SUDDILIVE || SHIVAMOGGA
ರಾಮನವಮಿ ಮತ್ತು ಹನುಮಾನ್ ಜಯಂತಿ ಪ್ರಯುಕ್ತ ಬೃಹತ್ ಶೋಭಾಯಾತ್ರೆ- Huge procession on the occasion of Ram Navami and Hanuman Jayanti
ಶ್ರೀ ರಾಮ ನವಮಿ & ಹನುಮಾನ್ ಜಯಂತಿಯ ಪ್ರಯುಕ್ತ ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳದ ವತಿಯಿಂದ ಏ.07 ರಂದು ಸಂಜೆ 4 ಗಂಟೆಗೆ "ಬೃಹತ್ ಶೋಭಾ ಯಾತ್ರೆ" ಹಮ್ಮಿಕೊಳ್ಳಲಾಗಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಬಜರಂಗದಳದ ಜಿಲ್ಲ ಸಹಸಂಚಾಲಕ ಸುರೇಶ್ ಬಾಬು, ಶೋಭಾ ಯಾತ್ರೆ ಕಾರ್ಯಕ್ರಮವು ಗೋಪಿ ವೃತ್ತದಿಂದ ಆರಂಭಗೊಂಡು, ಜೈಲು ನರ್ಕಲ್, ಶಿವಮೂರ್ತಿ ವೃತ್ತ ಮಾರ್ಗವಾಗಿ, ಅಕ್ಕಮಹಾದೇವಿ ವೃತ್ತದಲ್ಲಿ (ಉಷಾ ನರ್ಸಿಂಗ್ 'ಹೋಮ್ ವೃತ್ತ) ಸಮಾಪ್ತಿಗೊಳ್ಳಲಿದೆ ಎಂದರು
ಶೋಭಾ ಯಾತ್ರೆಯಲ್ಲಿ ವಿಶೇಷವಾಗಿ ಮಂಗಳೂರಿನ ಭಜನಾ ತಂಡದಿಂದ ನೃತ್ಯ ಸಂಕೀರ್ತನ ಯಾತ್ರೆ ಶಿವಮೊಗ್ಗದ ವಿವಿಧ ಭಜನಾ ಮಂಡಳಿಯ ಮಾತೆಯರಿಂದ ಮಾರ್ಗದುದ್ದಕ್ಕೂ ಭಜನಾ ಕಾರ್ಯಕ್ರಮ. 20-30 ಆಟೋ ಗಳಲ್ಲಿ ದೇವರ ಫೋಟೋ ದೊಂದಿಗೆ ಶೋಭಾ ಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ ಎಂದರು.
ಹಿಂದುಗಳ ಆರಾಧ್ಯ ದೇವರಾದ ಪ್ರಭು ಶ್ರೀ ರಾಮಚಂದ್ರ ಅಂಜನೇಯ, ಭಾರತ್ ಮಾತೆ, ಶಿವಾಜಿ, ವಿಗ್ರಹಗಳೊಂದಿಗೆ ಮೆರವಣಿಗೆ ಇರುತ್ತದೆ. ಮಕ್ಕಳಿಗೆ ಶಬರಿ, ಸೀತಾಮಾತೆ ಶ್ರೀರಾಮಚಂದ್ರ ಹನುಮಂತ ಹೀಗೆ ಹಲವು ದೇವರ ವೇಷ ಭೂಷಣ ಸ್ಪರ್ಧೆಯನ್ನು ಸಹ ಹಮ್ಮಿಕೊಳ್ಳಲಾಗಿದೆ.
ಹಿಂದೂ ಧರ್ಮದ ಗಣ್ಯರು, ವಿಶ್ವ ಹಿಂದೂ ಪರಿಷದ್ ಬಜರಂಗದಳದ ಕಾರ್ಯಕರ್ತರು, ಸಕಲ ಹಿಂದೂ ಧರ್ಮ ಅಭಿಮಾನಿಗಳು ಸಹ ಶೋಭಾ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ತದನಂತರ ಅಕ್ಕಮಹಾದೇವಿ ವೃತ್ತದಲ್ಲಿ (ಉಷಾ ನರ್ಸಿಂಗ್ ಹೋಮ್ ವೃತ್ತ) ವೇದಿಕೆ/ಉಪನ್ಯಾಸ ಕಾರ್ಯಕ್ರಮವಿರುತ್ತದೆ ಎಂದರು.

