ಪೌರಕಾರ್ಮಿಕರಿಗೆ ವಿಮೆ ನೀಡಲು ಪ್ರೇರಣೆಯೇ ರಾಹುಲ್ ಗಾಂಧಿ-ಅಶೋಕ್ ಸಾಲಪ್ಪ- Rahul Gandhi-Ashok Salappa inspires to provide insurance to civil servants

 SUDDILIVE || SHIVAMOGGA

ಪೌರಕಾರ್ಮಿಕರಿಗೆ ವಿಮೆ ನೀಡಲು ಪ್ರೇರಣೆಯೇ ರಾಹುಲ್ ಗಾಂಧಿ-ಅಶೋಕ್ ಸಾಲಪ್ಪ- Rahul Gandhi-Ashok Salappa inspires to provide insurance to civil servants  

Rahul, Gandhi


ರಾಜ್ಯ ಸಫಾಯಿ ಕರ್ಮಚಾರಿ ಅಭಿವೃಧ್ಧಿ ನಿಗಮ ಮತ್ತು ಮಹಾನಗರ ಪಾಲಿಕೆ ಇವರ ಸಂಯುಕ್ತ ಆಶ್ರಯದಲ್ಲಿ ಮುರುಳಿ ಅಶೋಕ ಸಾಲಪ್ಪ ಇವರ ನೇತೃತ್ವದಲ್ಲಿ ನೇರ ಪಾವತಿ ಪೌರಕಾರ್ಮಿಕರಿಗೆ ಆರೋಗ್ಯ ತಪಾಸಣೆ ಶಿಬಿರ, ಆರೋಗ್ಯ ಕಾರ್ಡ್ ವಿತರಣೆ ಮತ್ತು ಅರಿವು ಮೂಡಿಸುವ ಕಾರ್ಯಕ್ರಮ ಪಾಲಿಕೆಯಲ್ಲಿ ನಡೆದಿದೆ. 

ಡಿಜಿಟಲ್ ಇಂಡಿಯಾ ವಿಮಾ ಸಂಸ್ಥೆಯ ಕೃಷ್ಣಮೂರ್ತಿ ಮಾತನಾಡಿ, ಪೌರಕಾರ್ಮಿಕರಿಗೆ ಐದು ಲಕ್ಷ ರೂ. ವಿಮೆಯನ್ನ ನೀಡಲಾಗಿದೆ. ಶ್ವಾಸಕೋಶ, ಹಾರ್ಟ್ ನಲ್ಲಿ ತೊಂದರೆ ಯಾವುದೇ 3000 ಕಾಯಿಲೆಗೆ ಒಳರೋಗಿಗೆ ಈ ಯೋಜನೆ ನೀಡಲಾಗುತ್ತಿದೆ.  ಒಪಿಡಿಗೆ ಈ ವಿಮೆ ಇರೊಲ್ಲ. ತೊಂದರೆ ಇಲ್ಲದಂತೆ ಯಾವ ಆಸ್ಪತ್ರೆಗೂ ಹೋಗಬಹುದಾಗಿದೆ ಪೌರಕಾರ್ಮಿಕರಿಗೆ ದೇಶದಲ್ಲಿಯೇ ಮೊದಲ ಬಾರಿಗೆ ವಿಮೆ ಮಾಡಿಸಲಾಗಿದೆ ಎಂದರು. 

ಕ್ಯೂಆರ್ ಕೋಡ್ ಮೂಲಕ ಸ್ಕ್ಯಾನ್ ಮಾಡಿಕೊಢು ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಆಕ್ಸಿಡೆಂಟಲ್ ಇನ್ಸೂರೆನ್ಸೂ ಇರುತ್ತದೆ. ಈ ವೇಳೆ ಮೂವರು ಸಫಾಯಿ ಕರ್ಮಚಾರಿ ಮಕ್ಕಳಿಗೆ ಲ್ಯಾಪ್ ಟ್ಯಾಪ್ ವಿತರಿಸಲಾಯಿತು. 

