SUDDILIVE || SHIVAMOGGA
ಎಕರೆಗೆ 50 ಸಾವಿರ ಪರಿಹಾರ ನೀಡಿ, ಏರ್ ಪೋರ್ಟ್ ನ್ನ ಏರ್ ಪೋರ್ಟ್ ಅಥಾರಿಟಿಗೆ ಹಸ್ತಾಂತರಿಸಿ-ಬಿವೈಆರ್- Give compensation of 50 thousand per acre, hand over the airport to the Airport Authority - BYR
ಹೊಳೆಹೊನ್ನೂರು ಭಾಗದಲ್ಲಿ ಮೊನ್ನೆ ಬಿರುಗಾಳಿ ಮತ್ತು ಮಳೆಯಿಂದ ರೈತರ ಬದುಕನ್ನೇ ಹಾಳು ಮಾಡಿದೆ. ಅವರಿಗೆ ಸರ್ಕಾರದ ಸೂಕ್ತ ಪರಿಹಾರ ನೀಡಬೇಕೆಂದು ಸಂಸದ ಬಿ.ವೈ ರಾಘವೇಂದ್ರ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಶೋಕ್ ನಾಯ್ಕ್, ಎಂಎಲ್ ಸಿ ಡಾ.ಧನಂಜಯ ಸರ್ಜಿ, ಮಲ್ಲೇಶಪ್ಪ ಮತ್ತು ರೈತ ಮೋರ್ಚ ಹೊಳೆಹೊನ್ನೂರಿನ ಕೆಲ ಗ್ರಾಮಗಳಿಗೆ ಭೇಟಿ ನೀಡಲಾಯಿತು. ಹೊಳಲೂರು ಮತ್ತು ಇತರೆ ಭಾಗದಲ್ಲಿ ಅಡಿಕೆ ಮರಗಳು ಫಸಲು ಹಾಳಾಗಿವೆ. ಮನೆಗಳು ಹಾನಿಯಾಗಿವೆ. ಒಂದು ಪ್ರಾಣ ಹಾನಿಯಾಗಿದೆ. 300-400 ವಿದ್ಯುತ್ ಕಂಬಗಳು ಮುರಿದು ಬಿದ್ದಿದೆ. ಜನಜೀವನ ಅಸ್ತವ್ಯಸ್ತವಾಗಿದೆ ಎಂದರು.
ಏನು ಮಾಡುವ ಸ್ಥಿಯಲ್ಲಿ ರೈತನಿದ್ದು, ಸರ್ಕಾರವಿರುವ ಭರವಸೆಯನ್ನ ರೈತ ಹೊಂದಿದ್ದಾನೆ. 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ 5-6 ಸಾವಿರ ಹೆಕ್ಟೇರ್ ಅಡಿಕೆ ತೋಟ ನಾಶವಾಗಿದೆ. ಇಂತಹ ಅನಾಹುತ ಇತ್ತೀಚೆಗೆ ಏಪ್ರಿಲ್ ನಲ್ಲಿ ನೋಡಿಲ್ಲ. NDRS ಫಂಡ್ ನಿಂದ SDRF ನಿಂದ 31 ಸಾವಿರ ಪ್ರತಿ ಹೆಕ್ಟೇರ್ ಗೆ 75% ಕೇಂದ್ರ 25% ರಾಜ್ಯ ಸರ್ಕಾರ ಪರಿಹಾರ ನೀಡಬೇಕಿದೆ. ಇದು ಸಾಕಾಗಲ್ಲ ಎಂದರು.
