ಮನೆಕಳವು ಪ್ರಕರಣ-ಬೆಂಡೆತ್ತಿ ಬ್ರೇಕ್ ಹಾಕಿದ ತುಂಗ ನಗರ ಪೊಲೀಸರು-Housebreaking case: Tunga Nagar police crack down on gang-rape

 SUDDILIVE || SHIVAMOGGA

ಮನೆಕಳವು ಪ್ರಕರಣ-ಬೆಂಡೆತ್ತಿ ಬ್ರೇಕ್ ಹಾಕಿದ ತುಂಗ ನಗರ ಪೊಲೀಸರು-Housebreaking case: Tunga Nagar police crack down on gang-rape    

House, breaking


ಮನೆಕಳವು ಪ್ರಕರಣದಲ್ಲಿ ಆರೋಪಿಯನ್ನ ತುಞಮಗ ನಗರ ಪೊಲೀಸರು ಬಂಧಿಸಿದ್ದಾರೆ. ಮನೆಯ ಕಿಟಕಿ ಓಪನ್ ಮಾಡಿ ಮಲಗಿದ್ದ ವೇಳೆ ಆರೋಪಿಗಳು ಕಿಟಕಿ ಬಾಗಿಲಿನಿಂದ ಡೋರ್ ತೆಗೆದು ಮನೆಕಳವು ಮಾಡಿದ್ದರು. ಮನೆಕಳವು ಆರೋಪಿ ಈಗ ಪೊಲೀಸರ ಅತಿಥಿಯಾಗಿದ್ದಾರೆ. 

ಶಿವಮೊಗ್ಗ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಚಾಲುಕ್ಯ ನಗರದಲ್ಲಿ ದೂರುದಾರರು‌ ಮನೆಯಲ್ಲಿ ಇದ್ದಾಗಲೇ, ಮನೆಯಲ್ಲಿ ಚಿನ್ನಾಭರಣವು ಕಳ್ಳತನವಾದ ಬಗ್ಗೆ  ಪ್ರಕರಣ ವರದಿಯಾಗಿತ್ತು.  

ಪ್ರಕರಣದಲ್ಲಿ ಮಾನ್ಯ ಎಸ್.ಪಿ ಸಾಹೇಬರರಾದ ಶ್ರೀ ನಿಖಿಲ್ ಬಿ. ಐಪಿಎಸ್, ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿಗಳಾದ ಎ.ಜಿ ಕಾರಿಯಪ್ಪ ರವರ ಹಾಗೂ ಉಪವಿಭಾಗದ ಡಿ.ವೈ.ಎಸ್.ಪಿ  ಬಾಬು ಅಂಜನಪ್ಪ ರವರ ಮಾರ್ಗದರ್ಶನದಲ್ಲಿ ತುಂಗಾನಗರ ಇನ್ಸ್ ಪೆಕ್ಟರ್  ಕೆ.ಟಿ ಗುರುರಾಜ್, ಗಾದಿಲಿಂಗಪ್ಪ ಗೌಡರ್ ಪಿ.ಎಸ್.ಐ,  ರಘುವೀರ.ಎಂ ಪಿ.ಎಸ್.ಐ, ಶ್ರೀಮತಿ ಮಂಜಮ್ಮಮ.ಪಿ.ಎಸ್.ಐ ರವರ ನೇತೃತ್ವದಲ್ಲಿ ಹಾಗೂ ಪೊಲೀಸ್ ಸಿಬ್ಬಂದಿಯವರಾದ ಹೆಚ್‌ಸಿ ಕಿರಣ್ ಮೋರೆ, ಅರುಣ್‌ಕುಮಾರ್, ಹಾಗೂ ಸಿಪಿಸಿಗಳಾದ ಹರೀಶ್, ರಂಗನಾಥ್, ತಮ್ಮಣ್ಣ ಜಂಬಗಿ ರವರನ್ನೊಳಗೊಂಡ ತಂಡವನ್ನು  ರಚಿಸಲಾಗಿರುತ್ತದೆ. 

ಸದರಿ ತನಿಖಾ ತಂಡವು ಆರೋಪಿ ಚಾಂದ್ ಪೀರ್ @ ಮೊಹಮದ್ ಯೂನಸ್, 31 ವರ್ಷ ಚನ್ನಗಿರಿ ದಾವಣಗೆರೆ ಜಿಲ್ಲೆ ಈತನನ್ನ ದಸ್ತಗಿರಿ ಮಾಡಿ, ವಿಚಾರಣೆಗೊಳಡಿಸಿದ್ದು, ಬಾಗಿಲಿನ ಪಕ್ಕದಲ್ಲಿನ ಕಿಟಕಿಯ ತೆಗೆದು ಅದರೊಳಗೆ ಕೈಹಾಕಿ ಮನೆಯ ಮುಖ್ಯ ಬಾಗಿಲಿನ ಲಾಕ್ ತೆಗೆದು ಮನೆಯೊಳಗೆ ಪ್ರವೇಶಿಸಿ ದೂರುದಾರರು ಮಲಗಿದ್ದ ರೂಂನ ಬಾಗಿಲಿನ ಚಿಲಕವನ್ನು ಹಾಕಿಕೊಂಡು ಮನೆಯೊಳಗಿದ್ದ ಒಟ್ಟು ಬಂಗಾರದ ಆಭರಣಗಳನ್ನು, ನಗದು ಮತ್ತು ಮೊಬೈಲನ್ನು ಕಳ್ಳತನ ಮಾಡಿರುವುದು ತಿಳಿದು ಬಂದಿರುತ್ತದೆ. 

ಆರೋಪಿತನಿಂದ ಅಂದಾಜು1,90,000/- ರೂ ಮೌಲ್ಯದ 19 ಗ್ರಾಂ ಬಂಗಾರದ ಆಭರಣಗಳನ್ನು ಹಾಗೂ 10,000/- ರೂ ಮೌಲ್ಯದ ಒಂದು ಮೊಬೈಲ್ ಪೋನ್ ಸೇರಿ 2,00,000/- ರೂ ಮೌಲ್ಯದ ಮಾಲನ್ನು ವಶ ಪಡಿಸಿಕೊಂಡಿರುತ್ತಾರೆ. ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.

Housebreaking case: Tunga Nagar police crack down on gang-rape 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close