ಮಹಿಳ ಸ್ನೇಹಿ ಪಿಂಕ್ ಟಾಯ್ಲೆಟ್, ಬಸ್ ನಿಲ್ದಾಣದಲ್ಲಿ ಬೆಡ್ ಹಾಲ್ ತೆಗೆಯಲು ನಿರ್ಧಾರ ಮೊದಲಾದ ವಿಷಯಗಳ ಬಗ್ಗೆ ಚರ್ಚೆ-Discussion on issues like women-friendly pink toilets, decision to remove bed halls at bus stations

 SUDDILIVE || SHIVAMOGGA

ಮಹಿಳ ಸ್ನೇಹಿ ಪಿಂಕ್ ಟಾಯ್ಲೆಟ್, ಬಸ್ ನಿಲ್ದಾಣದಲ್ಲಿ ಬೆಡ್ ಹಾಲ್ ತೆಗೆಯಲು ನಿರ್ಧಾರ ಮೊದಲಾದ ವಿಷಯಗಳ ಬಗ್ಗೆ ಚರ್ಚೆ-Discussion on issues like women-friendly pink toilets, decision to remove bed halls at bus stations 

Pink, toilet


ನೆಹರೂ ರಸ್ತೆಯಲ್ಲಿರುವ ಶಾಸಕ ಚೆನ್ನಬಸಪ್ಪ ನವರ ಕಚೇರಿಯಲ್ಲಿ ನಾಗರೀಕರ ಹಿತರಕ್ಷಣ ವೇದಿಕೆ ಒಕ್ಕೂಟ, ಪಾಲಿಕೆ, ಮೆಸ್ಕಾಂ, ಕುಡಿಯುವ ನೀರು ಸರಬರಾಜು ಮತ್ತು ಒಳಚರಂಡಿ ನಿಗಮದ ಅಧಿಕಾರಿಗಳ ಜೊತೆ ನಗರದ ಕುಂದು ಕೊರತೆಯ ಬಗ್ಗೆ ಸುಧೀರ್ಘ ಚರ್ಚೆ ನಡೆದಿದೆ. 

ಖಾಸಗಿ ಬಸ್ ನಿಲ್ದಾಣದ ನಿರ್ವಹಣೆ, ಇ-ಖಾತೆ, ಇ-ಟಾಯ್ಲೆಟ್, ಚರಂಡಿ ನಿರ್ವಹಣೆ ಸೇರಿದಂತೆ 11 ಪ್ರಮುಖ ಅಂಶ ಚರ್ಚಿಸಲಾಯಿತು. ಆಯುಕ್ತ ಮಾಯಣ್ಣಗೌಡರಿಂದ ಬಹುತೇಕ ಉತ್ತರ ಲಭಿಸಿದೆ. 


ಮಹಿಳ ಸ್ನೇಹಿ ಪಿಂಕ್ ಟಾಯ್ಲೆಟ್ ನಿರ್ಮಾಣ


ಇ- ಟಾಯ್ಲೆಟ್ ನಗರದಲ್ಲಿ 18 ಇದೆ. ಮೊದಲು ನಿರ್ಮಾಣ ಆದಾಗಿನಿಂದ ಟಾಯ್ಲೆಟ್ ಆರಂಭಗೊಂಡಿಲ್ಲ. ಪೇಯ್ಡ್ ನಿರ್ವಹಣೆ ಮಾಡುವುದಾಗಿ ಹೇಳಿ ಯುಜಿಡಿ ವಾಟರ್ ಕನೆಕ್ಷನ್ ಮತ್ತು ಇತರೆ ಸಮಸ್ಯೆಯಿಂದ ಬಂದ್ ಆಗಿವೆ. ಇದನ್ನ ರಿನೋವೇಷನ್ ಮಾಡಿ ಉಚಿತ ಮಹಿಳಾ ಸ್ನೇಹ ಪಿಂಕ್ ಟಾಯ್ಲೆಟ್ ನಿರ್ಮಿಸಲಾಗುತ್ತಿದೆ. ಎಲೆಕ್ಟ್ರಾನಿಕ್ ಸಿಸ್ಟಮ್ ತೆಗಡದು ಮಾನ್ಯುವಲ್ ನಾಡಲಾಗುವುದು ಎಂದು ಆಯುಕ್ತ ಮಾಯಣ್ಣ ಗೌಡ ಸಭೆಗೆ ಭರವಸೆ ನೀಡಿದರು.  


