ಹಾವು ಮುಂಗುಸಿಯಂತಿದ್ದ ನಾಯಕರು ಕ್ಷೇತ್ರಕ್ಕಾಗಿ ಒಂದೇ ವೇದಿಕೆಯಲ್ಲಿ ಕುಳಿತು ಹೋರಾಟ-ಹೊಸನಗರ ವಿಧಾನ ಸಭೆ ಕ್ಷೇತ್ರ ರಚನೆಗೆ ಬೃಹತ್ ಪ್ರತಿಭಟನೆ-Massive protest against formation of Hosanagara assembly constituency

 SUDDILIVE || HOSANAGARA

ಹಾವು ಮುಂಗುಸಿಯಂತಿದ್ದ ನಾಯಕರು ಕ್ಷೇತ್ರಕ್ಕಾಗಿ ಒಂದೇ ವೇದಿಕೆಯಲ್ಲಿ ಕುಳಿತು ಹೋರಾಟ-ಹೊಸನಗರ ವಿಧಾನ ಸಭೆ ಕ್ಷೇತ್ರ ರಚನೆಗೆ ಬೃಹತ್ ಪ್ರತಿಭಟನೆ-Massive protest against formation of Hosanagara assembly constituency

Hosanagara, assembly

ಹಾವು ಮುಂಗುಸಿಯಂತೆ ಕಚ್ಚಾಡುತ್ತಿದ್ದ ರಾಜಕೀಯ ನಾಯಕರುಗಳೆಲ್ಲಾ ಒಂದೇ ವೇದಿಕೆ ಏರಿ ವಿಧಾನ ಸಭಾ ಕ್ಷೇತ್ರಕ್ಕೆ ಆಗ್ರಹಿಸಿದ್ದಾರೆ. ಚುನಾವಣೆ ಮತ್ತಿತರೆ ವಿಷಯಗಳಲ್ಲಿ ಹಾವು ಮುಂಗುಸಿಯಂತೆ ಕಾದಾಡುವ ರಾಜಕೀಯ ನಾಯಕರು ಹೊಸನಗರ ವಿಧಾನ ಸಭಾ ಕ್ಷೇತ್ರ ರಚಿಸುವಂತೆ ಆಗ್ರಹಿಸಿದ್ದಾರೆ. 

ಹೊಸನಗರ ತಾಲೂಕಿಗೆ ವಿಧಾನಸಭಾ ಕ್ಷೇತ್ರದ ಸ್ಥಾನಮಾನ ನೀಡುವಂತೆ ಆಗ್ರಹಿಸಿ ನಗರ ಹೋಬಳಿಯಿಂದ ರಿಪ್ಪನ್ ಪೇಟೆಯ ವರೆಗೆ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಹೊಸನಗರಕ್ಕೆ ಸ್ವತಂತ್ರ ವಿಧಾನಸಭಾ ಕ್ಷೇತ್ರದ ಸ್ಥಾನಮಾನವನ್ನು ಮತ್ತೆ ನೀಡಬೇಕು ಎಂಬ  ಬೇಡಿಕೆ ಮತ್ತೆ ಮುನ್ನಲೆಗೆ ಬಂದಿದೆ. ಇದರ ಅಂಗವಾಗಿ ಭಾನುವಾರ ಆಯೋಜಿಸಲಾಗಿದ್ದ ಐತಿಹಾಸಿಕ ಪಾದಯಾತ್ರೆಗೆ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿರುವ "ನಗರ ಹೋಬಳಿ"  ಸಾಕ್ಷಿಯಾಗಿದೆ. 

ಹೊಸನಗರ ವಿಧಾನಸಭಾ ಕ್ಷೇತ್ರದ ಮರು ಸ್ಥಾಪನೆ ಹೋರಾಟ ಸಮಿತಿ ವತಿಯಿಂದ ಹೊಸನಗರ ತಾಲೂಕಿನ ನಗರದಿಂದ ರಿಪ್ಪನ್ ಪೇಟೆಯವರೆಗೆ ಪಾದಯಾತ್ರೆ ಆಯೋಜಿಸಿದ್ದು,ಸಹಸ್ರಾರು ಸಂಖ್ಯೆಯಲ್ಲಿ ಜನರು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು.

