SUDDILIVE || SAGARA
ಹಾವು ಕಡಿದು ಎರಡುವರೆ ವರ್ಷದ ಮಗು ಸಾವು- Two-and-a-half-year-old child dies after being bitten by snake
ಇಲ್ಲಿನ ಎಸ್ ಎನ್ ನಗರದಲ್ಲಿ ಮನೆ ಮುಂದೆ ಆಟವಾಡುತ್ತಿದ್ದ ಎರಡುವರೆ ವರ್ಷದ ಮಗುವಿಗೆ ಹಾವು ಕಡಿದು ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿದೆ.
ಅಕ್ಷತಾ ಹಾಗೂ ಗಣೇಶ್ ಅವರ ಪುತ್ರ ಭವಿನ್ ಮೃತಪಟ್ಟ ಗಂಡು ಮಗು ಎಂದು ತಿಳಿದು ಬಂದಿದೆ. ಅಕ್ಷತಾ ಅವರು ತವರು ಮನೆಗೆ ಮಗುವಿನೊಂದಿಗೆ ಈಚೆಗೆ ಎಸ್ ಎನ್ ನಗರಕ್ಕೆ ಬಂದಿದ್ದರು.
ಭವಿನ್ ಅಜ್ಜಿಯ ಮನೆ ಮುಂಭಾಗದ ಅಂಗಳದಲ್ಲಿ ಆಟವಾಡುತ್ತಿದ್ದನು.ಈ ವೇಳೆ ನಾಗರಹಾವು ಬಂದಿದ್ದು ಮಗುವಿನ ಕೈಗೆ ಕಡಿದಿದೆ. ಮಗು ಜೋರಾಗಿ ಅಳುತ್ತಿದ್ದನ್ನು ಕೇಳಿಸಿಕೊಂಡ ಮನೆಯವರು ಮನೆಯಿಂದ ಆಚೆ ಬಂದು ನೋಡಿದಾಗ ಹಾವು ವಾಪಾಸ್ ಹೋಗಿದ್ದನ್ನು ನೋಡಿದ್ದಾರೆ.
ತಕ್ಷಣ ಮಗುವನ್ನು ಸಾಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ದಾಖಲಿಸಲಾಗಿತ್ತು. ಮಗು ಭವಿನ್ ಬುಧವಾರ ರಾತ್ರಿ ಮೃತಪಟ್ಟಿದ್ದಾನೆ. ಮರಣೋತ್ತರ ಪರೀಕ್ಷೆ ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆಯಿತು.
Two-and-a-half-year-old child dies after being bitten by snake