18 ಇ-ಟಾಯ್ಲೆಟ್ ನಲ್ಲಿ  14 ಮಹಿಳಾ ಪಿಂಕ್ ಟಾಯ್ಲೆಟ್ ಮಾಡುವ ಬಗ್ಗೆ ಒಕ್ಕೂಟದ ವಸಂತ್ ಆಕ್ಷೇಪಿಸಿದರು. ಮಹಿಳೆಯರಿಗೆ ಹೆಚ್ಚು ಟಾಯ್ಲೆಟ್ ನೀಡುವುದರಿಂದ ಪುರುಷರು ಏನು ಮಾಡಬೇಕು? ಟಾಯ್ಲೆಟ್ ಗಳನ್ನ ಹೆಚ್ಚಾಗಿ ಗಲೀಜು ಮಾಡುವುದು ಯಾರು? ಪುರುಷರೇ ಆಗಿರುವುದರಿಂದ ಪುರುಷರಿಗೆ ಹೆಚ್ಚಿನ ಟಾಯ್ಲೆಟ್ ನೀಡಬೇಕು. ಸಾಧ್ಯವಾದರೆ ಮಹಿಳೆ ಮತ್ತು ಪುರುಷರಿಗೆ ಹೆಚ್ಚಿ ಶೌಚಾಲಯ ನಿರ್ಮಿಸಿ ಎಂದು ಹೇಳಿದರು. 


ಒಕ್ಕೂಟದ ಮತ್ತೋರ್ವ ಸದಸ್ಯ ಸುರೇಶ್ ಶೆಟ್ಟಿ ಮಾತನಾಡಿ, ಆಯುಕ್ತರು ಹೇಳುತ್ತಾರೆ. ಹೇಳುವುದೆಲ್ಲ ಪ್ರೊಗ್ರೆಸ್ ಆಗುವುದಯ ಯಾವಾಗಿನಿಂದ?  ಯಾವಾಗಿನಿಂದ ಆರಂಭಿಸುತ್ತೀರಿ ಎಂದು ಕೇಳಿದರು. ಬಡಾವಣೆಯಲ್ಲಿರುವ ಇಟಾಯ್ಲೆಟ್ ನ್ನ ಅವಶ್ಯಕತೆ ನೋಡಿ ಮಹಿಳೆ ಅಥವಾ ಪುರುಷರಿಗೆ ನಿರ್ಮಿಸಲಾಗುವುದು ಆಯುಕ್ತರು ತಿಳಿಸಿದರು. ಎರಡು ಪ್ರವೇಶ ಮಾಡಿ ಪುರುಷರು ಮತ್ತು ಮಹಿಳೆಯರಿಗೆ ಮಾಡಿ ಸಭೆ ಆಯುಕ್ತರನ್ನ ಒತ್ತಾಯಿಸಿದೆ. ಇಬ್ಬರಿಗೂ ಪ್ರವೇಶ ಕಷ್ಟ ಆದರೆ ಅನುಕೂಲಕ್ಕೆ ತಕ್ಕಂತೆ ನಿರ್ಮಿಸೋಣ. ಟೆಂಡರ್ ಕರೆಯಲಾಗುತ್ತದೆ 20 ದಿನಗಳಲ್ಲಿ ಇ ಟಾಯ್ಲೆಟ್ ಪ್ರೋಗ್ರೆಸ್ ಮಾಡಲಾಗುವುದು. ಇದನ್ನ ಪಾಲಿಕೆಯೆ ನಿರ್ವಹಿಸಲಿದೆ ಎಂದು ಆಯುಕ್ತರು ಹೇಳಿದರು. 


