ಸಿಎಂ‌ ಜೊತೆ ಮಾತನಾಡಿ SSLC ಫಲಿತಾಂಶದ ದಿನಾಂಕ ನಿಗದಿ-ಮಧು ಬಂಗಾರಪ್ಪ-SSLC result date to be fixed after talking to CM - Madhu Bangarappa

 SUDDILIVE || SHIVAMOGGA

ಸಿಎಂ‌ ಜೊತೆ ಮಾತನಾಡಿ SSLC  ಫಲಿತಾಂಶದ ದಿನಾಂಕ ನಿಗದಿ-ಮಧು ಬಂಗಾರಪ್ಪ-SSLC result date to be fixed after talking to CM - Madhu Bangarappa      

SSLC, MADHUBANGARAPPA

ಬೇಸಿಗೆಮಳೆ ಮುಂಚಿತವಾಗಿ ಬೀಳುತ್ತಿದೆ. ಇದು ಮಾನ್ಸೂನ್ ಮಳೆಗೆ ತಡೆಯಾಗುವ ಅನುಮಾನವೂ ಇದೆ ಎಂದು ಸಚಿವ ಮಧು ಬಂಗಾರಪ್ಪ ಆತಂಕ ವ್ಯಕ್ತಪಡಿಸಿದರು. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಗ್ಗೆ ಅಧಿಕಾರಿಗಳ ಸಭೆ ನಡೆದಿದೆ. ಮಳೆ ಬಂದರೂ ಮಾನ್ಸೂನ್ ಮಳೆಗೆ ಅಡ್ಡಿಯಾಗುವ ಬಗ್ಗೆ ಕುಡಿಯುವ ನೀರು, ರೈತರ ಬೆಳೆಗೆ ಸಮಸ್ಯೆಯಾಗುವ ಸಾಧ್ಯತೆ ಬಗ್ಗೆ ಆತಂಕವಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಇದರ ಆತಂಕವಿದೆ. ಬೇಸಿಗೆ ಮಳೆಗೆ ನನ್ನ ಕ್ಷೇತ್ರ ಹೆಚ್ಚು ಹಾನಿಯಾಗಿದೆ ಎಂದರು. 

ಕೆಎಫ್ ಡಿಯಲ್ಲಿ ಇದುವರೆಗೂ ಹೊಸನಗರ, ಸಾಗರ ತೀರ್ಥಹಳ್ಳಿಯಲ್ಲಿ ಒಟ್ಟು ನಾಲ್ಲು ಸಾವಾಗಿದೆ. ಇವರಿಗೆ ತಾಲೂಕು ಹೆಡ್ ಕ್ವಾಟ್ರಸ್ ನಲ್ಲಿ ವ್ಯವಸ್ಥೆಯಾಗಿದೆ. ಪ್ರತಿ ತಾಲೂಕಿನಲ್ಲಿ 10 ಬೆಡ್ ರೆಡಿ ಮಾಡಿಕೊಳ್ಳಲಾಗಿದೆ.  104 ಜನ ಸೋಂಕು ಕಾಣಿಸಿದೆ. 81 ಜನ ಗುಣಮುಖರಾಗಿದ್ದಾರೆ. ಇದಕ್ಕೆ ಲಸಿಕೆ ಕಂಡು ಹಿಡಿಯಲಾಗಿಲ್ಲ. ಲೋಷನ್ ಸಿಗುತ್ತೆ ಎಂದರು. 

ಸಾಗರದಲ್ಲಿ 2740 ಜನರಿಗೆ ಟೆಸ್ಟ್ ಮಾಡಲಾಗಿದೆ. 30 ಜನರಿಗೆ ಪಾಸಿಟಿವ್ ಕಂಡು ಬಂದಿದೆ. ನೈಟ್ ಲ್ಯಾಂಡ್ ಮಳೆಗಾಲದಲ್ಲಿ ಮುಗಿಯುವ ಸಾಧ್ಯತೆಯಿದೆ. ಸಂಸದರು ಡಬಲ್ ಆಕ್ಟಿಂಗ್ ಮಾಡ್ತಿರ್ತಿರ್ತಾರೆ. ಇಂಡಿಗೋ ಫ್ಲೈಟ್ ಮೇ.1 ರಿಂದ ಬಂದ್ ಆಗಲಿದೆ. ಈ ಬಗ್ಗೆ ಸಚಿವ ಎಂಬಿ ಪಾಟೀಲ್ ಜೊತೆ ಮಾತನಾಡಿರುವೆ. ಸರ್ಕಾರ ಕ್ರಮ ಜರುಗಿಸಲಿದೆ ಎಂದರು. 

