SUDDILIVE || SAGARA
ಕೆಫೆ ಮಾಲೀಕನಿಂದ ಕಾರ್ಮಿಕನ ಮೇಲೆ ಹಲ್ಲೆ, ಕಾರ್ಮಿಕ ಸಾವು-Cafe owner attacks worker, worker dies
ಸಾಗರದಲ್ಲಿ ಕೆಫೆ ಮಾಲೀಕ ಥಳಿಸಿದ ಹಿನ್ನಲೆಯಲ್ಲಿ ಕಾರ್ಮಿಕನ ಸಾವಾಗಿದ್ದು ಮಾಲೀಕ ಪೊಲೀಸರ ವಶದಲ್ಲಿದ್ದಾನೆ. ಸ್ಥಳಕ್ಕೆ ಭೇಟಿ ನೀಡಿದ ಎಸ್ಪಿ ನಿಖಿಲ್ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಕೊಲೆ ನಡೆದಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ಶಿವಮೊಗ್ಗ ರಸ್ತೆಯಲ್ಲಿರುವ ರೂಫ್ ಟಾಪ್ ಕೆಫೆಯಲ್ಲಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ಟಿಂಕು ಶರ್ಮಾ (30),ಮೃತಪಟ್ಟ ಸ್ಥಿತಿಯಲ್ಲಿ ಹೊಂಡಾಸಿಟಿ ಕಾರಿನಲ್ಲಿ ಆತನ ಶವ ಗುರುವಾರ ಬೆಳಗ್ಗೆ ಪತ್ತೆಯಾಗಿದೆ.ಕೆಫೆ ಮಾಲಿಕ ಇಮ್ರಾನ್ (30), ಕೊಲೆ ಮಾಡಿದ ಆರೋಪಿ ಎಂದು ಗುರುತಿಸಲಾಗಿದೆ.
ಕಳೆದ 7 ತಿಂಗಳಿಂದ ಬಿಹಾರದಿಂದ ಸಾಗರಕ್ಕೆ ಬಂದಿದ್ದ ಟಿಂಕು ಶರ್ಮಾ ಶೆಫ್, ಸರ್ವರ್ ಕೆಲಸ ಮಾಡಿಕೊಂಡಿದ್ದನು. ಪಕ್ಕದ ಅಂಗಡಿಯೊಂದಿಗೆ ಟಿಂಕುವಿನ ಸ್ನೇಹವಿತ್ತು. ಇದು ಮಾಲೀಕನಿಗೆ ಆಗಿಬರುತ್ತಿರಲಿಲ್ಲ ಎಂಬುದು ಸ್ಥಳೀಯರ ಮಾಹಿತಿಯಾಗಿದೆ.
ಇದರ ಜೊತೆ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಮಾಲಿಕ ಹಾಗೂ ಕಾರ್ಮಿಕನ ನಡುವೆ ನಿನ್ನೆ ರಾತ್ರಿಯಿಂದಲೂ ಜಗಳ ನಡೆಯುತ್ತಿತ್ತು,ಬೆಳಗ್ಗೆ ಕೂಡ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಆರೋಪಿ ಹಾಗೂ ಮೃತನ ನಡುವೆ ವಾಗ್ವಾದ ನಡೆದಿದೆ.ಈ ವೇಳೆ ಮಾಲಿಕ ಇಮ್ರಾನ್ ಕೆಲಸದಾಳುವಿಗೆ ಹಲ್ಲೆ ಮಾಡಿದ್ದಾನೆ ಎಂದು ಎಸ್ಪಿ ನಿಖಿಲ್ ಪ್ರಾಥಮಿಕ ಮಾಹಿತಿ ನೀಡಿದರು. ಆರೋಪಿ ಇಮ್ರಾನ್ ಪೋಲಿಸ್ ವಶದಲ್ಲಿದ್ದು ಹೆಚ್ಚಿನ ತನಿಖೆ ನಡೆಯುತ್ತಿದೆ.
Cafe owner attacks worker, worker dies