ಇದಾದ ನಂತರ ಪಬ್ಲಿಕ್ ಬಳಕೆ ಯಾವಾಗ ಎಂದು ಶಾಸಕರು ಕೇಳಿದ್ದಕ್ಕೆ ಉತ್ತರಿಸಿದ ಆಯುಕ್ತರು ಎರಡು ತಿಂಗಳಲ್ಲಿ ನಡೆಸುವುದಾಗಿ ಭರವಸೆ ನೀಡಿದರು. ನೀರು ಸರಬರಾಜು ಟಾಯ್ಲೆಟ್ ಗೆ ನಿರಂತರವಾಗಿರಿಸಲು ಶಾಸಕರು ಸೂಚಿಸಿದರು. ನೆಪತ್ಲಾನ್ ಹಾಕುವ ಬಗ್ಗೆ ಪಾಲಿಕೆ ಗಮನಹರಿಸಲಾಗುತ್ತಿದೆ. ಸ್ವಲ್ಪ ಸುಧಾರಣೆಯಾಗಿದೆ ಎಂದರು.


ಸ್ಮಾರ್ಟ್ ಸಿಟಿ ಯೋಜನೆ ನಿರ್ವಹಣೆ


ಸ್ಮಾರ್ಟ್ ಸಿಟಿ ನಿರ್ವಾಹಣೆಯ ಬಗ್ಗೆ ಉನ್ನತ ಮಟ್ಟದಲ್ಲಿ ಚರ್ಚೆಯಾಗಿದೆ. ಗುತ್ತಿಗೆದಾರ ನಿರ್ವಾಹಣೆಗೆ ಹಣ ಸಿಗಲ್ಲ ಎಂದು ಮುಂದೆ ಬರುತ್ತಿಲ್ಲ‌.  ಈಗ ಪಾಲಿಕೆ ಆಯುಕ್ತರಿಗೆ ಹಣ ನೀಡಲು ಅಧಿಕಾರ ನೀಡಲಾಗಿದೆ. ಗ್ರಿಲ್ ಮುರಿದಿದ್ದರೆ ಗ್ರಿಲ್ ಗೆ ಹಣ ಸಿಗಲ್ಲ. ಅದು ಬಿಟ್ಟು ಪಾಥ್ ಹೋಲ್, ಫುಟ್ ಪಾತ್ ನ ಕಲ್ಲು ಹೋಗಿದ್ದರೆ ನಿರ್ವಹಣೆಗೆ ಪಾಲಿಕೆ ಆಯುಕ್ತರಿಗೆ ಹಣ ನೀಡಲು ಉನ್ನತ ಮಟ್ಟದ ಸಭೆ ತೀರ್ಮಾನಿಸಿದ್ದರಿಂದ ಈಗ ನಿರ್ವಹಣ  ವರ್ಕ್ ಆರಂಭಿಸಲಾಗುವುದು ಎಂದು ಆಯುಕ್ತರು ಭರವಸೆ ನೀಡಿದರು. 


ರೈಲಿಂಗ್ ಫುಟ್ ಪಾತ್ ಬಗ್ಗೆ 20 ಕಡೆ ನಾಗರೀಕ ಹಿತರಕ್ಷಣ ವೇದಿಕೆ ವರದಿ ನೀಡಿದೆ. ಉಷ ನರ್ಸಿಂಗ್ ಹೋಮ್ ನಿಂದ ಲಕ್ಷ್ಮೀ ಥಿಯೇಟರ್ ವರೆಗೆ ನಡೆದುಕೊಂಡು ಹೋಗಲು ಫುಟ್ ಪಾತ್ ಸರಿಯಾಗಿ ಇಲ್ಲ. ಇದು ನಗರದ ಬಹುತೇಕ ಕಡೆ ನಡೆಯಲು ಸಾಧ್ಯವಿಲ್ಲ ಎಂದು ವೇದಿಕೆ ಆಕ್ಷೇಪಿಸಿದೆ. ಉಷ ನರ್ಸಿಂಗ್ ಹೋಮ್ ವೃತ್ತದಲ್ಲಿ ಫುಟ್ ಪಾತ್ ಇಲ್ಲ. ಫುಟ್ ಪಾತ್ ಕೊಡಿ ಸಿಟಿ ಬಸ್ ಗಳು ರಸ್ತೆಯ ಮೇಲೆ ನಿಲ್ಲಿಸಿ ಟ್ರಾಫಿಕ್ ಜ್ಯಾಮ್ ನಾಡುತ್ತಿವೆ ಎಂದು ಆಕ್ಷೇಪಿಸಲಾಯಿತು. 