ಎಕರೆಗೆ 50 ಸಾವಿರ ರೂ. ಪರಿಹಾರ ಬೇಕು
ಒಂದು ಎಕರೆಗೆ 50 ಸಾವಿರ ರೂ ಪರಿಹಾರ ಕೊಡಬೇಕು. ಜಿಲ್ಲಾಧಿಕಾರಿಗಳು ಚರ್ಚೆ ಮಾಡಿ ಒಂದು ಹೆಕ್ಟೇರ್ ಗೆ 1 ಲಕ್ಷ ರೂ ಪರಿಹಾರ ನೀಡಬೇಕೆಂದರು. 2024-25 ಕ್ಕೆ ಪ್ರಧಾನಿ ಮಂತ್ರಿಗಳ ಫಸಲು ಭೀಮಾ ಯೋಜನೆಯಲ್ಲೂ ಪರಿಹಾರ ನೀಡಬಹುದಾಗಿತ್ತು. ಆದರೆ ಈ ಯೋಜನೆಗೆ ರೈನ್ ಗೇಜ್ ಸರಿಯಿರಬೇಕು. 60-70 ರೈನ್ ಗೇಜ್ ಹಾಳಾಗಿದೆ. ವೈಜ್ಞಾನಿಕವಾಗಿಲ್ಲ ಎಂದು ಹಿಂದಿನ ಡಿಸಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಇದುವರೆಗೂ ಅದಕ್ಕೆ ರಾಜ್ಯ ಸರ್ಕಾರ ಉತ್ತರಿಸಿಲ್ಲ. ಆಲಿಕಲ್ಲು, ಹೆಚ್ಚು ರೈನ್, ಎಕ್ಸಸ್ ಹೀಟ್ ಗೆ ಟರ್ಮ್ ಶೀಟ್ ಗೆ ಹಾಕಿ ಕೊಟ್ಟಿದ್ದರೆ ಫಸಲು ಭೀಮ ಯೋಜನೆ ಅನುಕೂಲವಾಗುತ್ತಿತ್ತು ಎಂದರು.
ಏಪ್ರಿಲ್ ತಿಂಗಳಲ್ಲಿ ಎಕ್ಸಟ್ರೀಮ್ ಟೆಂಪ್ರೇಚರ್ ಗೆ ಮಾತ್ರ ಪರಿಹಾರವಿದೆ. ಜೂನ್ ನಿಂದ ಪರಿಹಾರವಿದೆ ಎಂದು ಹೇಳಲಾಗಿದೆ.ಕ್ಲೌಡ್ ಬಸ್ಟ್ ಗೆ ಬಿರು ಬಿಸಲಿಗೆ, ಅಧಿಕ ಮಳೆಗೆ ಪರಿಹಾರವಿದೆ. ಆದರೆ ಏಪ್ರಿಲ್ ನಲ್ಲಿ ಬೀಳುವ ಅಡ್ಡ ಮಳೆಗೆ ಪರಿಹಾರವಿಲ್ಲ. ಅದಕ್ಕೂ ನೀಡಬೇಕು. ರೈತರು 30% ಪ್ರೀಮಿಯಂ ಹಣ ಕಟ್ಟಿದರೆ 70% ಪರಿಹಾರ ಧನ ಅವರಿಗೆ ಬರುತ್ತದೆ. ಆದರೆ ಇದನ್ನ 5-10% ಹೆಚ್ಚಿಸಿ ಪ್ರೀಮಿಯಂ ಕಟ್ಟಿದರೆ ಪರಿಹಾರ ನೀಡಬಹುದು ಎಂದು ಅಧಿಕಾರಿಗಳು ಹೇಳುತ್ತಾರೆ. ಸರ್ಕಾರ ರೈತರಿಗೆ ಹೊರೆಯಾಗದಂತೆ ಪ್ರೀಮಿಯಂಕಟ್ಟಿಸಿಕೊಂಡು ಪರಿಹಾರವನ್ನ ಬೇಸಿಗೆಯ ಅಡ್ಡಮಳೆಗೂ ಪರಿಹಾರ ನೀಡಬೇಕೆಂದರು.
ಟರ್ಮ್ ಶೀಟ್ ನೀಡುವಾಗ ಸಂಸ್ಥೆಗಳ ವಿಶ್ವಾಸಕ್ಕೆ ಪಡೆಯಿರಿ
ಆದಷ್ಟು ಬೇಗ ಎಕರೆಗೆ 50 ಸಾವಿರವನ್ನ ವಿಷೇಶ ಪರಿಹಾರದ ಧನದ ಅಡಿ ಕೊಡಬೇಕು. ಮಾವಿನ ಮರಕ್ಕೆ ಕೋಲಾರದಲ್ಲಿ ಹೆಕ್ಟೇರ್ ಗೆ 1 ಲಕ್ಷ ರೂ. ಪರಿಹಾರ ನೀಡಲಾಗಿದೆ. ಒಂದು ವಾರದಲ್ಲಿ ಬೆಳೆವಿಮೆ ಟರ್ಮ್ ಶೀಟ್ ನ್ನ ಸರ್ಕಾರಕ್ಕೆ ನೀಡಬೇಕು. ಈಗಲೇ ಎಚ್ಚರಿಕೆ ವಹಿಸಿ ಅನಾಹುತಗಳಿಗೆ ಟರ್ಮ್ ಶೀಟ್ ಬರೆಯುವ ಕಂಪನಿಗಳನ್ನ ವಿಶ್ವಾಸ ತೆಗೆದುಕೊಂಡು ಸರ್ಕಾರಕ್ಕೆ ಕೊಡಬೇಕು ಎಂದರು.
