SUDDILIVE || SHIVAMOGGA
ಸ್ತ್ರೀ ಸ್ವಾತಂತ್ರ್ಯಕ್ಕೆ ತಣ್ಣೀರು ಎರಚಿದ ಕಾಂಗ್ರೆಸ್-ಬಿವೈಆರ್- Congress throw cold water on women's freedom-BYR
ಸ್ತ್ರೀಸ್ವಾತಂತ್ರ್ಯಕ್ಕೆ ತಣ್ಣೀರು ಎರಚುವ ಕೆಲಸವನ್ನು ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಕೈಜೋಡಿಸಿವೆ ಎಂದು ಸಂಸದ ರಾಘವೇಂದ್ರ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಮಹಿಳ ಮೀಸಲಾತಿಗೆ ಪೂರಕವಾಗಿ ಮೂರು ಬಿಲ್ ತರಲಾಗಿತ್ತು. ಅಧಿವೇಶನ ಮುಗಿಯಾವ ಬೆಳಗಿನ ಜಾವ 3-30 ಆಗಿತ್ತು. ಒತ್ತಡದಲ್ಲಿ ನನಗೂ ಮಾತನಾಡುವ ಸಂಧರ್ಭ ಸಿಕ್ಕಿತ್ತು. ವಿಧಾನಸಭಾ ಕ್ಷೇತ್ರ ಹೆಚ್ಚಿಸಲು ಜನಸಂಖ್ಯೆ ಕೊರತೆಯಿದೆ. ಗುಜರಾತ್ ನಿಂದ ಕೇರಳದವರೆಗೆ ಪಶ್ಚಿಮಘಟ್ಟವನ್ನ ಪರಿಗಣಿಸಬೇಕೆಂದು ಹೊಸನಗರ ಕ್ಷೇತ್ರ ರಚಿಸುವ ಧ್ವನಿಯ ಬಗ್ಗೆ ಮಾತನಾಡಿದ್ದೆ.
2023ಮಹಿಳ ಮೀಸಲಾತಿದೆ ಡಿಲಿಮಿಟ್ಸ್ ಮಾಡುವ ಬಗ್ಗೆ ಅವಕಾಶವಿತ್ತು. ಕಾಂಗ್ರೆಸ್ ಸುಳ್ಳು ವಿಚಾರ ಇಟ್ಟುಕೊಂಡು ತಡೆಯುವ ಕೆಲಸ ಮಾಡಲಾಗಿದೆ. ಮುಸ್ಲೀಂಗೆ ಮೀಸಲಾತಿ ನೀಡುವಂತೆ ಅಖಿಲೇಶ್ ಯಾದಾವ್ ಮಾಡಿದರು. ಧರ್ಮ ಆಧಾರಿತ ಮೇಲೆ ಮೀಸಲಾತಿ ಹಂಚಲ್ಲ ಎಂದು ಗೊತ್ತಿದ್ದರೂ ಪ್ರಸ್ತಾಪಿಸಲಾಯಿತು.
ಉತ್ತರ ಭಾರತ ಎಂಬ ವಿಭಜನೆ ಮಾಡಲಾಯಿತು. ಜನಸಂಖ್ಯೆ ಆಧಾರದ ಮೇರೆಗೆ ಡಿಲಿಮಿಟ್ಸ್ ಮಾಡದೆ ಇರುವ ಕ್ಷೇತ್ರದ ಆಧಾರದ ಮೇರೆಗೆ ಶೇಕಡ 50 ರಷ್ಟು ಹೆಚ್ಚಿಸುವ ಭರವಸೆ ನೀಡಲಾಗಿ ಲಿಖಿತವಾಗಿ ಭರವಸೆ ಕೊಡಯವ ಭರವಸೆ ನೀಡಿದರೂ ದುರುದ್ದೇಶದಿಂದ ಮಹಿಳಾ ಮೀಸಲಾತಿಯನ್ನ ಮೂಲೆಗುಂಪು ಮಾಡಲಾಗಿದೆ ಎಂದು ದೂರಿದರು.