ಸಿಎಂ ಜೊತೆ ಚರ್ಚಿಸಿ ದಿನಾಂಕ ನಿಗದಿ

ಎಸ್ ಎಸ್ ಎಲ್ ಸಿ ರಿಸಲ್ಟ್  ಯಾವಾಗ ಪ್ರಕಟವಾಗಲಿದೆ ಎಂಬುದರ ಬಗ್ಗೆ ಇಂದು ಸಂಜೆ ಸಿಎಂ ಜೊತೆ ಚರ್ಚಿಸಿ ಪ್ರಕಟಗೊಳಿಸಲಿದೆ. ಹಿಂದಿ ಭಾಷೆಯಲ್ಲಿ ಮೂರು ಭಾಷೆ ಮಕ್ಕಳ ಕಲಿಕೆಗೆ ಒತ್ತಡವಾಗಲಿದೆ. 9 ಭಾಷೆಯಿದೆ. ಎರಡು ಭಾಷೆಯಿರಬೇಕು ಎಂಬುದು ನನ್ನ ಆಸೆಯಿತ್ತು. 9 ನೇ ತರಗತಿಯ ವರೆಗೆ ಪರೀಕ್ಷೆ ನಡೆಸಬಾರದು ಎಂದು ಇದೆ. ಪರೀಕ್ಷೆ ನಡೆಸಲಾಗುತ್ತಿದೆ. ಈ ಬಾರಿಯ ಹಿಂದಿ ಪರೀಕ್ಷೆಗೆ ಅಂಕ ಕೊಡಿ ಎಂದು ನ್ಯಾಯಾಲಯ ಹೇಳಿದೆ. 

ಇದಾದ ಮೇಲೆ ನೀವು ಏನು ಬೇಕಾದರೂ ಮಾಡಿಕೊಳ್ಳಿ ಎಂದು ನ್ಯಾಯಾಲಯ ಹೇಳಿದೆ ಅದರಂತೆ ಸಿಎಂ ಜೊತೆ ಚರ್ಚಿಸಿ ನಂತರ SSLC ಪರೀಕ್ಷೆ ಫಲಿತಾಂಶ ಪ್ರಕಟವಾಗೊಇದೆ. ಈ ಬಾರಿ ಫಲಿತಾಂಶ ಅದ್ಭುತವಾಗಿದೆ. ಪಿಯುಸಿ ದ್ವಿತೀಯ ಪರೀಕ್ಷೆ 86.4 % ಬಂದಿದೆ ಎಂದರು. 

ಶಿಕ್ಷಕರ ನೇಮಕಾತಿ ಮಾಡಲಾಗುವುದು. ಪ್ರಿಪ್ರೇಟರಿಗೆ ಸ್ಟೇಟ್ ಲೆವಲ್ ಎಕ್ಸಾಮ್ ನಡೆಸಿದ್ದಕ್ಕೆ ಅನುಕೂಲವಾಗಿತ್ತು. 8000 ಪ್ರಶ್ನಾವಳಿಯ ಬ್ಯಾಂಕ್ ನೀಡಲಾಗಿತ್ತು. ರಿವಿಷಬ್ ಮಾಡಲಾಗಿತ್ತು. ಇದು ಮ್ಯಾಜಿಕ್ ಆಗಿರಲಿಲ್ಲ ಪೋಷಕರು ಶಿಕ್ಷಕರು, ಅತಿತಿ ಶಿಕ್ಷಕರು ಸಹಕರಿಸಿದ್ದಾರೆ. ಪಿಯುಸಿ  ಪಾಸಿಂಗ್ ಮಾರ್ಕ್ಸ್ ಕಡಿಮೆ ಮಾಡಿದ್ದಕ್ಕೆ 1.37% ಅಷ್ಟೆ ಪಾಸ್ ಆಗಿದ್ದಾರೆ ಎಂದರು. 

ಕಳೆದ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ  6 ಸಬ್ಜೆಕ್ಟ್ ಫೇಲ್ ಆದವರು 30 ಸಾವಿರ ಮಕ್ಕಳಿದ್ದರು. ಈ ಬಾರಿ 1776 ಮಕ್ಕಳು ಫೇಲ್ ಆಗಿದ್ದಾರೆ. ಉತ್ತರ ಕರ್ನಾಟ ದಲ್ಲಿ 27% ಪಾಸಿಂಗ್ ಶೇಕಡ ಪಾಸ್ ಆಗಿದ್ದಾರೆ. scst 17% ನಾಲ್ಕು ಪರ್ಸೆಂಟೇಜ್ ಸಾಮಾನ್ಯದವರ್ಗದವರು ಪಾಸ್ ಆಗಿದ್ದಾರೆ ಎಂದರು.