ನಗರದ ಚಿಕ್ಕಪೇಟೆಯಲ್ಲಿರುವ ಶ್ರೀ ಮಹಾ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ,ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಹೊಸನಗರದ ಮೂಲಗದ್ದೆ ಮಠದ ಅಭಿನವ ಶ್ರೀ ಚನ್ನಬಸವ ಸ್ವಾಮೀಜಿಗಳ ನೇತೃತ್ವದಲ್ಲಿ ನಿಟ್ಟೂರು  ಮಠದ ಶ್ರೀ ರೇಣುಕಾನಂದ ಸ್ವಾಮೀಜಿ,ಮಾಜಿ ಶಾಸಕರಾದ ಬಿ ಸ್ವಾಮಿರಾವ್,ಜಿ.ಪಂ ಮಾಜಿ ಅಧ್ಯಕ್ಷರು,ಕಾಂಗ್ರೆಸ್ ಮುಖಂಡರಾದ ಕಲಗೋಡು ರತ್ನಾಕರ್, ಶಾಸಕರುಗಳಾದ ಬೇಳೂರು ಗೋಪಾಲಕೃಷ್ಣ, ಆರಗ ಜ್ಞಾನೇಂದ್ರ,ಮಾಜಿ ಸಚಿವ ಹರತಾಳು ಹಾಲಪ್ಪ,ಕಿಮ್ಮನೆ ರತ್ನಾಕರ್ ,ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ ಮಂಜುನಾಥ್ ಗೌಡ,ಶಿಮುಲ್ ಅಧ್ಯಕ್ಷ ವಿದ್ಯಾಧರ್ ಸೇರಿದಂತೆ ಹಲವಾರು ಮುಖಂಡರು ಪಕ್ಷಬೇದ ಮರೆತು ಉರಿ ಬಿಸಿನಲ್ಲಿ ಹೆಜ್ಜೆ ಹಾಕಿದರು.

ಪಾದಯಾತ್ರೆ ಉದ್ದಕ್ಕೂ 'ನಮಗೆ ಬೇಕೇ ಬೇಕು...ಹೊಸನಗರ ವಿಧಾನ ಸಭಾ ಕ್ಷೇತ್ರ ಬೇಕು" ಎಂಬ ಘೋಷಣೆಯನ್ನು ಕೂಗಿದರು. 5 ಜಲಾಶಯಗಳ ನಿರ್ಮಾಣದಿಂದ ಭೌಗೋಳಿಕವಾಗಿ ತನ್ನ ಅಸ್ತಿತ್ವವನ್ನೆ ಕಳೆದುಕೊಳ್ಳುತ್ತಾ ಬಂದಿದೆ. ಹೀಗಾಗಿ ಅಭಿವೃದ್ಧಿಗೆ ಕ್ಷೇತ್ರ ಬೇಕು, ಪ್ರಶ್ನಿಸಲು ಕ್ಷೇತ್ರ ಬೇಕು, ವಿಧಾನಸಭೆಯಲ್ಲಿ ಧ್ವನಿ ಎತ್ತಲು ಕ್ಷೇತ್ರ ಬೇಕು. ನಮ್ಮ ಅಸ್ತಿತ್ವಕ್ಕಾಗಿ ಆದರೂ ಕ್ಷೇತ್ರ ಬೇಕು ಎಂದು ಜಾತಿ-ಮತ-ಧರ್ಮ-ಪಕ್ಷಗಳನ್ನು ಮರೆತು  ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು.

ಪಾನೀಯ ವ್ಯವಸ್ಥೆ:

ಪಾದಯಾತ್ರೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜನರು ಭಾಗಿಯಾಗಿದ್ದರು.ಪಾದಯಾತ್ರೆಯಲ್ಲಿ ಭಾಗಿಯಾದವರಿಗೆ ಬೆಳಿಗ್ಗೆ ತಿಂಡಿಯ ಜೊತೆ  ಪಾನೀಯ ವ್ಯವಸ್ಥೆಯನ್ನು ಹೋರಾಟ ಸಮಿತಿಯವರು ಆಯೋಜಿಸಿದ್ದರು.ರಸ್ತೆ ಮಧ್ಯಕ್ಕೆ ಐಸ್ ಕ್ರೀಂ ವಿತರಣೆಯನ್ನು ಮಾಡಲಾಯಿತು.