ಮೊನ್ನೆ ಪ್ರಧಾನಿಯವರು ದುಖದಿಂದ ದೇಶದ ಕ್ಷಮೆ ಕೇಳಿದ್ದಾರೆ. ಮತದಾನದ ವೇಳೆ ಬಿಲ್ ಪಾಸಾಗದೆ ಇದ್ದುದ್ದಕ್ಕೆ ವಿಪಕ್ಷಗಳು ಸಂಭ್ರಮಿಸಿ ವಿಜಯೋತ್ಸವ ನಡೆಸಿವೆ. ಯಾವ ನೈತಿಕತೆಯಿಟ್ಟುಕೊಂಡು ಮಹಿಳ ಮೀಸಲಾತಿ ಬಗ್ಗೆ ವಿಪಕ್ಷಗಳು ಮಾತನಾಡುತ್ತವೆ ಎಂದು ಪ್ರಶ್ನಿಸಿದರು.
ದೇಶ ವಿಭಜನೆಯ ವಿಚಾರದಲ್ಲಿ ಬೆಂಬಲಿಸುವ ಮನಸ್ಥಿತಿಯುಳ್ಳ ವಿಪಕ್ಷಗಳು,ಆರ್ಟಿಕಲ್ 370, ತ್ರಿವಳಿ ತಲಾಕ್, ಸಿಎಎ, ಒನ್ ರ‌್ಯಾಂಕ್ ಒನ್ ಪೆನ್ಷನ್, ಅಯೋಧ್ಯ ರಾಮಮಂದಿರ ನಿರ್ಮಾಣ ಮೊದಲಾದ ಬಿಲ್ ಗಳನ್ನ ವಿರೋಧಿಸಿದ ವಿಪಕ್ಷಗಳು ಕ್ಷೇತ್ರ ಮರುವಿಂಗಡಣೆ ವಿಚಾರದಲ್ಲಿ ಸುಳ್ಳನ್ನ ಅನೇಕಬಾರಿ ಹೇಳುವ ಮೂಲಕ ಜನರನ್ನ ತಪ್ಪುದಾರಿಗೆ ಎಳೆದಿವೆ.
ಇಂತಹ ವಿಪಕ್ಷಗಳನ್ನ ದೇಶದ ಜನರು ಕ್ಷಮಿಸೊಲ್ಲ. ಬಿಜೆಪಿ ಇದನ್ನ ಮನೆಮನೆಗೆ ತೆರಳಿ ಮಹಿಳ ವಿರೋಧಿ ಬಿಲ್ ಗಳನ್ನ ವಿರೋಧಿಸುವ ವಿಪಕ್ಷಗಳ ಬಗ್ಗೆ ಜಾಗೃತಿ ಮೂಡಿಸಲಾಗಿವುದು. ಪ್ರಧಾನಿ ಹೆಣ್ಣುಮಗಳ ಭ್ರೂಣ ಹತ್ಯೆಗೆ ಈ ಬಿಲ್ ನ್ನ ಸೋಲಿಸಿದ್ದಕ್ಕೆ ಹೋಲಿಸಿದ್ದಾರೆ. ಮಹಿಳ ಬಿಲ್ ನ್ನ ಬಿಜೆಪಿ ಇಷ್ಟಕ್ಕೆ ನಿಲ್ಸೊಲ್ಲ, ಮತ್ತೆ ಜಾರಿಗೆ ತರುವ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದರು.
2011 ರಲ್ಲಿ ತೆಗೆದುಕೊಂಡ ಜನಸಂಖ್ಯೆಯನ್ನ ತೆಗೆದುಕೊಂಡರೂ ಜನಸಂಖ್ಯೆ ಆಧಾರದ ಮೇರೆಗೆ ತರುವ ಪ್ರಯತ್ನ ನಡೆದಿರಲಿಲ್ಲ. ಇರುವ ಕ್ಷೇತ್ರದಲ್ಲಿ ಶೇ.50% ಏರಿಕೆ ಮಾಡುವ ಬಗ್ಗೆ ಭರವಸೆ ನೀಡಲಾಗಿತ್ತು. 2023 ರಲ್ಲಿ ಬಿಲ್ ತರುವಾಗ ಸಹಾಯ ಮಾಡಿದ್ದ ಕಾಂಗ್ರೆಸ್ ಈಗ ದೂರ ಉಳಿದಿವೆ. ಕಾರಣ ಹುಡುಕುವ ಕಾಂಗ್ರೆಸ್ ಬಿಜೆಪಿಗೆ ಕ್ರೆಡಿಟ್ ಸಿಗುವಭಯದಿಂದ ವಿರೋಧಿಸಲಾಗಿದೆ. ಬಿಜೆಪಿಯನ್ನ ವಿರೋಧಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ದೇಶವನ್ನೇ ದೂರುತ್ತಿವೆ ಎಂದರು.
Congress throw cold water on women's freedom-BYR