ಈಗಿನ ಮಾನದಂಡ ಪ್ರಕಾರ ಒಂದು ರೂ. ಪರಿಹಾರ ಬರಲ್ಲ. ಕೇಂದ್ರದ ನಾರ್ಮ್ಸ್ ಇದೆ. ಇದು ಗಿನ ರಾಜ್ಯ ಸರ್ಕಾರ ಕೇಂದ್ರದೊಂದಿಗೆ ಸರಿಯಿಲ್ಲದ ಕಾರಣ ಕೇಂದ್ರ ನೇರವಾಗಿ ಪರಿಹಾರ ನೀಡಲು ಮುಂದೆ ಬರೊಲ್ಲ. ಭಾಗಶಃ ಮನೆ ಹಾನಿಗೆ 3 ಲಕ್ಷ ರೂ. ಮತ್ತು ಸಂಪೂರ್ಣ ಬಿದ್ದು ಹೋದರೆ 5 ಲಕ್ಷ ರೂ. ನೀಡಬೇಕು.
ಏರ್ ಪೋರ್ಟ್ ಅಥಾರಿಟಿ ಆಫ್ ಇಂಡಿಯಾಗೆ ಹಸ್ತಾಂತರಿಸಿ
ತಗಡು ಬಿದ್ದು ಮಾನಹಾನಿಯಾಗಿದೆ. ಪ್ರಕೃತಿ ಹಾನಿಯಾಗಬೇಕು. ಇಂಡಿಗೋ ವಿಮಾನ ನಾಳೆ ಬಂದ್ ಆಗಲಿದೆ. ಪ್ರಹ್ಲಾದ್ ಜೋಷಿ, ಬಿಎಸ್ ವೈ, ಸಂಸದನಾದ ನಾನು ಎಂಬಿ ಪಾಟೀಲ್ ಗೆ ಮನವಿ ಮಾಡಿಕೊಂಡಿದ್ದೀವಿ. ವಿಜಿಎಫ್ ಸ್ಕೀಮ್ ಉಡಾನ್ ನಲ್ಲಿ ಬರೊಲ್ಲ. ಪ್ರತಿಸೀಟ್ ಗೆ ರಾಜ್ಯ ಸರ್ಕಾರ 25% ಹಣವನ್ನ ವಿಮಾನಕ್ಕೆ ಕೊಡಬೇಕು. ಅದು ಮುಗಿಯುವುದರಿಂದ ಸರ್ಕಾರಿ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದೇವೆ. ಯಾವುದೂ ಪ್ರಯತ್ನ ಫಲಿಸಿಲ್ಲ ಎಂದರು.
ಎಂಬಿ ಪಾಟೀಲ್ ಗೆ ಶಿವಮೊಗ್ಗದ ಏರ್ ಪೋರ್ಟ್ ನ್ನ ಏರ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾಗೆ ಹ್ಯಾಂಡ್ ಓವರ್ ಮಾಡಲು ಮನವಿ ಮಾಡಿಕೊಳ್ಳಲಾಗಿದೆ. ಕೇಂದ್ರ ಸರ್ಕಾರನಾದರೂ ರನ್ ಮಾಡುತ್ತದಾ ನೋಡಬೇಕಿದೆ. ನೈಟ್ ಲ್ಯಾಂಡಿಂಗ್ ಕಾಮಗಾರಿ ಇಷ್ಟರೊಳಗೆ ಮುಗಿದಿದ್ದರೆ ಇಂಡಿಗೋ ವಿಮಾನ ಹಾರಾಟ ಉಳಿಸಿಕೊಳ್ಳಬಹುದಿತ್ತು ಎಂದರು.
Give compensation of 50 thousand per acre, hand over the airport to the Airport Authority - BYR