ಮಹಿಳ ಮೀಸಲಾತಿ 2023 ರಲ್ಲಿ ಪಾಸ್ ಆಗಿದ್ದು ಈ ವಾರಿ ಮತ್ತೆಯಾಕೆ ತಂದರು. ಪಶ್ಚಿಮ ಬಂಗಾಳ ಮತ್ತು ತಮಿಳು ನಾಡು ಚುನಾವಣೆಯ ವೇಳೆ ಮತ್ತೆ ಮಂಡಿಸಿದ್ದೇಕೆ? ತೆರಿಗೆ ವಿಚಾರದಲ್ಲಿ ಬಂದರೆ ನಮ್ಮ ರಾಜ್ಯಕ್ಕೆ ಅನ್ಯಾಯವಾಗುವುದಿಲ್ಲವೇ? ಅದೇ ರೀತಿ ಡಿಲಿಮಿಟ್ಸ್ ಬಗ್ಗೆ ಆಗಲಿದೆ. 2023 ರಲ್ಲಿ ಬಿಲ್ ಪಾಸಾದಾಗ ಗುಜರಾತ್ ಗೆ ಹೋಗಿ ಮತಯಾಚಿಸಿದ್ದರು. ತೆರಿಗೆ ವಿಚಾರದಲ್ಲಿ ಬಿಹೆಪಿಯವರು ಮಾತು ಎತ್ತುತ್ತಿಲ್ಲ ಯಾಕೆ ಎಂದರು. 

ತೆರಿಗೆ ವಿಚಾರದಲ್ಲಿ ಸಂಸದರ ಮೌನ

ತೆರಿಗೆ ವಿಚಾರದಲ್ಲಿ ಯಾವತ್ತು ಸಂಸದ ರಾಘವೇಂದ್ರ ಮಾತನಾಡಿದ್ದಾರೆ? ಪ್ರಧಾನಿ ಕೊರೋನ ವೇಳೆ ಸತ್ತವರ ಲೆಕ್ಕ ಕೊಡಲಿಲ್ಲ. ರಾಹುಲ್ ಗಾಂಧಿ ಈ ಬಗ್ಗೆ ಮಾತೆತ್ತಿದರೆ ಪಪ್ಪು ಎಂದು ಕರೆಯುತ್ತಾರೆ. ಮೋದಿಯವರಿಗೆ ಮತಹಾಕಿ ಎಂದು ಕೇಳಿಕೊಂಡು ಹೋದ ಕಾರಣ ಜನ ಮತಹಾಕಿದರು ಆದರೆ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂದರು. 

ನಮಗೆ ಬರುವ ಸೆಂಟ್ರಲ್ ಗವರ್ನ್ ಮೆಂಟ್ ಸ್ಕೀಮ್ ಗಳನ್ನ ತಡೆಹಿಡಿಯಲಾಗಿದೆ. ಇಲ್ಲಿನ ಸಂಸದರೆ ಯಾವುದನ್ನೂ ಕೊಡಬೇಡಿ ಎಂದು ಹೇಳಿದ್ದಾರೆ. ನಮ್ಮ ಬಳಿ ಇದಕ್ಕೆ ಸಾಕ್ಚಿಯಿಲ್ಲ. ಆದರೆ ಮೌಖಿಕವಾಗಿ ಆದೇಶವಾಗಿದೆ. ಕಸ್ತೂರಿರಂಗನ್ ಸಾವಾದಾಗ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಬೆಂಗಳೂರಿಗೆ ಬಂದಾಗ ಅನುದಾನ ಕೊಡಿಎಂದು ಮನವಿ ಕೊಟ್ಟಿರುವೆ ಎಂದು ನೋವು ಹೇಳಿಕೊಂಡರು. 

ಮೀಸಲಾತಿ ಫೈನಲ್ ಆದರೆ ನೇಮಕಾತಿ ಪಕ್ಕ

17 ಸಾವಿರ ಶಿಕ್ಷಕರ ನೇಮಕಾತಿಗೆ ಮೀಸಲಾತಿ ಫೈನಲ್ ಆಗಬೇಕು. ಅತಿಥಿ ಶಿಕ್ಷಕರನ್ನೂ ತೆಗೆದುಕೊಳ್ಳಬಹುದು. ಜೂನ್ ಒಳಗೆ ನೇಮಕಾತಿ ಮಾಡುವ ಬಗ್ಗೆ ತುದಿಕಾಲದಲ್ಲಿದೆ  ಮೀಸಲಾತಿ ಅಂತಿಮಗೊಂಡರೆ 85 ದಿನಗಳಲ್ಲಿ ನೇಮಕಾತಿ ಮಾಡುವೆ ಎಂಸರು. 

ಹುಲಿಕಲ್ ಘಾಟಿ ವಿಚಾರದಲ್ಲಿ ಸೀರಿಯಸ್ ಆಗಿದ್ದೇನೆ. ಗುತ್ತಿಗೆದಾರ ತಪ್ಪು ಮಾಡಿರುವ ಬಗ್ಗೆ ವರದಿ ಬಂದಮೇಲೆ ಮಾತನಾಡುವೆ ಎಂದರು‌.

SSLC result date to be fixed after talking to CM - Madhu Bangarappa 


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close