ಶಿವಮೊಗ್ಗದಲ್ಲಿ ಮಳೆ, ಹಲವಡೆ ಅನಾಹುತಗಳು-Rain in Shivamogga, disasters in many places

SUDDILIVE || SHIVAMOGGA

ಶಿವಮೊಗ್ಗದಲ್ಲಿ ಮಳೆ, ಹಲವಡೆ ಅನಾಹುತಗಳು-Rain in Shivamogga, disasters in many places 

ಸಂಜೆ ವೇಳೆಗೆ ಶಿವಮೊಗ್ಗದಲ್ಲಿ ಮಳೆ ಆಗಿದೆ. ಇದರಿಂದ ತಾಪಮಾನ ಇಳಿಕೆಯಾಗಿದ್ದು ವಾತಾವರಣ ತುಸು ತಂಪಾಗಿಸಿದರೂ ಮಳೆಯ ಅನಾಹುತಗಳು ಮುಂದುವರೆದಿದೆ.

ಕಳೆದ ಕೆಲವು ದಿನದಿಂದ ಶಿವಮೊಗ್ಗದಲ್ಲಿ ತಾಪಮಾನ ಹೆಚ್ಚಾಗಿತ್ತು. ಬಿಸಿಲಿನ ಝಳಕ್ಕೆ ಜನರು ಮನೆಯಿಂದ ಹೊರಗೆ ಬಾರಲಾಗದ ಸ್ಥಿತಿ ಇತ್ತು. ಇನ್ನು, ಧಗೆಯಿಂದ ಮನೆ, ಕಚೇರಿಗಳ ಒಳಗು ಇರಲಾಗದಂತಾಗಿತ್ತು. ಭಾನುವಾರ ಸಂಜೆ ವೇಳೆಗೆ‌ ಶಿವಮೊಗ್ಗ ನಗರದಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಯಿತು. ಜೋರು ಗಾಳಿ ಸಹಿತ ಗುಡುಗು, ಮಿಂಚು ಇತ್ತು.

ಗಾಳಿ, ಮಳೆ ಆರಂಭವಾಗುತ್ತಿದ್ದಂತೆ ಶಿವಮೊಗ್ಗ ನಗರದ ವಿವಿಧೆಡೆ ವಿದ್ಯುತ್‌ ವ್ಯತ್ಯಯವಾಗಿದೆ. ಹಲವೆಡೆ ಮರದ ರೆಂಬೆಗಳು ತುಂಡಾಗಿ, ತೆಂಗಿನ ಮರಗಳ ಗರಿ ಬಿದ್ದು ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಿದೆ.

ಸಂಜೆ ಸುರಿದ ಗಾಳಿ, ಮಳೆಗೆ ಕಾರಿನ ಮೇಲೆ ತೆಂಗಿನಮರ ಬಿದ್ದು ಜಖಂ ಆಗಿದೆ. ಶಿವಮೊಗ್ಗದ ಹೊರಭಾಗದಲ್ಲಿರುವ ಸೋಗಾನೆಯ ಹೊಸೂರು ಭೋಜಪ್ಪನ ಕ್ಯಾಂಪ್ ನಲ್ಲಿ ಘಟನೆ ನಡೆದಿದೆ.

ನಾಲ್ಕು ವಿದ್ಯುತ್ ಕಂಬಗಳು ಬಿದ್ದು ಅವಾಂತರ ಸೃಷ್ಟಿಯಾಗಿವೆ. ವಿದ್ಯುತ್ ಇಲ್ಲದೆ  ಗ್ರಾಮಸ್ಥರು ಒರದಾಡುವಂತಾಗಿತ್ತು. ಸ್ಥಳಕ್ಕೆ ಮೆಸ್ಕಾಂ ಸಿಬ್ಬಂದಿ ದೌಡಾಯಿಸಿದ್ದಾರೆ. ಮರ ಬಿದ್ದ ಹಿನ್ನೆಲೆಯಲ್ಲಿ ಕಾರಿಗೆ ಪರಿಹಾರ ನೀಡಲು ಗ್ರಾಮಸ್ಥರ ಮನವಿ ಮಾಡಿದ್ದಾರೆ.

Rain in Shivamogga, disasters in many places 


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close