SUDDILIVE || BHADRAVATHI
ಜಾತಿ ನಿಂದನೆ ಪ್ರಕರಣ-ಐವರಿಗೆ ಶಿಕ್ಷೆ-Caste abuse case - Five sentenced
ರಾತ್ರೋರಾತ್ರಿ ಮನೆಗೆ ನುಗ್ಗಿ ಪತಿಯನ್ನ ಹುಡುಕಿಕೊಂಡು ಬಂದ ಐವರು ಪತ್ನಿಯನ್ನ ಜಾತಿ ನಿಂದನೆ ಮಾಡಿ ಆಕೆಯ ಜಡೆಯನ್ನ ಹಿಡಿದು ಎಳೆದು ಸೀರೆ ಎಳೆದು ಅವಮಾನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರ ವಿರುದ್ಧ ಮಾನ್ಯ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ದಿನಾಂಕ: 06-06-2023 ರಂದು ರಾತ್ರಿ 11.45 ಗಂಟೆಗೆ ಆರೋಪಿತರಾದ 1) ನವೀನ 25 ವರ್ಷ, 2)ಮನು 31 ವರ್ಷ 3.ಸಂತೋಷ ಕೆ 31 ವರ್ಷ, 4)ಮಂಜುನಾಥ ವಿ 33 ವರ್ಷ ಹಾಗೂ 5)ಅಭಿಷೇಕ್ 24 ವರ್ಷ ಎಂಬುವರು ವಾಸ ಅಂತರಗಂಗೆ ಗ್ರಾಮ ಭದ್ರಾವತಿ ರವರುಗಳು ಶ್ರೀಮತಿ ರಾಧ (35)ರವರ ಮನೆಗೆ ಪತಿ ವೆಂಕಟೇಶ್ ರನ್ನ ಹುಡುಕಿಕೊಂಡು ಬಂದು ಅಕ್ರಮ ಪ್ರವೇಶ ಮಾಡಿ, ಅವರಿಗೆ ಹಲ್ಲೆ ಮಾಡಿ, ಅವಾಚ್ಯವಾಗಿ ನಿಂದಿಸಿ, ಜಾತಿ ನಿಂದನೆ ಮಾಡಿ ಕೊಲೆಬೆದರಿಕೆ ಹಾಕಿದ್ದರು. ಈ ಬಗ್ಗೆ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ The SC & ST (Prevention of Atrocities) Amendment Act 2015 ರ ಅಡಿಯಲ್ಲಿ ಪ್ರಕರಣವು ದಾಖಲಾಗಿತ್ತು.
ಪ್ರಕರಣದ ಆಗಿನ ತನಿಖಾಧಿಕಾರಿಗಳಾದ ಜಿತೇಂದ್ರ ಕುಮಾರ ದಯಾಮ ಎಎಸ್‌ಪಿ ಭದ್ರಾವತಿ ಹಾಗೂ ಎಸ್.ಪಿ ಚಿಕ್ಕಮಗಳೂರು ರವರು ಪ್ರಕರಣದ ದೋಷಾರೋಪಣ ಪತ್ರವನ್ನು ಸಲ್ಲಿಸಿರುತ್ತಾರೆ.
ಶ್ರೀಮತಿ ರತ್ನಮ್ಮ ಪಿ.ಸರ್ಕಾರಿ ಅಭಿಯೋಜಕರವರು ವಾದ ಮಂಡಿಸಿದ್ದು, ಆರೋಪಿತರ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಶ್ರೀಮತಿ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್, ಮಾನ್ಯ ನ್ಯಾಯಾಧೀಶರು, ಘನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಭದ್ರಾವತಿರವರು ಆರೋಪಿತರಿಗೆ ತಲಾ 02 ವರ್ಷ ಕಾರಾವಾಸ ಶಿಕ್ಷೆ ಮತ್ತು ಒಟ್ಟು ರೂ. 1,00,000/- ದಂಡ ವಿಧಿಸಿ ಆದೇಶಿಸಿರುತ್ತಾರೆ.
Caste abuse case - Five sentenced