ಖಾಸಗಿ ಬಸ್ ನಿಲ್ದಾಣದಲ್ಲಿ ಬೆಡ್ ಹಾಲ್ ಇರಲ್ಲ


ಖಾಸಗಿ ಬಸ್ ನಿಲ್ದಾಣದಲ್ಲಿ ಆಪರೇಷನ್ ಟಾಯ್ಲೆಟ್ ನಿರ್ಮಿಸಲಾಗಿದೆ. 8-10 ತಿಂಗಳಿಂದ ಬಂದ್ ಆಗಿವೆ. ಮೂರು ಟಾಯ್ಲೆಟ್ ಗೆ ಪೇಯ್ಡ್ ಅಂಡ್ ಯೂಸ್ ಮಾಡಲಾಗುವುದು. ಸುಣ್ಣಬಣ್ಣ ಹೊಡೆಯಲಾಗುವುದು. 8 ಲಕ್ಷದಲ್ಲಿ ಪುನರ್ ನಿರ್ಮಿಸಲಾಗುವುದು.  ಖಾಸಗಿ ಬಸ್ ಕಸ ಗುಡಿಸಲು 10 ಜನರನ್ನ ನೇಮಿಸಲಾಗಿದೆ ಬೆಳಿಗ್ಗೆ 5 ಜನ ಬೆಳಿಗ್ಗೆ ಮತ್ತು ಮಧ್ಯಸಹ್ನ 5 ಜನ ಇರುತ್ತಾರೆ. ಬಸ್ ಮಾಲೀಕರು ಮತ್ತು ಏಜೆಂಟ್ ಗಳಿಗೆ ಸಿಬ್ಬಂದಿಗಳ ಮೇಲೆ ನಿಗಾವಹಿಸಲು ಸಭೆ ನಡೆಸಿ ಸೂಚಿಸಲಾಗಿದೆ. 


ಪೊಲೀಸರ ಬಗ್ಗೆ ವಿಶ್ವಾಸವಿಲ್ಲ


ಬೆಡ್ ಹಾಲ್ ತೆಗೆಯಲು ಶಾಸಕರು ಸೂಚಿಸಿದರು. ಪೊಲೀಸರು ನಿರ್ವಹಿಸುವ ಬಗ್ಗೆ ವಿಶ್ವಾಸವಿಲ್ಲ ವೇಶ್ಯವಾಟಿಕೆಯಲ್ಲಿ ಅವರು ಕೈಜೋಡಿಸುತ್ತಾರೆ. ಹಾಗಾಗಿ ಬೆಡ್ ಹಾಲ್ ತೆಗೆಯಿರಿ ಎಂದು ಸೂಚಿಸಿದರು‌. ಬೆಡ್ ಹಾಲ್ ನಲ್ಲಿ  ಪಾಲಿಕೆ ಕೆಲಸ ಮಾಡಲು ನಗರ ಒನ್ ಆರಂಭಿಸಲು ಆಯುಕ್ತರು ತಿಳಿಸಿದರು.  ಸಭೆಯೂ ಸಮ್ಮತಿಸಿತು. ಫುಟ್ ಪಾತ್ ಮೇಲಿನ ಗಾಡಿಗಳನ್ನ ತೆಗೆಯಿಸಲು ವೇದಿಕೆ ಆಗ್ರಹಿಸಿತು. ಅವರಿಗೆ ಜೀವನೋಪಾಯ ನಡೆಸಲು ಸೂಚಿಸಿದೆ ಪರ್ಯಾಯ ವ್ಯವಸ್ಥೆ ಮಾಡಲಾಗುವುದು ಎಂದು ಶಾಸಕರು ಹೇಳಿದರು. 