ನಂತರ ಮಾತನಾಡಿದ ನಿಗಮದ ಅಧ್ಯಕ್ಷ ಮುರುಳಿ ಅಶೋಕ್ ಸಾಲಪ್ಪ, ಪೌರಕಾರ್ಮಿಕರಿಗೆ ವಿಮೆ ನೀಡಲು ಪ್ರೇರಣೆ ರಾಹುಲ್ ಗಾಂಧಿ ಅವರು, ಲೋಕಸಭಾ ಚುನಾವಣೆಯ ವೇಳೆ ನಡೆದ ಸಭೆಯೊಂದರಲ್ಲಿ ಭಾಗವಹಿಸಬೇಕಿದ್ದ ರಾಹುಲ್ ಗಾಂಧಿ ಅವರಿಗೆ ಪೌರಕಾರ್ಮಿಕರಿಗೆ ಮಾಹಿತಿ ನೀಡಲು ಹೋದಾಗ ವಿಮೆ ನೀಡಬೇಕೆಂದು ಮನವಿ ಮಾಡಿದ್ದೆ. ಈಗ ಆಗಿದೆ ಎಂದರು.

ಪೌರಕಾರ್ಮಿಕರ ಕೆಲಸ ಖಾಯಂಗೊಳಿಸುವ ಬಗ್ಗೆನೂ ಹೋರಾಟ ನಡೆಸಿದೆ. ಗುತ್ತಿಗೆ ಪದ್ದತಿ ಪೌರಕಾರ್ಮಿಕರನ್ನ ಹೆಡೆಮುರಿಕಟ್ಟಿದೆ. ಹಾಗಾಗಿ ಲೋಕಸಭಾ ಚುನಾವಣೆ ವೇಳೆ ರಾಹುಲ್ ಗಾಂಧಿಗೆ ಹೇಳಿದಾಗ ಕಳೆದ ಮಾರ್ಚ್ ನಲ್ಲಿ 20 ಸಾವಿರ ಕಾರ್ಮಿಕರನ್ನ ಖಾಯಂಗೊಳಿಸಲಾಗಿದೆ. ರಿಸ್ಕ್ ಅಲೋಯನ್ಸ್ ಸಹ ಕಾಂಗ್ರೆಸ್ ಭರವಸೆ ನೀಡಿದೆ. ಐಪಿಡಿ ಸಾಲಪ್ಪ ಭವನ ಸಹ ಬೆಂಗಳೂರಿನಲ್ಲಿ ಆರಂಭಿಸಲಾಗುತ್ತಿದೆ ಪೌರಕಾರ್ಮಿಕರು ಸದುಪಯೋಗ ಮಾಡಿಕೊಳ್ಳುವಂತೆ ಕೋರಿದರು. 

70 ರ ದಶಕದಲ್ಲಿ ಪೌರಕಾರ್ಮಿಕರನ್ನ ತೋಟಿ, ಜಾಡು ಎಂದು ಕರೆಯಲಾಗುತ್ತಿತ್ತು. ದೇವರಾಜ್ ಅರಸ್ ಅವರು ಐಪಿಡಿ ಸಾಲಪ್ಪನವರ ನೇತೃತ್ವದ ಕಮಿಟಿ ರಚಿಸಿ ಅವರ ಸಮಸ್ಯೆ ಬಗ್ಗೆ ವರದಿ ನೀಡಲಾಯಿತು ಆ ವರದಿಯಲ್ಲಿ ಸಾಲಪ್ಪನವರು ಪೌರಕಾರ್ಮಿಕರೆಂದು ಗುರುತಿಸಿದ್ದರು. ಇದರ ಜೊತೆ 36 ಬೇಡಿಕ ಈಡೇರಿಸುವಂತೆ ವರದಿ ನೀಡಿದರು ಎಂದರು.  

ಕಾರ್ಯಕ್ರಮದಲ್ಲಿ ಪಾಲಿಕೆ ಆಯುಕ್ತ ಮಾಯಣ್ಣ ಗೌಡ,  ಪೌರಕಾರ್ಮಿಕರ ಅಧ್ಯಕ್ಷ ಗೋವಿಂದ, ಸಚಿವ ಮಧು ಬಂಗಾರಪ್ಪನವರ ಪಿಎ ಶ್ರೀಪತಿ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಎಂಡಿ ರಾಘವೇಂದ್ರ, ಪ್ರಭಾಕರ್ ಉಪಸ್ಥಿತರಿದ್ದರು. 

Rahul Gandhi-Ashok Salappa inspires to provide insurance to civil servants 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close