SUDDILIVE || SHIVAMOGGA
ಪಾರ್ಕ್ ನಲ್ಲಿ ಅನಧಿಕೃತ ಕೊಟ್ಟಿಗೆ ನಿರ್ಮಾಣ, ಕೇಳಲು ಹೋದ ಸ್ಥಳೀಯರಿಗೆ ಬೈಗುಳ- Unauthorized barn construction in park, locals who went to inquire were scolded
ಪಾಲಿಕೆಗೆ ಸೇರಿದ ಪಾರ್ಕ್ ನಲ್ಲೇ ಅನಧಿಕೃ ದನದಕೊಟ್ಟಿಗೆ ಕಟ್ಟಿಕೊಂಡಿದ್ದು ಇದನ್ನ ಪ್ರಶ್ನಿಸಿದ ಸ್ಥಳೀಯರನ್ನ ಬೈದು ಕಳುಹಿಸಿದ ಅನಧಿಕೃತ ಕೊಟ್ಟಿಗೆಯ ಮಾಲೀಕನ ವಿರುದ್ಧ ಕ್ರಮಕ್ಕೆ ಸ್ಥಳೀಯರು ಪಾಲಿಕೆಗೆ ದೂರು ನೀಡಿದ್ದಾರೆ.
ಗುಂಡಪ್ಪ ಶೆಡ್ ನ ಎನ್ ಇಎಸ್ ಶಾಲೆ ಹಿಂಭಾಗದ ಮಹಾನಗರ ಪಾಲಿಕೆಯ ಪಾರ್ಕ್ ಇದ್ದು ಅಲ್ಲಿ ಅನಧಿಕೃತ ಶೆಡ್ ನಿರ್ಮಿಸಿ ದನದ ಕೊಟ್ಟಿಗೆ ಕಟ್ಟಿಕೊಳ್ಳಲಾಗಿದೆ. ಪಾರ್ಕ್ ನಲ್ಲಿ ಶೌಚಾಲಯ, ದನ ಹಾಗೂ ಕುದರೆಯನ್ನೇ ಕಟ್ಟಿ ಗಲೀಜು ಮಾಡುವುದರಿಂದ ಇಲ್ಲಿ ಪಾರ್ಕ್ ಗೆ ಬರುವ ಸಾರ್ವಜನಿಕರು ಇದನ್ನ ಪ್ರಶ್ನಿಸಿದ್ದಾರೆ.
ಇದು ನಿಮಗೇಕೆ, ಯಾರು ಕೇಳಬೇಕೋ ಅವರು ಬರಲಿ ಮಾತನಾಡುತ್ತೇವೆ ನೀವು ಯಾರು ಎಂದು ಅನಧಿಕೃತ ಕೊಟ್ಟಿಗೆ ಮಾಲೀಕ ಮರು ಪ್ರಶ್ನಿಸಿದ್ದಾನೆ. ಇದರಿಂದ ಸ್ಥಳೀಯರು ಮಹಾನಗರ ಪಾಲಿಕೆಯ ಆಯುಕ್ತರನಗನಭೇಟಿ ನೀಡಿ ಅನಧಿಕೃತ ಕೊಟ್ಟಿಗೆ ಹಾಗೂ ದಿನನಿತ್ತ ಕುದುರೆ ಮತ್ತು ದನಕಟ್ಟುವವನ ವಿರುದ್ಧ ಹಾಗೂ ದನದ ಕೊಟ್ಟಿಗೆ ತೆರವು ಮಾಡುವಂತೆ ಆಗ್ರಹಿಸಿದ್ದಾರೆ.
Unauthorized barn construction in park, locals who went to inquire were scolded
