SUDDILIVE || SHIVAMOGGA
ಏ.19 ರಂದು ವಿದ್ಯುತ್ ವ್ಯತ್ಯಯ- Power outage on April 19th
ವಿದ್ಯನಗರದಲ್ಲಿ ಕೆವಿ ಮಾರ್ಗದ ಕಾಮಗಾರಿ ಹಿನ್ನಲೆಯಲ್ಲಿ ಇಲ್ಲಿಂದ ಸಂಪರ್ಕಹೊಂದಿದ ಬಡಾವಣೆಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಶಿವಮೊಗ್ಗ ನಗರ ಉಪವಿಭಾಗ-1, ಘಟಕ-1ರ ವ್ಯಾಪ್ತಿಯಲ್ಲಿ ವಿದ್ಯಾನಗರ ಮಾರ್ಗದಲ್ಲಿ 11 ಕೆವಿ ಮಾರ್ಗದ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಏ. 19 ರಂದು ಬೆಳಗ್ಗೆ 10.00 ರಿಂದ ಸಂಜೆ 5.00 ರವರೆಗೆ ವಿದ್ಯಾನಗರ, ಶಾಂತಮ್ಮ ಲೇಔಟ್, ಚಿಕ್ಕಲ್, ಸಿದ್ದೇಶ್ವರನಗರ, ಇಂದಿರಾ ಬಡಾವಣೆ, ಗುರುಪುರ, ಮಂಜುನಾಥ ಬಡಾವಣೆ,
ವೆಂಕಟೇಶ್‌ನಗರ, ಪುರಲೆ, ಅಪೂರ್ವ ಲೇಔಟ್, ಕಂಟ್ರಿಕ್ಲಬ್ ರಸ್ತೆ, ಗೋಶಾಲೆ ಹಾಗೂ ಸುತ್ತಮುತ್ತಲಿನ ಪ್ರದೇಶ. ಬಿ.ಹೆಚ್.ರಸ್ತೆ, ಮೀನಾಕ್ಷಿಭವನ, ಬಾಪೂಜಿನಗರ, ಟಿಜಿಎನ್ ಲೇಔಟ್, ಜೋಸೆಫ್ ನಗರ, ಚರ್ಚ್ ಕಾಂಪೌಂಡ್, ಕಾನ್ವೆಂಟ್ ರಸ್ತೆ, ಲೂರ್ದ್ ನಗರ, ಸರ್.ಎಂ.ವಿ.ರಸ್ತೆ, ಕುವೆಂಪು ರಂಗಮಂದಿರ, ಗಾಂಧಿಪಾರ್ಕ್, ಮಹಾನಗರ ಪಾಲಿಕೆ, ಪಾರ್ಕ್ ಬಡಾವಣೆ, ದುರ್ಗಿಗುಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಏ.19 ರಂದು ವಿದ್ಯುತ್ ವ್ಯತ್ಯಯ
ಶಿವಮೊಗ್ಗ ನಗರ ಉಪವಿಭಾಗ-1, ಘಟಕ-2ರ ವ್ಯಾಪ್ತಿಯಲ್ಲಿ ವಿದ್ಯುತ್ ಕಂಬ ತೆರವು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಏ. 19 ರಂದು ಬೆಳಗ್ಗೆ 10.00 ರಿಂದ ಮಧ್ಯಾಹ್ನ 2.00 ರವರೆಗೆ ದುರ್ಗಿಗುಡಿ, ಪಾರ್ಕ್ ಬಡಾವಣೆ, ಸೀತಾರಾಮ ಕಲ್ಯಾಣ ಮಂದಿರ ರಸ್ತೆ, ಗೋಪಿ ಸರ್ಕಲ್, ಸರ್ಜಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ, ವಾತ್ಸಲ್ಯ ಹಾಸ್ಪಿಟಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
Power outage on April 19th
