ಚಕ್ರವರ್ತಿ ಸೂಲಿಬೆಲೆಗೆ ನಿರ್ಭಂಧಿಸುವಂತೆ SDPI ಎಸ್ಪಿಗೆ ಮನವಿ-SDPI appeals to SP to arrest Chakravarthy Sulibele

 SUDDILIVE || SHIVAMOGGA

ಚಕ್ರವರ್ತಿ ಸೂಲಿಬೆಲೆಗೆ ನಿರ್ಭಂಧಿಸುವಂತೆ SDPI ಎಸ್ಪಿಗೆ ಮನವಿ-SDPI appeals to SP to arrest Chakravarthy Sulibele  

SDPI, chakravarthy


ಅಧಮ್ಯ ಚೇತನದ ಅಡಿ ನಾಳೆ ನಡೆಯುತ್ತಿರುವ ಕಾರ್ಯಕ್ರಮಕ್ಕೆ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಆಗಮಿಸುತ್ತಿದ್ದು, ಕಾರ್ಯಕ್ರಮದಲ್ಲಿ ಅವರ ಪಾಲ್ಗೊಳ್ಳುವಿಕೆಯನ್ನ ಎಸ್ ಡಿ ಪಿ ಐ ಆಕ್ಷೇಪಿಸಿದೆ. 

ಶಿವಮೊಗ್ಗ ಜಿಲ್ಲೆಯಲ್ಲಿ ಶಾಂತಿ ಕಾಪಾಡಲು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ SDPI ಪಕ್ಷದ ಜಿಲ್ಲಾ ಸಮಿತಿ ಇಂದು SP ನಿಖಿಲ್ ರನ್ನ ಭೇಟಿ ಮಾಡಿ ಮನವಿ ನೀಡಿದೆ. 

ಶಿವಮೊಗ್ಗ ನಗರದ ಕುವೆಂಪು ರಂಗಮಂದಿರದಲ್ಲಿ ನಾಳೆ ಅಂದರೆ 18/04/2026ರ ಸಂಜೆ ನಡೆಯಲಿರುವ "ನಾನೇ ಭಾರತ್" ಕಾರ್ಯಕ್ರಮಕ್ಕೆ ಕೋಮು ದ್ವೇಷ ಭಾಷಣಕಾರರ ಚಕ್ರವರ್ತಿ ಸೂಲಿಬೆಲೆಗೆ ನಿರ್ಭಂಧ ಹೇರಲು ಮನವಿ ನೀಡಲಾಗಿದೆ.

ಹಲವು ಜಿಲ್ಲೆಗಳಲ್ಲಿ ನಿರ್ಭಂಧಕ್ಕೆ ಒಳಗಾಗಿರುವ ದ್ವೇಷ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಮೇಲೆ ಹಲವು ಕೋಮು ಪ್ರಚೋದನಕಾರಿ ಭಾಷಣದ ಪ್ರಕರಣಗಳಿದ್ದು, ಶಿವಮೊಗ್ಗದಲ್ಲಿ ಶಾಂತಿ ಕಾಪಾಡಲು ಚಕ್ರವರ್ತಿ ಸೂಲಿಬೆಲೆಗೆ ಭಾಷಣ ಮಾಡಲು ಬಿಡಬಾರದು ಎಂದು ಮನವಿ ನೀಡಲಾಗಿದೆ.

ಈ ಸಂದರ್ಭದಲ್ಲಿ SDPI ಪಕ್ಷದ ಜಿಲ್ಲಾಧ್ಯಕ್ಷ ಜೀಲಾನ್ ರಜಾ ಖಾನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಇಮ್ರಾನ್, ಜಮೀರ್, ಸಮಿತಿ ಸದಸ್ಯರಾದ ಕಲೀಂ, ಇಸಾಖ್, ಮತ್ತು ಶಿವಮೊಗ್ಗ ನಗರ ಕಾರ್ಯದರ್ಶಿ ಸಜೀಲ್, ನಗರ ಸಮಿತಿಯ ಹಬೀಬ್ ರವರು ಉಪಸ್ಥಿತರಿದ್ದರು.

SDPI appeals to SP to arrest Chakravarthy Sulibele

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close