SUDDILIVE || NAGARA
ಹುಲಿಕಲ್ ಘಾಟಿ-ಮಣ್ಣು ಕುಸಿದು ಮೂವರು ಕಾರ್ಮಿಕರು ಸಾವು ನಾಲ್ವರಿಗೆ ಗಾಯ- Hulikal Ghati: Three workers killed, four injured in landslide
ಕಾಮಗಾರಿ ವೇಳೆ ಮಣ್ಣು ಕುಸಿದು ಮೂವರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಹೊಸನಗರ ತಾಲೂಕು ಹುಲಿಕಲ್ ಘಾಟಿ ರಸ್ತೆ ಕಾಮಗಾರಿ ವೇಳೆ ಘಟನೆ ಸಂಭವಿಸಿದೆ. ನಾಲ್ವರು ಕಾರ್ಮಿಕರು ಗಾಯಗೊಂಡಿರುವ ಶಂಕೆ ಇದೆ.
ರಾಘವೇಂದ್ರ, ರಾಜು, ಮತ್ತು ಶಬ್ಬೀರ್ ಸಾವನ್ನಪ್ಪಿರುವ ದುರ್ದೈವಿಗಳು, ರಾಘವೇಂದ್ರ ನಗರದ ನಿವಾಸಿಯಾಗಿದ್ದಾರೆ. ರಾಜು ಮತ್ತು ಶಬ್ಬೀರ್ ಹಾವೇರಿ ಜಿಲ್ಲೆಯವರು ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನ ಆಸ್ಪತ್ರೆಗೆ ಸಾಗಿಸಲಾಗಿದೆ. ಗಾಯಗೊಂಡವರನ್ನ ಸುಮಂತ್ ಪರಮೇಶ್ ಅಶೋಕ್ ಮತ್ತು ಸಚಿನ್ ಎಂದು ತಿಳಿದು ಬಂದಿದೆ.
ಘಾಟಿಯ ಶ್ರೀ ಚಂಡಿಕಾಂಬ ದೇವಸ್ಥಾನದ ಬಳಿ ತಿರುವಿನಲ್ಲಿ ಘಟನೆಯಾಗಿದೆ. ಹೇರ್‌ಪಿನ್ ತಿರುವಿನಲ್ಲಿ ಮಣ್ಣು ಕುಸಿಯುತಿತ್ತು. ಈ ಹಿನ್ನೆಲೆ ರಸ್ತೆ ರಿಪೇರಿ ಕಾಮಗಾರಿ ನಡೆಸಲಾಗುತಿತ್ತು. ಇಂದು ಸಂಜೆ ಕಾರ್ಮಿಕರ ಮೇಲೆ ಮಣ್ಣು ಜಾರಿದೆ. ಮಣ್ಣಿನ ಅಡಿ ಸಿಲುಕಿ ಮೂವರು ಕಾರ್ಮಿಕರು ಮೃತಪಟ್ಟಿರುವ ಕುರಿತು ಪೊಲೀಸ್ ಮೂಲಗಳು ಖಚಿತಪಡಿಸಿವೆ. ಮಣ್ಣಿನ ಅಡಿ ಸಿಲುಕಿರುವ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ನಗರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.
Hulikal Ghati: Three workers killed, four injured in landslide
