SUDDILIVE || SHIVAMOGGA
ಸಿಇಒರನ್ನೂ ಬಿಡಲಿಲ್ಲ ಸೈಬರ್ ವಂಚಕರು-Cyber fraudsters didn't even spare the CEO
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(ಸಿಇಒ) ಹೇಮಂತ್.ಎನ್ ಅವರ ಹೆಸರು ಮತ್ತು ಭಾವಚಿತ್ರವನ್ನು ಬಳಸಿಕೊಂಡು ಸೈಬರ್ ವಂಚಕರು ನಕಲಿ ವಾಟ್ಸಾಪ್ ಖಾತೆ ಸೃಷ್ಟಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಐಎಎಸ್ ಅಧಿಕಾರಿ ಹೇಮಂತ್.ಎನ್ ಅವರು ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ
ವಂಚಕರು ವಿದೇಶಿ ಕೋಡ್ ಹೊಂದಿರುವ ಮೊಬೈಲ್ ಸಂಖ್ಯೆ ಬಳಸಿಕೊಂಡು ನಕಲಿ ವಾಟ್ಸಾಪ್ ಖಾತೆ ತೆರೆದಿದ್ದಾರೆ. ಅದಕ್ಕೆ ಸಿಇಒ ಅವರ ಭಾವಚಿತ್ರವನ್ನು ಡಿಪಿಯಾಗಿ ಬಳಸಿಕೊಂಡಿದ್ದಾರೆ. ಈ ನಕಲಿ ಖಾತೆಯ ಮೂಲಕ ವಿವಿಧ ಅಧಿಕಾರಿಗಳಿಗೆ ಮೆಸೇಜ್‌ಗಳನ್ನು ಕಳುಹಿಸಿ ವಂಚಿಸಲು ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.
‘ತಮ್ಮ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ ದುರ್ಬಳಕೆ ಮಾಡಿಕೊಳ್ಳುತ್ತಿರುವವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವಂತೆ’ ಹೇಮಂತ್ ಅವರು ದೂರಿನಲ್ಲಿ ತಿಳಿಸಿದ್ದಾರೆ. ದೂರಿನ ಹಿನ್ನೆಲೆ ಪ್ರಕರಣ ದಾಖಲಿಸಕೊಂಡು ಸಿ.ಇ.ಎನ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Cyber fraudsters didn't even spare the CEO