ಕುಡಿಯುವ ನೀರಿನ ಘಟಕ ಅಪ್ ಗ್ರೇಡ್ ಮಾಡಿ


ಕುಡಿಯುವ ನೀರು ಬಗ್ಗೆ ಸಭೆಯಲ್ಲಿ ವೇದಿಕೆ ಅಪ್ ಗ್ರೇಡಷನ್ ಆಗಬೇಕು. ಮೂರು ಯುನಿಟ್ ನಲ್ಲಿ ಒಂದು ಮಿಷನ್ ಬಳಕೆಯಲ್ಲಿ ಇಲ್ಲ.‌ ಸಿಲ್ಟ್ ಪದೇ ಪದೇ ತೆಗೆಯುವುದರಿಂದ ಒಂದು ವಿಭಾಗ ಬಂದ್ ಆದರೆ ಬಾಕಿಯಿರುವ ಒಂದು ವಿಭಾಗದಲ್ಲಿ ಶಿವಮೊಗ್ಗದ ನಾಲ್ಕು ಲಕ್ಷ ಜನರಿಗೆ ಕುಡಿಯುವ ನೀರು ಸಾಧ್ಯವಿಲ್ಲ. ಹಾಗಾಗಿ ಅಪ್ ಗ್ರೇಡ್ ಮಾಡಿ, ಆಲಂನ್ನ ಸ್ಟೇರ್ ಕೇಸ್ ನಲ್ಲಿ ಎತ್ತುಕೊಂಡು ಹೋಗುತ್ತಾರೆ. 10 ಕೆಜಿ ಆಲಂ ಹಾಕುವುದರಲ್ಲಿ ಸುಸ್ತಾಗುತ್ತಾರೆ. ಬೆಂಗಳೂರಿನ ಕಾವೇರಿ ಐದನೇ ಹಂತದ ಪ್ರಾಜೆಕ್ಟ್ ಗೆ ವಿಸಿಟ್ ಮಾಡುವಂತೆ ಒಕ್ಕೂಟದ ಸುರೇಶ್ ಶೆಟ್ಟಿ ಆಗ್ರಹಿಸಿದರು. 


8 ಮೈಕ್ರೋ ಫಿಲ್ಟರ್ ಯುನಿಟ್ಸ್ ಗಳಿವೆ ಸ್ವಚ್ಛವಿಲ್ಲ. ಶಾಸಕರು ಮಾತನಾಡಿ ವೇದಿಕೆಯವರು ನಮಗೆ ನಕಾಶೆ ತಂದು ಕೊಡಿ ಹಣ ಬಿಡುಗಡೆ ಮಾಡಿಸುವ ಜವಬ್ದಾರಿ ನನ್ನದು ಎಂದು ಭರವಸೆ ನೀಡಿದರು. ಇದರ ಒಳಗೆ ಕುಡಿಯುವ ನೀರು ಸರಬರಾಜಿಗೆ ತಕ್ಷಣದ ಕೆಲಸ ಏನಾಗಬೇಕು ಎಂದು ತಿಳಿಸಿ ಎಂದರು. ಶೆಟ್ಟಿಹಳ್ಳಿಯಲ್ಲಿ ಯುನಿಟ್  ಹಾಕುವುದರ ಬಗ್ಗೆ ಚರ್ಚಿಸಲಾಗಿದೆ ಏ.27 ಸಂಜೆ ಸೇರೋಣ ಎಂದರು. 


ಜೀವನ್ ಪೋನ್ ಸ್ವೀಕರಿಸುತ್ತಿಲ್ಲ


ಕುಡಿಯುವ ನೀರಿನ ಸಮಸ್ಯೆ ಬಗ್ಗೆ ವೇದಿಕೆ ಆಕ್ಷೇಪಿಸುವುದರ ಜೊತೆ ಅಲ್ಲಿನ ಎಡ್ಲೂಇ  ಜೀವನ್ ಕರೆ ಎತ್ತುತ್ತಿಲ್ಲ ಎಂದು ಆಕ್ಷೇಪಿಸಿದರು. ಕರೆ ಸ್ವೀಕರಿಸಲು ಶಾಸಕರು ಸೂಚಿಸಿದರು. ಎಕ್ಸಿಕ್ಯೂಟಿವ್ ಇಂಜಿನಿಯರ್ 

ರಾಘವೇಂದ್ರ ಅವರು ನೇಮಿಸಲಾಗಿದೆ ಎಂದು ಆಯುಕ್ತರು ಸಭೆಗೆ ಇಂಟ್ರಡ್ಯೂಸ್ ಮಾಡಿದರು. ದೂರು ನೀಡಲು ನಂಬರ್ ನೀಡಲು ಸೂಚಿಸಿದರು. 


