SUDDILIVE || SHIVAMOGGA
ಮಂಗಳ ಮುಖಿಯ ಅಪಹರಣ ಪ್ರಕರಣ, ಆರೋಪಿ ಬಂಧನ-Mangala Mukhi abduction case, accused arrested
ಮಂಗಳಮುಖಿಯರೊಬ್ಬರನ್ನ ಅಪಹರಿಸಿ ಹಣಕಿತ್ತುಕೊಂಡಿದ್ದ ಪ್ರಕರಣವನ್ನ ವಿನೊಬ ನಗರದ ಪೊಲೀಸರ ತಂಡ ಬೇಧಿಸಿದ್ದಾರೆ. ಆರೋಪಿಯನ್ನ ಬಂಧಿಸಿ ಕೃತ್ಯಕ್ಕೆ ಬಳಸಿದ ವಸ್ತುಗಳನ್ನ ವಶಕ್ಕೆ ಪಡೆಯಲಾಗಿದೆ.
ದಿನಾಂಕ 24/04/2026 ರಂದು ರಾತ್ರಿ ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬೊಮ್ಮನಕಟ್ಟೆ ಚಾನಲ್ ಏರಿಯಾದ ಹತ್ತಿರ ಒಬ್ಬ ಮಂಗಳಮುಖಿಯನ್ನು ಯಾರೋ ಅಪರಿಚಿತರು ಆಟೋದಲ್ಲಿ ಕರೆದುಕೊಂಡು ಬಂದು 4,000/- ನಗದು, ಮೊಬೈಲ್, ಕೊರಳ ಚೈನ್ & ಬಂಗಾರದ ಉಂಗುರಗಳನ್ನು ಕಿತ್ತುಕೊಂಡು ಹೋಗಿದ್ದು, ಈ ಬಗ್ಗೆ ದಿನಾಂಕ 25/04/2026 ರಂದು ದೂರು ನೀಡಿದ ಮೇರೆಗೆ ಗುನ್ನೆ ಸಂಖ್ಯೆ: 82/2026 ಕಲಂ 309(4) ಬಿಎನ್ಎಸ್ ರೀತ್ಯಾ ಪ್ರಕರಣ ದಾಖಲಾಗಿರುತ್ತದೆ.
ಈ ಮೇಲ್ಕಂಡ ಪ್ರಕರಣದಲ್ಲಿ ಆರೋಪಿ ಹಾಗೂ ಮಾಲು ಪತ್ತೆ ಬಗ್ಗೆ ಶ್ರೀ ನಿಖಿಲ್ ಬಿ. ಐ.ಪಿ.ಎಸ್. ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ಶಿವಮೊಗ್ಗ , ಶ್ರೀ ಕಾರಿಯಪ್ಪ. ಎ.ಜಿ ಕೆ.ಎಸ್.ಪಿ.ಎಸ್ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-01 ಶಿವಮೊಗ್ಗ ಜಿಲ್ಲೆ ಶಿವಮೊಗ್ಗ, ಶ್ರೀ ಸಂಜೀವ್ ಕುಮಾರ್ ಟಿ ಡಿ.ವೈ.ಎಸ್.ಪಿ ಮಾನ್ಯ ಪೊಲೀಸ್ ಉಪಾಧೀಕ್ಷಕರು ಶಿವಮೊಗ್ಗ ಉಪ ವಿಭಾಗ-ಬಿ ಶಿವಮೊಗ್ಗ ರವರ ಮಾರ್ಗದರ್ಶನದಲ್ಲಿ, ಸುರೇಶ್ ಪೊಲೀಸ್ ನೀರಿಕ್ಷಕರು ವಿನೋಬನಗರ ಪೊಲೀಸ್ ಠಾಣೆ ( ಪ್ರಭಾರ ) ರವರ ಉಸ್ತುವಾರಿಯಲ್ಲಿ ಶ್ರೀ ತಿರುಮಲೇಶ್ ಜಿ ಪಿಎಸ್ಐ ಮತ್ತು ಸಿಬ್ಬಂದಿಗಳಾದ ಶ್ರೀ ರಾಜು ಕೆ ಆರ್ ಸಿಪಿಸಿ 1074, ಚಂದ್ರಾನಾಯ್ಕ ಬಿ ಸಿಪಿಸಿ 1122, ವಿಜಯಕುಮಾರ್ ಸಿಪಿಸಿ 1266, ಶ್ರೀ ಮನುಶಂಕರ ಸಿಪಿಸಿ 1556, ರವರ ಪಿ.ಐ
ಹಾಗೂ ಪಿಎಸ್ಐ ವಿನೋಬನಗರ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ, ಸಿಬ್ಬಂದಿಗಳ ತಂಡವನ್ನು ರಚಿಸಿದ್ದು, ಸದರಿ ತನಿಖಾ ತಂಡವು ಪ್ರಕರಣದ ಆರೋಪಿತನಾದ ದೇವರಾಜ, 27 ವರ್ಷ, ಹಳೆ ಮಂಡ್ಲಿ, ಶಿವಮೊಗ್ಗ ಈತನನ್ನು ಪ್ರಕರಣ ದಾಖಲಾಗಿ 12 ಗಂಟೆಯೊಳಗೆ ಬಂಧಿಸಿ, ಮೊಬೈಲ್ ಅದರ ಬೆಲೆ 20,000 ಮತ್ತು ಕೃತ್ಯಕ್ಕೆ ಬಳಸಿದ ಆಟೋ, 3 ಲಕ್ಷ ಹಾಗೂ 01 ಚಾಕು ಸೇರಿ ಒಟ್ಟು ಅಂದಾಜು ಮೌಲ್ಯ 3,20,000/- ರೂ ಮೌಲ್ಯದ ಮಾಲು ವಶಪಡಿಸಿಕೊಂಡಿರುತ್ತಾರೆ.
ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.
Mangala Mukhi abduction case, accused arrested
