SUDDILIVE || SHIVAMOGGA
ಮುಸ್ಲೀಂ ಯುವಕರನ್ನ ಸಮಾಜದ ಮುಖಂಡರು ಬದಲಾಯಿಸಲಿ, ಮೃತ ಸಂಕೇತ್ ತಾಯಿಗೆ ಈಶ್ವರಪ್ಪ ಕೆಲಸದ ಭರವಸೆ- Let the leaders of society change Muslim youth - Eshwarappa
ಹಾನಿಗೊಳಗಾದ ಸಂಕೇತ್ ಸಮಾದಿಗೆ ರಾಷ್ಟ್ರಭಕ್ತರ ಬಳದ ಮಾಜಿ ಡಿಸಿಎಂ ಈಶ್ವರಪ್ಪ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹಾನಿಗೊಳಗಾದ ಸಮಾದಿಯನ್ನ ಮರುಸ್ಥಾಪಿಸಿದ ಬಗ್ಗೆ ಪ್ರಶ್ನಿಸಿದ ಈಶ್ವರಪ್ಪ ಯಾರೂ ಈ ಸಮಾದಿಯನ್ನ ಮರುಸ್ಥಾಪಿಸಿದರು ಎಂದು ಪ್ರಶ್ನಿಸಿ ಡಿಪಾರ್ಟ್ ಮೆಂಟ್ ಕಟ್ಟಿಸಿಕೊಡಲಿಲ್ಲವಾ ಎಂದು ಕುಟುಂಬವನ್ನ ಕೇಳಿದರು.
ಕುಟುಂಬ ಇಲ್ಲ ನಾವೇ ಕಟ್ಟಿಕೊಂಡಿದ್ದು ಎಂದರು. ನಂತರ ಮನೆಗೆ ಭೇಟಿ ನೀಡಿದ ಈಶ್ವರಪ್ಪ ತಮ್ಮ ಮಾಲಿಕತ್ವದ ನಂದನ್ ಎಜುಕೇಷನ್ ಟ್ರಸ್ಟ್ ನಲ್ಲಿ ಮೃತ ಸಂಕೇತ್ ತಾಯಿಗೆ ಕೆಲಸ ಕೊಡುವ ಭರವಸೆ ನೀಡಿದ್ದಾರೆ. ಇದಕ್ಕೂ ಮೊದಲು ಮಾಧ್ಯಮಗಳಿಗೆ ಮಾತನಾಡಿದ ಈಶ್ವರಪ್ಪ ಸಂಕೇತ್ ಸಮಾದಿ ಹಾಳುಗೈದಿರುವ ಮುಸ್ಲೀಂ ಯುವಕರಿಗೆ ಸಮಾಜ ತಿದ್ದಿ ಬುದ್ದಿ ಹೇಳಲಿ ಎಂದರು.
ಫೆ.೨೩ ರಂದು ಕಗ್ಗೊಲೆ ಮಾಡಲಾಗಿತ್ತು. ಡ್ರಗ್ಸ್ ಸೇವಿಸಿ ಮಾಡಿದ್ದಾರೆ ಎಂದು ಹೇಳಿದ್ರು. ಈಗ ಸಂಕೇತ್ ಸಮಾಧಿಯನ್ನು ಚೂರು ಚೂರು ಮಾಡಿದ್ದಾರೆ. ಕೊಲೆ ಕೂಡ ವ್ಯವಸ್ಥಿತವಾಗಿ ಮಾಡಿದ್ದಾರೆ. ಇದರಲ್ಲಿ ಯಾವುದೇ ಅನುಮಾನವಿಲ್ಲ.ಮುಸಲ್ಮಾನ ಗೂಂಡಾಗಳಿಂದ ಈ ಕೃತ್ಯ ನಡೆದಿದೆ ಎಂದರು.
ಹೊರಗಡೆ ದೇಶ ದ್ರೋಹಿ ಮನಸ್ಥಿತಿ, ಹಿಂದುಗಳ ಕಗ್ಗೊಲೆ ಮಾಡುವ ಮನಸ್ಥಿತಿ ಇದೆ. ಕೊಲೆ, ಸಮಾಧಿ ಧ್ವಂಸ ಈ ಕೃತ್ಯಗಳನ್ನು ಗೃಹಮಂತ್ರಿಗಳು ತಡೆಗಟ್ಟಬೇಕು. ಮಟ್ಟ ಹಾಕುವ ಪೌರುಷ ಯಾಕೆ ತೋರಿಸ್ತಾ ಇಲ್ಲ. ಎಸ್ಪಿ ಅವರು ಸಮಾದಿ ಹಾಳುಗೈದಿರುವ ಬಗ್ಗೆ ೨ ತಂಡ ರಚನೆ ಮಾಡಿರೋದಾಗಿ ಹೇಳಿದ್ದಾರೆ.ಸರ್ಕಾರ ಮುಸಲ್ಮಾನರ ಪರ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದ ವಿರುದ್ಧ ಧಂಗೆ ಏಳುವ ಪರಿಸ್ಥಿತಿ ಬಂದರೆ ಅಚ್ಚರಿಯಿಲ್ಲ. ಮುಸ್ಲಿಮರು ತಮ್ಮ ಮಕ್ಕಳ ಮನಸ್ಥಿತಿಯನ್ನು ಬದಲಾವಣೆ ಮಾಡಬೇಕು. ಕೊಲೆ,ಧ್ವಂಸ ಆಗದಂತೆ ನೋಡಿಕೊಳ್ಳಬೇಕು.. ಮುಸಲ್ಮಾನ ನಾಯಕರು ಎಚ್ಚೆತ್ತುಕೊಳ್ಳಬೇಕು ಎಂದು ಸಲಹೆ ನೀಡಿದರು.
Let the leaders of society change Muslim youth - Eshwarappa
