SUDDILIVE || SHIVAMOGGA
ಏ.28 ಕ್ಕೆ ಉಚಿತ ಆರೋಗ್ಯ ಶಿಬಿರ-Free health camp on April 28
ಏಪ್ರಿಲ್ 28ರಂದು ನಗರದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ, ಕ್ಲಾರ್ಕ್ ಪೆಟ್ಟೆ, ಎನ್.ಟಿ. ರೋಡ್‌ನಲ್ಲಿ ನಡೆಯಲಿರುವ ಉಚಿತ ಆರೋಗ್ಯ ತಪಾಸಣಾ ಶಿಬಿರದ ಕುರಿತು ಇಂದು ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿ ನಡೆಸಲಾಯಿತು.
ಶಿವಮೊಗ್ಗ ಪೀಸ್ ಆರ್ಗನೈಸೇಷನ್ (ರಿ) ಮತ್ತು ಮಂಗಳೂರಿನ ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ಸಹಯೋಗದಲ್ಲಿ ಈ ಶಿಬಿರ ಆಯೋಜಿಸಲಾಗಿದ್ದು, ರೋಬೋಟಿಕ್ ತಂತ್ರಜ್ಞಾನ ಆಧಾರಿತ ಮಂಡಿ ಹಾಗೂ ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆ, ಬೆನ್ನುಮೂಳೆ ಸಮಸ್ಯೆಗಳು ಮತ್ತು ಕ್ರೀಡಾ ಗಾಯಗಳ ತಪಾಸಣೆ ಹಾಗೂ ತಜ್ಞರ ಸಲಹೆ ನೀಡಲಾಗುತ್ತದೆ ಎಂದು ತಿಳಿಸಲಾಯಿತು.
ಇದಲ್ಲದೆ, ಇದೇ ಸಂದರ್ಭದಲ್ಲಿ “ಯೆನ್ ಆರೋಗ್ಯ ಕಾರ್ಡ್” ನೋಂದಾವಣೆ ಶಿಬಿರವೂ ನಡೆಯಲಿದ್ದು, ಇದರ ಮೂಲಕ ವಿವಿಧ ಆರೋಗ್ಯ ಸೇವೆಗಳಿಗೆ ವಿಶೇಷ ರಿಯಾಯಿತಿಗಳು ಲಭ್ಯವಿರುತ್ತವೆ.
ಈ ಸಂದರ್ಭದಲ್ಲಿ ಆಸ್ಪತ್ರೆಯ ಮಾರ್ಕೆಟಿಂಗ್ ವಿಭಾಗದ ವಿಜಯಾನಂದ ಶೆಟ್ಟಿ, ಆಸ್ಪತ್ರೆಯ ಸಿಬ್ಬಂದಿಗಳಾದ ನಿಸಾರ್ ಮತ್ತು ಫೈಝನ್, ಶಿವಮೊಗ್ಗ ಪೀಸ್ ಆರ್ಗನೈಸೇಷನ್ ಅಧ್ಯಕ್ಷ ರಿಯಾಜ್ ಅಹಮದ್, ಶಫೀಕ್ ಅಹಮದ್, ಆಪ್ಟಿಕಲ್ ಇಮ್ರಾನ್, ಅನೀಶ್ ಹಾಗೂ ಇಕ್ಬಾಲ್ ಉಪಸ್ಥಿತರಿದ್ದರು.
ಶಿವಮೊಗ್ಗ ಹಾಗೂ ಸುತ್ತಮುತ್ತಲಿನ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದಾರೆ.
Free health camp on April 28