ಪಾದಯಾತ್ರೆಗೆ "ಯುವಬಲ':

ಹೊಸನಗರ ತಾಲೂಕಿಗೆ ಪ್ರತ್ಯೇಕ ವಿಧಾನಸಭಾ ಕ್ಷೇತ್ರ ಬೇಕು ಎಂಬ ಕೂಗಿಗೆ ಯುವಕ-ಯುವತಿಯರು ಸಾಥ್ ನೀಡಿದರು.ಸಾಕಷ್ಟು ಸಂಖ್ಯೆಯಲ್ಲಿ ಯುವಕ ಯುವತಿಯರು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು. ಅಲ್ಲದೇ ವಿವಿಧ ಸಂಘ ಸಂಸ್ಥೆಗಳು,ನಿವೃತ್ತ ಯೋಧರು ಪಾದಯಾತ್ರೆಯಲ್ಲಿ ಭಾಗಿಯಾಗಿ ಹೋರಾಟಕ್ಕೆ ಬಲ ತುಂಬಿದರು.

ಪಾದಯಾತ್ರೆಯಲ್ಲಿ ಭಾಗಿಯಾಗದವರ ಆರೋಗ್ಯದಲ್ಲಿ ಏರುಪೇರಾಗುವ  ಸಾಧ್ಯತೆ ಇರುವುದರಿಂದ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗಿತ್ತು.ಅಲ್ಲದೇ ಪಾದಯಾತ್ರೆಯಿಂದ ವಾಹನ ಸವಾರರಿಗೆ ಯಾವುದೇ ತೊಂದರೆಯಾಗದಂತೆ ಪೊಲೀಸರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರು.

ಭಾನುವಾರ ಆರಂಭವಾದ ಪಾದಯಾತ್ರೆ ಹೊಸನಗರ ತಲುಪಿ ರಾತ್ರಿ ಅಲ್ಲೇ ವಾಸ್ತವ್ಯ ಹೂಡಲಿದೆ.ಏ 6ರಂದು ಬೆಳಿಗ್ಗೆ ಪಾದಯಾತ್ರೆ ಪುನಃ ಪ್ರಾರಂಭವಾಗಿ ಅದೇ ದಿನ ಸಂಜೆ ರಿಪ್ಪನ್‌ಪೇಟೆ ತಲುಪಲಿದೆ.ಅಂದು4 ಗಂಟೆಗೆ ರಿಪ್ಪನ್‌ಪೇಟೆ ಹೈಸ್ಕೂಲ್ ಆವರಣದಲ್ಲಿ ಬೃಹತ್ ಸಾರ್ವಜನಿಕ ಸಭೆ ನಡೆಯಲಿದೆ.

---------------------------------------------------

ಮುಳುಗಡೆ ಸಂತ್ರಸ್ತರ ತಾಲ್ಲೂಕಾಗಿರುವ ಹೊಸನಗರಕ್ಕೆ ವಿಧಾನಸಭಾ ಕ್ಷೇತ್ರ ಮಾನ್ಯತೆ ಅಗತ್ಯವಾಗಿ ಬೇಕಾಗಿದೆ.ಹೊಸನಗರ ತಾಲೂಕು ಬಹು ವಿಸ್ತಾರವಾಗಿದೆ.ಹೀಗಾಗಿ ಕ್ಷೇತ್ರದಲ್ಲಿ ಅಭಿವೃದ್ಧಿಯಲ್ಲಿ ಕುಂಠಿತಗೊಂಡಿದೆ.ಹಾಗಾಗಿ ಕ್ಷೇತ್ರದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಹೊಸನಗರ ತಾಲೂಕಿಗೆ ವಿಧಾನ ಸಭಾ ಸ್ಥಾಮಮಾನ‌ ನೀಡಬೇಕು.

-ಶ್ರೀ ರೇಣುಕಾನಂದ ಸ್ವಾಮಿ,ಗರ್ತಿಕೆರೆ ಮಠ.

-------------------------------------------------------

ಮುಳುಗಡೆ ಕೂಪದಲ್ಲಿ‌ ನಲುಗುತ್ತಿರುವ ಹೊಸನಗರಕ್ಕೆ ಹೊಸ ಬೆಳಕು ಚೆಲ್ಲಬೇಕಾಗಿದೆ.ಈ ಐತಿಹಾಸಿಕ ಪಾದಯಾತ್ರೆಗೆ ಜಾತಿ ಮತ, ಪಂಥ, ಧರ್ಮ, ರಾಜಕಾರಣ ಮೀರಿ ಎಲ್ಲರೂ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.ನಮ್ಮ ಹೋರಾಟಕ್ಕೆ ಜಯ ಸಿಗುವವರೆಗೂ ಈ ಹೋರಾಟ ನಿಲ್ಲಬಾರದು.

-ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ,ಮೂಲಗದ್ದೆ ಮಠ

------------------------------------------------------

Massive protest against formation of Hosanagara assembly constituency

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close