SUDDILIVE || SHIVAMOGGA
ಮನೆಗಳಿಗೆ ಮಾತ್ರ ನುಗ್ಗಿಲ್ಲ, ದುಡಿಮೆಯನ್ನೇ ಕಸಿದುಕೊಂಡ ಮಳೆರಾಯ-The rains not only invaded homes, they also took away jobs
ಮಧ್ಯಾರಾತ್ರಿ ಸುರಿದ ಮಳೆ ಅಕ್ಷರಶಃ ಅನಾಹುತಗಳನ್ನ ಸೃಷ್ಠಿಸಿದೆ. ಶರಾವತಿ ನಗರದಲ್ಲಿ ಮನೆಗಳಿಗೆ ನುಗ್ಗಿ ನಿದ್ರೆ ಕೆಡಸಿದರೆ, ಆಲ್ಜೊಳದಲ್ಲಿ ಎಫ್ ಸಿಐ ಗೋದಾಮಿನ ಕಾಂಪೌಂಡ್ ಬಿದ್ದು ವಿದ್ಯುತ್ ಕಂಬ ಧರೆಗುರುಳಿದೆ.
ಇದರ ಜೊತೆಗೆ ಸುರೇಶ್ ಎಂಬುವರ ಟಾಟಾ ಏಸ್‌ವಾಹನ ಗೋಡೆಗಳು ಬಿದ್ದು ಹಾನಿಗೊಳಗಾಗಿದೆ. ಗೊಪಾಳದಲ್ಲಿಯೂ ಮನೆಗೆ ನೀರು ನುಗ್ಗಿದೆ. ಇದರಂತೆ ಸಣ್ಣಪುಟ್ಟ ಹಾನಿಗಳನ್ನ ಸೃಷ್ಠಿಸಿದ ವರುಣ ಮನುಷ್ಯರ ನಿದ್ದೆ ಕಸಿದಿದ್ದಾನೆ.
ಇದರ ಜೊತೆಗೆ ತಹಶೀಲ್ದಾರ್ ಕಚೇರಿ ಎದುರಿನ ಶೆಡ್ ರಾತ್ರಿ ಗುಡುಗು, ಮಿಂಚುಗಳೊಂದಿಗೆ ಸುರಿದ ಮಳೆಗೆ ಬಾಗಿ ಹೋಗಿದೆ. ಈ ಶೆಡ್ ನಲ್ಲಿ 10-15 ಜನ ಜೀವನೋಪಾಯಕ್ಕೆ ಮಾಡುತ್ತಿರುವ ಟೈಪ್ ರೈಟರ್ ಜೀವನ ಬೀದಿಗೆ ಬಿದ್ದಿದೆ.
2023 ಆಗಸ್ಟ್ ತಿಂಗಳಲ್ಲಿ ಮಹಾನಗರ ಪಲಿಕೆ ಸಾಮಾನ್ಯ ನಿಧಿಯ ಅಡಿಯಲ್ಲಿ 5.95 ಲಕ್ಷಕ್ಕೆ ಶೆಲ್ಟರ್ ನಿರ್ಮಿಸಲಾಗಿದೆ. ಗುರುಸಾಯಿ ಎಂಬ ಗುತ್ತಿಗೆದಾರರು ಈ ಶೆಲ್ಟರ್ ನಿರ್ಮಿಸಿದ್ದರು. ಒಂದೇ ತಿಂಗಳಲ್ಲಿ ಈ ಶೆಲದಟರ್ ನಿರ್ಮಾಣವಾಗಿತ್ತು. ಇದರಂತೆ ಮೂರು ಶೆಲ್ಟರ್ ಗಳು ನಿರ್ಮಿಸಲಾಗಿತ್ತು. ಅದರಲ್ಲಿ ಒಂದು ಶೆಲ್ಟರ್ ನ ಪೋಲುಗಳೆ ಬಾಗಿ ಗುಹೆಯಂತೆ ನಿರ್ಮಾಣವಾಗಿದೆ.
ಇಲ್ಲಿನ ಟೈಪ್ ರೈಟರ್ ಗಳ ದುಡಿಮೆಯನ್ನೇ ಕಸಿದುಕೊಳ್ಳುವಂತಾಗಿದೆ. ಶಾಸಕರು ಮತ್ತು ಪಾಲಿಕೆ ಆಯುಕ್ತರು ಹಾನಿಗೊಳಗಾದ ಶರಾವತಿ ನಗರಕ್ಕೆ ಭೇಟಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಅದರಂತೆ ಇಲ್ಲಿಯೂ ಗಮನ ಹರಿಸುವಂತೆ ಬಡ ಟೈಒರೈಟರ್ ಗಳ ಮನವಿಯಾಗಿದೆ.
The rains not only invaded homes, they also took away jobs


