ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ-ಜಿಲ್ಲೆಯಲ್ಲಿ 87.62% ಮಕ್ಕಳು ತೇರ್ಗಡೆ-Second PUC exam results - 87.62% students pass in the district

 SUDDILIVE || SHIVAMOGGA

ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ-ಜಿಲ್ಲೆಯಲ್ಲಿ 87.62% ಮಕ್ಕಳು ತೇರ್ಗಡೆ-Second PUC exam results - 87.62% students pass in the district  

Puc, result

ದ್ವಿತೀಯ ಪಿಯುಸಿ ಫಲಿತಾಂಶ ಹೊರಬಿದ್ದಿದೆ. ಶಿವಮೊಗ್ಗ ಜಿಲ್ಲೆಯಲ್ಲಿ 87.62% ಮಕ್ಕಳು ತೇರ್ಗಡೆಯಾಗಿದ್ದಾರೆ. ಕಳೆದ ಬಾರಿ 79.81% ದ್ವಿತೀಯ ಪಿಯುಸಿ ಮಕ್ಕಳು ತೇರ್ಗಡೆಯಾಗಿದ್ದಾರೆ. 

ಕಳೆದ ಬಾರಿ ಈ ಬಾರಿ 17,532 ಮಕ್ಕಳು ಈ ಬಾರಿ ಜಿಲ್ಲೆಯಲ್ಲಿ ಮಕ್ಕಳು ಪರೀಕ್ಷೆ ಬರೆದಿದ್ದು 15361 ಮಕ್ಕಳು  ತೇರ್ಗಡೆಯಾಗಿದ್ದಾರೆ. ಕಲಾ ವಿಭಾಗದಲ್ಲಿ 3637 ಜನ ಪರೀಕ್ಷೆ ಬರೆದಿದ್ದು ಇದರಲ್ಲಿ 2701 ಮಕ್ಕಳು ಪಾಸ್ ಆಗಿದ್ದಾರೆ ಇದರಲ್ಲಿ 74% ಮಕ್ಕಳು ತೇರ್ಗಡೆಯಾಗಿದ್ದಾರೆ. 

ಅರ್ಥಶಾಸ್ತ್ರದಲ್ಲಿ 5855 ಜನ ಮಕ್ಕಳು ಪರೀಕ್ಷೆ ಬರೆದಿದ್ದು ಇದರಲ್ಲಿ 5139 ಮಕ್ಕಳು ತೇರ್ಗಡೆಯಾಗಿದ್ದಾರೆ. 87.62% ರಷ್ಟು ಮಕ್ಕಳ ತೇರ್ಗಡೆ ಶೇಕಡವಾರು ದೊರೆತಿದೆ. ವಿಜ್ಞಾನದಲ್ಲಿ 8030 ಜನ ಮಕ್ಕಳು ಪರೀಕ್ಷೆ ಬರೆದಿದ್ದಾರೆ. 7521 ಮಕ್ಕಳು ತೇರ್ಗಡೆಯಾಗಿದResu 93.66% ಮಕ್ಕಳು ತೇರ್ಗಡೆಯಾಗಿದ್ದಾರೆ.  ವಿಜ್ಞಾನದಲ್ಲಿ 596 ಜನ ತೆಗೆದ ಮಕ್ಕಳು ಪ್ರಥಮಸ್ಥಾನ ಹಂಚಿಕೊಂಡಿದ್ದಾರೆ. 

ದ್ವಿತೀಯ ಪಿಯುಸಿ ಫಲಿತಾಂಶ ಮಧ್ಯಾಹ್ನವೆ ಆನ್‌ಲೈನ್‌ ಮೂಲಕ ವಿದ್ಯಾರ್ಥಿಗಳಿಗೆ ಫಲಿತಾಂಶ ಲಭ್ಯವಾಗಿದೆ. ಲಭ್ಯ ಮಾಹಿತಿ ಪ್ರಕಾರ ಶಿವಮೊಗ್ಗದ ಪೇಸ್‌ ಪಿ.ಯು. ಕಾಲೇಜು ವಿದ್ಯಾರ್ಥಿನಿ ಮಹೀನ್‌ ಖಾನಮ್‌ ಅಫ್ರಿದಿ 600 ಅಂಕಗಳಿಗೆ 596 ಅಂಕ ಗಳಿಸಿದ್ದಾರೆ.

ಮಹೀನ್‌ ಖಾನಮ್‌ ಅಫ್ರಿದಿ ಅವರು ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದಿದ್ದಾರೆ ಎಂದು ಪೇಸ್ ಕಾಲೇಜಿನ ಪ್ರಕಟಣೆಯಲ್ಲಿ  ತಿಳಿಸಲಾಗಿದೆ. ಇನ್ನು, ಮಹೀನ್‌ ಖಾನಮ್‌ ಅವರ ಮನೆಯಲ್ಲಿ ಸಂಭ್ರಮಾಚರಣೆ ನಡೆಯಿತು. ಪೋಷಕರು, ಸಂಬಂಧಿಕರು, ಸ್ನೇಹಿತರು ಮಹೀನ್‌ ಖಾನಮ್‌ ಅವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಕಾಸ ವಿದ್ಯಾ ಸಂಸ್ಥೆಯ ರಂಜಿತಾ.ಜಿ ಅವರು ವಾಣಿಜ್ಯ ವಿಭಾಗದಲ್ಲಿ 596 ಅಂಕ ಪಡೆದು ರಾಜ್ಯಕ್ಕೆ 4ನೇ ಸ್ಥಾನ ಪಡೆದಿದ್ದಾರೆ. ಹೊಸನಗರ ತಾಲೂಕಿನ ಯಡೂರಿನ ಶ್ರೀನಿಹಾಲ್ 596 ಅಂಕ ಪಡೆದಿದ್ದಾರೆ. ಸಧ್ಯಕ್ಕೆ ಇಷ್ಟು ಮಾಹಿತಿ ಲಭ್ಯವಾಗಿದೆ. 

Second PUC exam results - 87.62% students pass in the district 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close