ಬಜಾರಿನ ಬಸವೇಶ್ವರ ದೇವಸ್ಥಾನದಲ್ಲಿ ಶ್ರೀ ಬಸವೇಶ್ವರ ವೀರಶೈವ ಲಿಂಗಾಯತ ಸಮಾಜ ಸೇವಾ ಸಂಘದ ವತಿಯಿಂದ ಶ್ರೀ ಬಸವೇಶ್ವರ ಸ್ವಾಮಿ ಮತ್ತು ಶ್ರೀ ವೀರಭದ್ರೇಶ್ವರ ಸ್ವಾಮಿಗಳ ಮಹಾರಥೋತ್ಸವ ಇಂದು ಜರಗಿದೆ.
ಇಂದು ಬೆಳಿಗ್ಗೆ 8:00ಗೆ ವೀರಶೈವ ಕಲ್ಯಾಣ ಮಂದಿರದ ಹಿಂಭಾಗದಲ್ಲಿರುವ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನ ಚೌಡಕಿ ಮಠ ದಲ್ಲಿ ಶ್ರೀ ವೀರಭದ್ರೇಶ್ವರ ಸ್ವಾಮಿಗಳ ಗುಗ್ಗಳ ಮತ್ತು ಕೆಂಡಾರ್ಚನೆ ಜರುಗಿದೆ. ನಂತರ ಗಾಂಧಿ ಬಜಾರ್ ನಲ್ಲಿ ಶ್ರೀ ಬಸವೇಶ್ವರ ಸ್ವಾಮಿಗಳ ರಥೋತ್ಸವವನ್ನು ಎಳೆಯಲಾಯಿತು.
ಭಕ್ತಾದಿಗಳು ಬಸವೇಶ್ವರ ಸ್ವಾಮಿಗಳ ರಥ ಬರುತ್ತಿದ್ದಂತೆಯೇ ದೇವಸ್ಥಾನದ ಮುಂದೆ ಹಗ್ಗಗಳನ್ನು ಹಿಡಿದು ತೇರನ್ನು ಎಳೆದಿದ್ದಾರೆ ಹರಕೆ ಸಂಬಂಧ ಈ ವೇಳೆ ಬಾಯಿಗೆ ತಾಮ್ರದ ತಂತಿಯನ್ನು ಭಕ್ತಾದಿಗಳು ಚುಚ್ಚಿಕೊಂಡು ತೇರನ್ನು ಎಳೆದಿರುವುದು ವಿಶೇಷವಾಗಿದೆ.
Sri Basaveshwara Swamy Rathothsava held at the Bazaar
