SUDDILIVE || SHIVAMOGGA
ರಾಜ್ಯ ಕಾರ್ಯಕಾರಿ ಸಮಿತಿ ನಿರ್ದೇಶಕರಾಗಿ ಎನ್. ರವಿಕುಮಾರ್ ನೇಮಕ-N. Ravikumar appointed as State Executive Committee Director
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ನಿರ್ದೇಶಕರಾಗಿ ಹಿರಿಯ ಪತ್ರಕರ್ತ, ಶಿವಮೊಗ್ಗ ಟೆಲೆಕ್ಸ್ ಪತ್ರಿಕೆ ಸಂಪಾದಕರಾದ ಎನ್.ರವಿಕುಮಾರ್ ನೇಮಕ ಗೊಂಡಿದ್ದಾರೆ.
ಏ. 12ರಂದು ಬೀದರ್ ನ 40ನೇ ರಾಜ್ಯ ಸಮ್ಮೇಳನದ ಸಂದರ್ಭದಲ್ಲಿ ನಡೆದ ಕಾರ್ಯಕಾರಿ, ನಂತರ ನಡೆದ ಸರ್ವಸದಸ್ಯರ ಸಭೆಯಲ್ಲಿ ಈ ವಿಷಯವನ್ನು ಸಂಘದ ರಾಜ್ಯ ಅಧ್ಯಕ್ಷರಾದ ಶಿವಾನಂದ ತಗಡೂರ್ ಘೋಷಿಸಿದ್ದಾರೆ.
ರವಿಕುಮಾರ್ ರವರು ಜಿಲ್ಲಾ ಶಾಖೆಯ ಪ್ರಧಾನ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇತ್ತಿಚೆಗೆ ಸಂಘದ ರಾಜ್ಯ ಚುನಾವಣಾಧಿಕಾರಿಯಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿ ಗಮನ ಸೆಳೆದಿದ್ದಾರೆ..
ಅಭಿನಂದನೆ
ನೂತನವಾಗಿ ರಾಜ್ಯಸಮಿತಿ ಸದಸ್ಯಯರಾಗಿ ನೇಮಕ ಗೊಂಡ ಎನ್. ರವಿಕುಮಾರ್ ರವರನ್ನು, ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ಜಿಲ್ಲಾ ಶಾಖೆ ಅಧ್ಯಕ್ಷ ವೈದ್ಯನಾಥ್, ರಾಜ್ಯ ಸಮಿತಿ ನಿರ್ದೇಶಕ ಕೆ. ವಿ. ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಆರ್. ಎಸ್. ಹಾಲಸ್ವಾಮಿ, ಕಾರ್ಯಕಾರಿ ಪದಾಧಿಕಾರಿಗಳು, ಸಮಿತಿ ಸದಸ್ಯರು, ಅಭಿನಂದಿಸಿದ್ದಾರೆ..
ಸನ್ಮಾನ
ಏಪ್ರಿಲ್ 12 ರಂದು ಬೀದರ್ ನಲ್ಲಿ ನಡೆದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 40 ನೇ ರಾಜ್ಯ ಸಮ್ಮೇಳನದಲ್ಲಿ ಸಂಘದ ರಾಜ್ಯ ಅಧ್ಯಕ್ಷರಾದ ಶಿವಾನಂದ ತಗಡೂರು ,ಉಪಾಧ್ಯಕ್ಷರಾದ ಹೆಚ್ ಬಿ ಮದನಗೌಡ, ಬೀದರ್ ಜಿಲ್ಲಾಧ್ಯಕ್ಷ ಆನಂದ ದೇವಪ್ಪ , ಪತ್ರಕರ್ತ ಅಪ್ಪರಾವ್ ಸೌದಿ ಅವರು ನೂತನ ನಿರ್ದೇಶಕರಾಗಿ ನೇಮಕಗೊಂಡ ಎನ್.ರವಿಕುಮಾರ್ ಅವರನ್ನು ಸನ್ಮಾನಿಸಿದರು.
N. Ravikumar appointed as State Executive Committee Director
