ಕೆರೆ ನೀರು ತುಂಬಿಸುವಂತೆ ಆಗ್ರಹಿಸಿ ಚನ್ನಗಿರಿ ರೈತರ ಬಿಗಿ ಪಟ್ಟು- Channagiri farmers demand filling of lake water

 SUDDILIVE || SHIVAMOGGA

ಕೆರೆ ನೀರು ತುಂಬಿಸುವಂತೆ ಆಗ್ರಹಿಸಿ ಚನ್ನಗಿರಿ ರೈತರ ಬಿಗಿ ಪಟ್ಟು- Channagiri farmers demand filling of lake water   

Channagiri, farmer

ಏತ ನೀರಾವರಿಯಿಂದ ಕೆರೆಗಳಿಗೆ ನೀರು ತುಂಬಿಸುವಂತೆ ಆಗ್ರಹಿಸಿ ಇಂದು  ಚನ್ನಗಿರಿ ತಾಲೂಕಿನ ವಿವಿಧ ಗ್ರಮಗಳಿಂದ ಶಿವಮೊಗ್ಗದ ಯುಟಿಪಿ ಕಚೇರಿಯಲ್ಲಿ ಧರಣಿ ಕುಳಿತಿದ್ದಾರೆ. ಹೊದಿಗೆರೆ,  ಬೆಂಕಿಕೆರೆ,  ಹೆಬ್ಬಳಗೆರೆ, ಯರಗಟ್ಟಿ, ವಿ.ರಾಮೇನಹಳ್ಳಿ ಸೇರಿದಂತೆ ಚನ್ನಗಿರಿ ವಿಭಾಗಕ್ಕೆ ನೀರು ಒದಗಿಸಬೇಕೆಂದು  ಆಗ್ರಹಿಸಿದರು. 

ಉಬ್ರಾಣಿ ಏತ ನೀರಾವರಿ ಯೋಜನೆಯಿಂದ ಈ ಎಲ್ಲಾ ಕೆರೆಗಳಿಗೆ ನೀರು ತುಂಬಿಸಲು  250 ಕೋಟಿ ರೂ ಬಿಡುಗಡೆಯಾಗಿದ್ದು, ತಕ್ಷಣವೇ ಟೆಂಡರ್ ಕರೆದು ಕಾಮಗಾರಿ ಆರಂಭಿಸಬೇಕು. ಎಕ್ಸಿಕ್ಯೂಟಿವ್  ಇಂಜಿನಿಯರ್ ಗಳು ಸ್ಥಳ ಪರಿಶೀಲನೆ ಮಾಡಬೇಕು. ಖಾಲಿ ಭರವಸೆ ನೀಡಬಾರದು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. 

ಕಾರ್ಯಪಾಲಕ ಇಂಜಿನಿಯರ್ ಕೃಷ್ಣಪ್ರಸಾದ್ ಮತನಾಡಿ 1986 ಅನುಮೋದನೆ ಪಡೆದು 2011 ರಲ್ಲಿ ಯೋಜನೆ ಪೂರ್ಣಗೊಂಡಿದೆ. ಪೈಪ್ ಲೈನ್ ಎಕ್ಸ್ ಟೆನ್ಷನ್ ಆಗಬೇಕಿದೆ. 8 ಕೆರೆಗಳಿಗೆ ಕಳೆದ 15 ವರ್ಷದಿಂದ ನೀರು ತುಂಬಿಸಲು ಆಗ್ತಾ ಯಿರಲಿಲ್ಲ.‌ ಚನ್ನಗಿರಿಯಲ್ಲಿ 40% ಮಳೆಯಾಗಲಿದೆ. ಹಾಗಾಗಿ ಬಹುತೇಕ ಕೆರೆಗಳಿಗೆ ಏತನೀರಾವರಿಯಿಂದ ನೀರು ತುಂಬಿಸಬೇಕಿದೆ. 

ಎಲ್ಲಾ ಕೆರೆಗೆ ಪೈಪ್ ಲೈನ್ ಆಗಬೇಕಿದೆ 41 ಕೆರೆಗೆ ನೀರು ಬಿಡುಗಡೆ ಮಾಡಬೇಕಿತ್ತು. ತಾಂತ್ರಿಕ ಕಾರಣದಿಂದ ತುಂಬಿಸಲಾಗಿಲ್ಲ.ಎರಡು ಹಂತದಲ್ಲಿ ಟೆಂಡರ್ ಕರೆಯಲಾಗಿದೆ ಎಂದರು. ರೈತರು ಜಕ್ಲಿಕೆರೆಯಿಂದ ನೀರು ಪೂರೈಸಬೇಕು. ಹಾಗಾಗಿ ಸ್ಥಳ ಪರಿಶೀಲನೆ ನಡೆಸಿ ಎಂದು ಆಗ್ರಹಿಸಿದರು. ಇದಕ್ಕೆ ಎಸ್ ಇ ಅವರು ಸ್ಥಳಪರಿಶೀಲನೆಗೆ ಒಪ್ಪಿದ್ದಾರೆ. 

ಉಂಬ್ರಾಣಿ ಮತ್ತು ಅಮೃತಪುರ ಏತ ಯೋಜನೆಯಿಂದ ಮೊದಲು ಹೊದಿಗೆರೆ, ಬೆಂಕಿಪುರ, ಹೆಬ್ಳಿಗೆರೆಯ ಕೆರೆಯನ್ನ ನೀರು ತುಂಬಿಸುವ ಬಗ್ಗೆ ಯೋಚಿಸುವಂತೆ ತಿಳಿಸಿದರು. ಇಲ್ಲಿನ ನೀರು ಬಳಕೆ ಸಂಘವನ್ನೂ ಮನವೊಲಿಸಲು ಸಭೆ ನಡೆಸುವುದಾಗಿ ಹೇಳಿದರು. ಏ.18 ರಂದು ಸೂಪರಿಂಟೆಂಡೆಂಟ್ ಇಂಜಿನಿಯರ್ ಸ್ಥಳಪರಿಶೀಲಿಸುವುದಾಗಿ‌ಭರವಸೆ ನೀಡಿದರು. 

Channagiri farmers demand filling of lake water 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close