ಇ-ಆಸ್ತಿ ಆಗಲಿಲ್ಲ ಎಂದರೆ ಖಾತಾ ಅದಾಲತ್ ಗೆ ಬನ್ನಿ-ಆಯುಕ್ತರು


ಇ-ಆಸ್ತಿಯ ಬಗ್ಗೆ ನಾಲ್ಕು ತಿಂಗಳಾಗಿದೆ ಇದಕ್ಕೆ ನಾಲ್ಕು ಸಾವಿರ ರೂ. ಪಡೆಯುತ್ತಿದ್ದಾರೆ ಎಂದು ದೂರು ಪಾಲಿಕೆ ಅಧಿಕಾರಿ  ನಾಗೇಂದ್ರ ಮಾತನಾಡಿ, ಯಾವುದೇ ಅವ್ಯವಹಾರವಿಲ್ಲ. ನಾಲ್ಕು ವಿಭಾಗವಿದೆ ಕೆಲಸ ನಿರ್ವಹಿಸುತ್ತಿದೆ ಎಂದರು. ಪಾಲಿಕೆ ಆಯುಕ್ತ ಮಾತನಾಡಿ ನಗರದಲ್ಲಿ 1.25 ಲಕ್ಷ ಖಾತವಿದೆ. 30 ಸಾವಿರ ಖಾತೆಯನ್ನ ನಾನು ಆಯುಕ್ತರಾಗಿ ಬಂದ‌ಮೇಲೆ ಮಾಡಿಕೊಡಲಾಗಿದೆ. ಈಗ ಆನ್ ಲೈನ್ ಸಿಸ್ಟಮ್ ಮಾಡಲಾಗಿದೆ. ತಿದ್ದುಪಡಿಗೂ ಗ್ರಾಹಕರೆ ಮಾಡಬಹುದಾಗಿದೆ. ಆರ್ ಐಗೆ ಮತ್ತು ಆರ್ ಒ ಗೆ ನೀವು ಕೊಡುವ ದಾಖಲಾತಿ ಪ್ರಕಾರ ಪುಶ್ ಆಗಲಿದೆ ಹೋಗಲಿದೆ. 


ಮಂಗಳವಾರು ಗುರುವಾರ ಶುಕ್ರವಾರಗಳಲ್ಲಿ ಮಧ್ಯಾಹ್ನ 3-5 ಗಂಟೆಗೆ ಪಾಲಿಕೆಗಳ ಜೋನ್ ಗಳಲ್ಲಿ ಇರುತ್ತೇನೆ. ಖಾತಾ ಅದಾಲತ್ ನಡೆಸಲಾಗುತ್ತದೆ. ಇಖಾತ ವಿಳಂಭದ ಬಗ್ಗೆ ವಿಚಾರಣೆ ನಡೆಸಲಾಗುವುದು. ಇದನ್ನ ಸಾರ್ವಜನಿಕರು ಬಳಸಿಕೊಳ್ಳಲು ಸೂಚಿಸಿದರು. ಇಖಾತಾ ಖಡ್ಡಾಯವಾಗಿದೆ. ಈ ಹಿಂದಿನ ಖಾತಾ ಎಕ್ಸ್ಟ್ರಾಕ್ಟ್ ಕೇವಲ ಪೇಪರ್ ಗೆ ಸಮವಾಗಿದೆ ಹಾಗಾಗಿ ಇ-ಖಾತ ಕಡ್ಡಾಯವೆಂದರು. 


ಬ್ರಿಡ್ಜ್ ಗೆ ಡಿಪಿಆರ್  ಸಿದ್ದತೆ


ತುಂಗ ನದಿ ಬ್ರಿಡ್ಜ್ ನ್ಯಾಷನಲ್ ಹೈವೆಗೆ ನಿರ್ವಹಣೆ ಇದೆ. ಹರಿಗೆ ಬಳಿ ದೊಡ್ಡಗುಂಡಿ ಇದೆ. ಇದನ್ನ ಸರಿಪಡಿಸ ಬೆಕ್ಕಿನಕಲ್ಮಠದ ಪಕ್ಕದ ತುಂಗ ನದಿಯ ಹಳೆಯ ಸೇತುವೆ ಮೇ ತಿಂಗಳಿಂದ ಹಳೆ ಸೇತುವೆ ತೆಗೆದು ಹೊಸ ಸೇತುವೆ ನಿರ್ಮಿಸಲು ಡಿಪಿಆರ್ ಆಗ್ತಾಯಿದೆ ಎಂದು ಶಾಸಕರು ಹೇಳಿದರು. 

Discussion on issues like women-friendly pink toilets, decision to remove bed halls at bus stations

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close