SUDDILIVE || SHIVAMOGGA
ಮುಂದಿನ ಎರಡು ತಿಂಗಳಲ್ಲಿ ರಾಜ್ಯದ ರಾಜಕಾರಣ ಬದಲಾಗಲಿದೆ-ಈಶ್ವರಪ್ಪ- State politics will change in the next two months - Eshwarappa
ರಾಜ್ಯದಲ್ಲಿ ಸಮಸ್ಯೆ ಇದ್ದಾಗಲೆ ಸಿಎಂ ಡಿಸಿಎಂ ಮತ್ತು ಶಾಸಕರು ಅಧಿಕಾರದ ದಾಹದಿಂದ ಅಭಿವೃದ್ಧಿಯಿಲ್ಲದೆ ರಾಜ್ಯ ಒದ್ದಾಡುತ್ತಿದೆ ಎಂದು ಮಾಜಿ ಡಿಸಿಎಂ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಅಭಿವೃಧಧಿಯ ಬಗ್ಗೆ ಯಾರಿಗೂ ಆಸಕ್ತಿಯಿಲ್ಲ ಮುಂದಿನ ಎರಡು ತಿಂಗಳಲ್ಲಿ ರಾಜಕಾರಣ ಬದಲಾಗಲಿದೆ. ಇಷ್ಟು ಬಹಿರಂಗವಾಗಿ ಘಟನೆಗಳು ಸಂಭವಿಸಿದೆ. ಉಪಚುನಾವಣೆಯಲ್ಲಿ ಮುಸ್ಲೀಂರಿಗೆ ಟಿಕೆಟ್ ನೀಡುವಂತೆ ಆಗ್ರಹಿಸಲಾಗಿದೆ. ರಿಜ್ವಾನ್, ಜಮೀರ್ ಮೊದಲಾದವರು ತಾವೆ ಮುಸ್ಲೀಂ ನಾಯಕರು ಎಂದು ಹೇಳಿಕೊಂಡು ಓಡಾಡಿದರು.ಇಡೀ ರಾಷ್ಟ್ರದಲ್ಲಿ ಕಾಂಗ್ರೆಸ್ ಮುಸ್ಲೀಂ ನಾಯಕರನ್ನ ನೆಚ್ಚಿಕೊಂಡು ನೆಲಕಚ್ಚಿಕೊಂಡು ಹೋಗಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಉಸಿರಾಡುತ್ತಿದೆ. ಇಲ್ಲೂ ಕಾಂಗ್ರೆಸ್ ಧೂಳಿಪಟವಾಗಲಿದೆ ಎಂದರು. ರಾಷ್ಟ್ರದಲ್ಲಿ ಮಹಿಳಾ ಮೀಸಲಾತಿ ಸಂತೋಷದಿಂದ ಸ್ವಾಗತಿಸುತ್ತೇವೆ. ಮನೆ ನಡೆಸುವ ನಾರಿ ದೇಶ ನಡೆಸುತ್ತಾರೆ ಎಂಬುದಕ್ಕೆ ಅವರಿಗೆ ಅವಕಾಶ ಕಲ್ಪಿಸಲಾಗುತ್ತದೆ. ಇದನ್ನ ರಾಷ್ಟ್ರಭಕ್ತರ ಬಳಗ ಸ್ವಾಗತಿಸಲಿದೆ ಎಂದರು.
