ಶಿವಮೊಗ್ಗದಿಂದ ಹೈದ್ರಬಾದ್ ವಿಮಾನ ಹಾರಾಟ ರದ್ದು, ಪ್ರಯಾಣಿಕರ ಆಕ್ರೋಶ-Flight from Shimoga to Hyderabad cancelled, passengers outraged

 SUDDILIVE || SHIVAMOGGA

ಶಿವಮೊಗ್ಗದಿಂದ ಹೈದ್ರಬಾದ್ ವಿಮಾನ ಹಾರಾಟ ರದ್ದು, ಪ್ರಯಾಣಿಕರ ಆಕ್ರೋಶ-Flight from Shimoga to Hyderabad cancelled, passengers outraged    

Flight, Hyderabad


ಶಿವಮೊಗ್ಗದಿಂದ ಹೈದ್ರಾಬಾದ್ ಗೆ ಹಾರಾಡುವ ವಿಮಾನ ರದ್ದಾದ ಕಾರಣ ಪ್ರಯಾಣಿಕರು ವಿಮಾನ ಹಾರಾಟ ರದ್ಧತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

ಇಂದು ಸ್ಪೈಸ್ ಜೆಟ್ ಮಧ್ಯಾಹ್ನ 12-30 ಕ್ಕೆ ಶಿವಮೊಗ್ಗದಿಂದ ಹೈದ್ರಾಬಾದ್ ಗೆ ಹಾರಾಡಬೇಕಿತ್ತು. ಈ ವಿಮಾನಕ್ಕೆ 50-60 ಜನ ಆನ್ ಲೈನ್ ಬುಕ್ ಮಾಡಿಕೊಂಡಿದ್ದರು. ವಿಮಾನ ಹಾರಾಟ ರದ್ದಾದ ಹಿನ್ನಲೆಯಲ್ಲಿ ಇವರೆಲ್ಲರಿಗೂ ಬುಕಿಂಗ್ ಹಣ ವಾಪಾಸ್ ನೀಡಲಾದರೂ ಸಹ ಪ್ರಯಾಣಿಕರು ದಿಡೀರ್ ಹಾರಾಟ ರದ್ದಾದ ಕಾರಣ ಅಕ್ರೋಶ ವ್ಯಕ್ತಪಡಿಸಿದರು.

ಈ ಬಗ್ಗೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದು ತಾಂತ್ರಿಕ ಕಾರಣದಿಂದ ವಿಮಾನ ಹಾರಾಟ ರದ್ದಾಗಿರುವುದಾಗಿ ಹೇಳಿದ್ದಾರೆ. ಇಂತಿಷ್ಟು ಕಿಲೋಮೀಟರ್ ರನ್ ಆದ ಕಾರಣ ವಿಮಾನಗಳು ಸರ್ವಿಸ್ ಗೆ ಹೋಗಬೇಕಾಗಿರುವುದರಿಂದ ಹಾರಾಟ ರದ್ದಾಗಿದೆ ಎಂಬುದು ಅಧಿಕಾರಿಗಳ ಸ್ಪಷ್ಟನೆಯಾಗಿದೆ. 

Flight from Shimoga to Hyderabad cancelled, passengers outraged

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close