SUDDILIVE || SHIVAMOGGA
ಅನುಮಾನ ಸ್ಪದವಾಗಿ ಕೂಲಿ ಕಾರ್ಮಿಕ ಸಾವು-Laborer dies under suspicious circumstances
ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಕೂಲಿಕೆಲಸಗಾರನೊಬ್ಬ ತುಂಗ ನಗರ ಪೊಲೀಸ್ ಠಾಣೆಯ ಎದುರಿನ ಕಾಮತ್ ಲೇಔಟ್ ನಲ್ಲಿ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ಅಡಿಕೆ ಮಂಡಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದ ಮಂಜುನಾಥ್ (25) ಕಾಮತ್ ಲೇ ಔಟ್ ನಲ್ಲಿರುವ ತೆಂಗಿನ ತೋಟದ ಬಳಿ ಅನುಮಾನಸ್ಪದವಾಗಿ ಸಾವುಕಂಡಿದ್ಸನೆ. ನಿನ್ನೆ ಬೆಳಿಗ್ಗೆ ಬೇರೆ ಊರಿಗೆ ಹೋಗುವ ಸಲುವಾಗಿ ಬ್ಯಾಗ್ ಸಮೇತ ರೆಡಿಯಾಗಿದ್ದನು.
ನಿನ್ನೆ ಸ್ನೇಹಿತನ ಜೊತೆ ಕೆಲಸಕ್ಕೆ ತೆರಳಿದ್ದ ಮಂಜುನಾಥ್ ಕಾಮತ್ ಲೇ ಔಟ್ ಗೆ ಬಂದಿದ್ದು ಹೆಣವಾಗಿದ್ದಾನೆ. ಎಳನೀರು ತೋಟದಲ್ಲಿ ಎಳನೀರು ಕದಿಯಲು ಹೋಗಿ ಮರದಿಂದ ಬಿದ್ದು ಸಾವನ್ನಪ್ಪಿರುವ ಅನುಮಾನವೂ ಸಹ ಇದೇ ವೇಳೆ ವ್ಯಕ್ತವಾಗಿದೆ.
ಮಂಜುನಾಥ್ ಮದುವೆಯಾಗಿರಲಿಲ್ಲ. ಅಕ್ಕನ ಜೊತೆ ತುಂಗ ನಗರದ ಆಸ್ಪತ್ರೆಯ ಬಳಿಯಿರುವ ಮನೆಯಲ್ಲಿ ವಾಸವಾಗಿದ್ದನು. ಯಾರೋ ಕೊಲೆ ಮಾಡಿರುವುದಾಗಿ ಕುಟುಂಬ ಆರೋಪಿಸಿದರೂ ಪೊಲೀಸರ ತನಿಖೆ ಏನು ಹೇಳಲಿದೆ ಕಾದು ನೋಡಬೇಕಿದೆ.
Laborer dies under suspicious circumstances
